ಆಟಗಾರರ ನಂತರ ಐಪಿಎಲ್‌ನಿಂದ ಹೊರ ನಡೆದ ಇಬ್ಬರು ಅಂಪಾಯರ್‌ಗಳು

ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಕೆಲ ಆಟಗಾರರು ಹೊರ ನಡೆದ ನಂತರ ಈಗ ಅಂಪಾಯರ್‌ಗಳ ಸರದಿ. ಭಾರತದಲ್ಲಿ ಹೆಚ್ಚಾಗಿರುವ ಕೊರೊನಾ ವೈರಸ್ ಪ್ರಕರಣಗಳ ಕಾರಣದಿಂದಾಗಿ ಇಬ್ಬರು ಅಂಪಾಯರ್‌ಗಳು ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ನಿತಿನ್ ಮೆನನ್ ಹಾಗೂ ಆಸ್ಟ್ರೇಲಿಯಾದ ಪೌಲ್ ರೈಫೆಲ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿದ ಅಂಪಾಯರ್‌ಗಳಾಗಿದ್ದಾರೆ. ಈ ಇಬ್ಬರು ಕೂಡ ಐಸಿಸಿಯ ಎಲೈಟ್ ಪ್ಯಾನೆಲ್‌ನ ಅಂಪಾಯರ್‌ಗಳಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಭಾರತದ ಇಂದೋರ್‌ನವರಾದ ನಿತಿನ್ ಮೆನನ್ ಅವರ ಕುಟುಂಬದಲ್ಲಿ ಕೊರೊನಾ ವೈಸರ್ ಕಾಣಿಸಿಕೊಂಡಿದೆ. ನಿತಿನ್ ಮೆನನ್ ಅವರ ತಾಯಿ ಹಾಗೂ ಪತ್ನಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಕುಟಂಬದೊಂದಿಗೆ ಇರಲು ಬಯಸಿದ್ದಾರೆ. ಇನ್ನು ಪೌಲ್ ರೈಫೆಲ್ ಆಸ್ಟ್ರೇಲಿಯಾ ಸರ್ಕಾರ ಆಸ್ಟ್ರೇಲಿಯಾಗೆ ವಿಮಾನ ಪ್ರಯಾಣ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಈ ಮೊದಲೇ ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದ ಆಟಗಾರ ಆಂಡ್ರೋ ಟೈ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡ 24 ಗಂಟೆಗಳ ಅಂತರದಲ್ಲಿ ಮತ್ತಿಬ್ಬರು ಆಸಿಸ್ ಮೂಲದ ಆರ್‌ಸಿಬಿ ತಂಡದ ಆಟಗಾರರಾದ ಕೇನ್ ರಿಚರ್ಡ್ಸನ್ ಹಾಗೂ ಆಡಂ ಜಂಪಾ ಇತ್ತೀಚೆಗೆ ತವರಿಗೆ ಮರಳುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಮೇ 15ರ ವರೆಗೆ ಭಾರತದಿಂದ ಆಸ್ಟ್ರೇಲಿಯಾಗೆ ಪ್ರಯಾಣಿಕರ ವಿಮಾನಗಳನ್ನು ನಿರ್ಬಂಧಿಸುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರದ ಕಾರಣದಿಂದಾಗಿ ಈ ಆಟಗಾರರು ತವರಿಗೆ ವಾಪಾಸಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications