ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಮ್ರಾನ್ ಮಲಿಕ್‌ನ ಭವಿಷ್ಯ ಈ ಮಾದರಿಯಲ್ಲಿದೆ ಎಂದ ವಾಸಿಮ್ ಜಾಫರ್

Umran Malik is more suited for ODIs than T20I said former cricketer Wasim Jaffer

ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಭರವಸೆ ಮೂಡಿಸಿರುವ ಆಟಗಾರ ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ಅದ್ಭುತ ಯಶಸ್ಸಿನಿಂದಾಗಿ ಟೀಮ್ ಇಂಡಿಯಾದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‌ನ ಬಳಿಕ ಏಕದಿನ ಮಾದರಿಗೂ ಉಮ್ರಾನ್ ಮಲಿಕ್ ಪದಾರ್ಪಣೆ ಮಾಡಿದ್ದು ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನ್ಯೂಜಿಲೆಂಡ್ ವಿರುದ್ಧ ಭಾರತ ಪಡೆದ ಮೂರು ವಿಕೆಟ್‌ಗಳ ಪೈಕಿ ಉಮ್ರಾನ್ ಎರಡು ವಿಕೆಟ್ ಕಿತ್ತಿರುವುದು ಗಮನಾರ್ಹಾ ಅಂಶ. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಸಂಘಟಿತ ಪ್ರದರ್ಶನ ನೀಡಲು ವಿಫಲವಾಗಿ ಸೋಲು ಅನುಭವಿಸಿದೆ.

ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಯುವ ವೇಗಿ ಉಮ್ರಾನ್ ಮಲಿಕ್ ಬಗ್ಗೆ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಉಮ್ರಾನ್ ಮಲಿಕ್ ಟಿ20 ಮಾದರಿಗಿಂತಲೂ ಏಕದಿನ ಮಾದರಿಗೆ ಹೆಚ್ಚು ಸೂಕ್ತವಾದ ಆಟಗಾರ ಎಂದು ಹೇಳಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ಜಾಫರ್ ಕಾರಣವನ್ನು ಕೂಡ ನೀಡಿದ್ದಾರೆ.

IND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿIND vs NZ: ಎರಡನೇ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ಜೀವಂತ, ಸಂಭಾವ್ಯ ಆಡುವ ಬಳಗ, ಪಿಚ್ ಮತ್ತು ಹವಾಮಾನ ವರದಿ

ಆಕ್ಲಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಉಮ್ರಾನನ್ ಮಲಿಕ್ 10 ಓವರ್‌ಗಳ ಬೌಲಿಂಗ್ ದಾಳಿಯನ್ನು ನಡೆಸಿ 66 ರನ್‌ಗಳನ್ನು ನೀಡಿ 2 ವಿಕೆಟ್ ಸಂಪಾದಿಸಿದರು.ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಮಲಿಕ್ ಕಿವೀಸ್ ಆಟಗಾರರಾದ ಡೆವೋನ್ ಕಾನ್ವೆ ಹಾಗೂ ಡ್ಯಾರೆಲ್ ಮಿಚೆಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಎರಡನೇ ಸ್ಪೆಲ್‌ನಲ್ಲಿ ಅವರು ದುಬಾರಿಯಾದರು. ಕೇನ್ ವಿಲಿಯಮ್ಸನ್ ಹಾಘೂ ಟಾಮ್ ಲ್ಯಾಥಮ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ನಂತರ ಟೀಮ್ ಇಂಡಿಯಾದ ಬೌಲರ್‌ಗಳು ಯಶಸ್ಸು ಪಡೆಯಲು ಸಾಧ್ಯವಾಗಲೇ ಇಲ್ಲ.

"ಆಟವು ದೊಡ್ಡದಾಗುತ್ತಿದ್ದಂತೆಯೇ ಬೌಲರ್‌ಗಳು ಹೆಚ್ಚಿ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ. ಇದು ನಿರಂತರವಾಗಿ ಕಲಿಯುತ್ತಾ ಸಾಗುವ ವಿಚಾರವಾಗಿದೆ. ಉಮ್ರಾನ್ ಮಲಿಕ್‌ಗೆ ಟಿ20ಗಿಂತ ಏಕದಿನ ಮಾದರಿ ಸೂಕ್ತವಾಗಿದೆ. ಐಪಿಎಲ್‌ನಲ್ಲಿ ನಾವು ಅವರ ಬೌಲಿಂಗ್ ಗಮನಿಸಿದ್ದೇವೆ. ಅವರು ಸರಿಯಾದ ಲೈನ್ ಮತ್ತು ಲೆಂತ್‌ಗಳಲ್ಲಿ ಬೌಲಿಂಗ್ ನಡೆಸಬೇಕಾದಾಗ ಮತ್ತು ಶಾರ್ಟ್ ಬಾಲ್ ಅನ್ನು ಬಳಸಬೇಕಾದಾಗ ಅವರಲ್ಲಿ ಹೆಚ್ಚಿನ ವೇರಿಯೇಶನ್ಸ್ ಇಲ್ಲ" ಎಂದು ವಾಸಿಂ ಜಾಫರ್ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ಮಾಹಿತಿ ನೀಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಾಸಿಮ್ ಜಾಫರ್ ಭಾರತದ ಮತ್ತೋರ್ವ ಯುವ ಬೌಲರ್ ಅರ್ಶ್‌ದೀಪ್ ಸಿಂಗ್ ಬಗ್ಗೆ ಕೂಡ ಮಾತನಾಡಿದ್ದಾರೆ. ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಅರ್ಶ್‌ದೀಪ್ ಸಿಂಗ್ 8.1 ಓವರ್‌ಗಳಲ್ಲಿ 68 ರನ್‌ಗಳನ್ನು ನೀಡಿದ್ದಾರೆ. "ಅರ್ಶದೀಪ್ ಓರ್ವ ಉತ್ತಮ ಗುಣಮಟ್ಟದ ಬೌಲರ್. ಅವರು ಪರಿಸ್ಥಿತಿಗೆ ತಕ್ಕನಾಗಿ ವೇಗವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದಿದ್ದಾರೆ ವಾಸಿಮ್ ಜಾಫರ್.

IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?IND vs NZ: ಹ್ಯಾಮಿಲ್ಟನ್‌ ಸವಾಲಿನಲ್ಲಿ ಗೆಲ್ಲುತ್ತಾ ಭಾರತ? ಇಲ್ಲಿ ಭಾರತ ಗೆದ್ದಿರುವ ಪಂದ್ಯಗಳೆಷ್ಟು ಗೊತ್ತಾ?

ಇನ್ನು ಇದೇ ಸಂದರ್ಭದಲ್ಲಿ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅನುಕೂಲಕರವಾಗಿ ಪಿಚ್ ವರ್ತಿಸಿತ್ತು ಎಂದಿದ್ದಾರೆ ವಾಸಿಮ್ ಜಾಫರ್. "ದ್ವಿತಿಯಾರ್ಧದಲ್ಲಿ ಪಿಚ್ ಉತ್ತಮವಾಗಿ ವರ್ಸಿಸುತ್ತಿತ್ತು. ದ್ವಿತಿಯಾರ್ಧದಲ್ಲಿ ಬ್ಯಾಟಿಂಗ್ ನಡೆಸುವಾಗ ಚೆಂಡು ನೇರವಾಗಿ ಬ್ಯಾಟ್‌ಗೆ ಬಂದಂತೆ ಮೊದಲಾರ್ಧದಲ್ಲಿ ಬರುತ್ತಿರಲಿಲ್ಲ. ಇನ್ನು ಕೇನ್ ವಿಲಿಯಮ್ಸನ್ ಹಾಗೂ ಲ್ಯಾಥಮ್ ಅದ್ಭುತವಾಗು ಬ್ಯಾಟಿಂಗ್ ನಡೆಸುತ್ತಿದ್ದರಿಂದಾಗಿ ಬೌಲರ್‌ಗಳಿಗೆ ಇದು ಸುಲಭವಾಗಿರಲಿಲ್ಲ" ಎಂದಿದ್ದಾರೆ ವಾಸಿಂ ಜಾಫರ್.

Story first published: Saturday, November 26, 2022, 17:24 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X