2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಗೆ ಸಜ್ಜಾಗಿದೆ ಯುಎಇ

ಶಾರ್ಜಾ, ಜುಲೈ 17: ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿರುವ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಭಾರತದಲ್ಲಿ ನಡೆಯುವ ಬದಲು ದುಬೈನಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗುತ್ತಿದೆ.
ಭಾರತದ ಬದಲು ಯುಎಇಯಲ್ಲಿ ಈ ಬಾರಿಯ ಐಪಿಎಲ್ ನಡೆಸುವ ಸಾಧ್ಯತೆ ಹೆಚ್ಚಿರುವುದರಿಂದ ಟೂರ್ನಿ ನಡೆಸಲು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಒಂದು ವೇಳೆ ದುಬೈನಲ್ಲಿ ಟೂರ್ನಿ ನಡೆಸುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟವಾಗಬಹುದು ಎಂಬ ನಿರೀಕ್ಷೆಯಡಿಯಲ್ಲಿ ಸಿದ್ಧತೆಗಳಾಗುತ್ತಿವೆ ಎಂದು ದುಬೈಯ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮುಖ್ಯಸ್ಥ ಸಲ್ಮಾನ್ ಹನೀಫ್ ತಿಳಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಅನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸಲು ಬಿಸಿಸಿಐ ಯೋಚಿಸಿದೆ. ಆದರೆ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಸಲು ಉದ್ದೇಶಿಸಿರುವ ಟಿ20 ವಿಶ್ವಕಪ್ ರದ್ದಾಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಖಾತರಿಯಿಲ್ಲವಾದ್ದರಿಂದ ಐಪಿಎಲ್ ಅನ್ನು ಅಸ್ಥಿರತೆ ಕಾಡುತ್ತಿದೆ.
ಗಾಲ್ಫ್ ನ್ಯೂಸ್ ಜೊತೆ ಮಾತನಾಡಿದ ಹನೀಫ್, 'ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪಂದ್ಯಗಳಿಗೆ ಅವಕಾಶ ನೀಡಬೇಕಾದರೆ ಒಂಭತ್ತು ವಿಕೆಟ್‌ಗಳಿರುವ ಕ್ರೀಡಾಂಗಣ ನಮ್ಮಲ್ಲಿದೆ. ವಿಕೆಟ್‌ಗಳನ್ನು ಫ್ರೆಶ್ ಆಗಿ ಇಡುವುದಕ್ಕೋಸ್ಕರ ಅಲ್ಲಿ ನಾವು ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಇಟ್ಟುಕೊಂಡಿಲ್ಲ,' ಎಂದಿದ್ದಾರೆ. ಐಪಿಎಲ್ ಕಾರಣಕ್ಕಾಗಿ ಮೈದಾನಗಳನ್ನು ಮೀಸಲಿಡಲಾಗಿದೆ ಎಂಬರ್ಥದಲ್ಲಿ ಹನೀಫ್ ಮಾತನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications