ಒಂದೇ ಓವರ್‌ನಲ್ಲಿ 6 ಸಿಕ್ಸ್ ಚಚ್ಚಿದ ಭಾರತ ಮೂಲದ ಯುಎಸ್‌ಎ ಕ್ರಿಕೆಟರ್!

ಪ್ಯಾರಿಸ್: ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಅಪರೂಪದ ದಾಖಲೆ ಪಟ್ಟಿಗೆ ಭಾರತ ಮೂಲದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ (ಯುಎಸ್‌ಎ) ಕ್ರಿಕೆಟರ್ ಜಸ್‌ಕರಣ್ ಮಲ್ಹೋತ್ರ ಸೇರಿಕೊಂಡಿದ್ದಾರೆ. ಗುರುವಾರ (ಸೆಪ್ಟೆಂಬರ್‌ 9) ಓಮನ್‌ನ ಅಲ್ ಅಮೆರತ್ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪಪುಆ ನ್ಯೂ ಗಿನಿಯಾ ವಿರುದ್ಧ ಮಲ್ಹೋತ್ರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.

ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!ಬಿಗ್‌ ಬಾಸ್ ಸ್ಪರ್ಧಿಯ ತಂಗಿಯ ಜೊತೆ ದೀಪಕ್ ಚಾಹರ್ ಡೇಟಿಂಗ್?!

ಪಂದ್ಯದಲ್ಲಿ ಯುಎಸ್‌ಎ ಪರ ಜಸ್‌ಕರಣ್ ಮಲ್ಹೋತ್ರ 124 ಎಸೆತಗಳಲ್ಲಿ ಅಜೇಯ 173 ರನ್ ಸಿಡಿಸಿದ್ದಾರೆ. ಇದರಲ್ಲಿ 16 ಸಿಕ್ಸರ್ ಮತ್ತು 4 ಫೋರ್‌ಗಳು ಸೇರಿದ್ದವು. ಉಳಿದಂತೆ ಯುಎಸ್‌ಎ ತಂಡದಲ್ಲಿ ಬೇರೆ ಆಟಗಾರರು ಬಾರಿಸಿದ ವೈಯಕ್ತಿಕ ಅತ್ಯಧಿಕ ರನ್ ಅಂದರೆ 22.

ಯುಎಸ್‌ಎ ಪರ ಚೊಚ್ಚಲ ಶತಕದ ದಾಖಲೆ ಬರೆದ ಮಲ್ಹೋತ್ರ

ಯುಎಸ್‌ಎ ಪರ ಚೊಚ್ಚಲ ಶತಕದ ದಾಖಲೆ ಬರೆದ ಮಲ್ಹೋತ್ರ

ಜಸ್‌ಕರಣ್ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಬಾರಿಸಿದ್ದು ಪಪುವಾ ನ್ಯೂ ಗಿನಿಯಾದ ವೇಗಿ ಗೌಡಿ ಟೋಕ ಓವರ್‌ನಲ್ಲಿ. ಅಷ್ಟೇ ಅಲ್ಲ, ಯುಎಸ್‌ಎ ಪರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಅಪರೂಪದ ದಾಖಲೆಗೂ ಮಲ್ಹೋತ್ರ ಕಾರಣರಾಗಿದ್ದಾರೆ. 2019ರಲ್ಲಷ್ಟೇ ಯುಎಸ್‌ಎಗೆ ಏಕದಿನ ಕ್ರಿಕೆಟ್ ಸ್ಥಾನಮಾನ ದೊರೆತಿತ್ತು. ಆ ಬಳಿಕ ಮೊದಲ ಬಾರಿಗೆ ಯುಎಸ್‌ಎ ಎರಡು ಪಂದ್ಯಗಳ ಏಕದಿನ ಸರಣಿ ಗೆದ್ದು ಮೈಲಿಗಲ್ಲು ಸ್ಥಾಪಿಸಿದೆ. ನ್ಯೂ ಗಿನಿಯಾ ವಿರುದ್ಧದ ಈ ಪಂದ್ಯದಲ್ಲಿ ಯುಎಸ್‌ಎ ಭರ್ಜರಿ 134 ರನ್‌ಗಳ ಜಯ ಗಳಿಸಿದೆ. ಆರಂಭಿಕ ಏಕದಿನದಲ್ಲಿ ಯುಎಸ್‌ಎ 6 ವಿಕೆಟ್‌ ಗೆಲುವನ್ನಾಚರಿಸಿತ್ತು. ಅಂಗ್ಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಮಲ್ಹೋತ್ರ ಪಾತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ ದಾಖಲೆಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ ದಾಖಲೆಗಳು

ಕಳೆದ ಮಾರ್ಚ್‌ನಲ್ಲಷ್ಟೇ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಆಡುವ ಕೀರನ್ ಪೊಲಾರ್ಡ್ ಸಿಕ್ಸ್ ಸಿಕ್ಸ್ ಬಾರಿಸಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆ ನಿರ್ಮಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ಸಿಕ್ಸ್ ಸಿಕ್ಸ್ ಬಾರಿಸಿದ್ದರು. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಭಾರತದ ಯುವರಾಜ್ ಸಿಂಗ್ ಈ ದಾಖಲೆ ನಿರ್ಮಿಸಿದ್ದರು. ಕೆಚ್ಚೆದೆಯ ಮಹಾರಾಜ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ ವೇಳೆ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿದ್ದು ಸಾರ್ವಕಾಲಿಕ ಶ್ರೇಷ್ಠ ಸ್ಫೋಟಕ ಬ್ಯಾಟಿಂಗ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಯುಎಸ್‌ಎ vs ಪಪುವ ನ್ಯೂ ನಿಗಿಯಾ ದ್ವಿತೀಯ ಏಕದಿನದ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಯುಎಸ್‌ಎ, ಸೌರಭ್ ನೇತ್ರಾವಲ್ಕರ್ 1, ಆರನ್ ಜೋನ್ಸ್ 22, ನಿಸರ್ಗ್ ಪಟೇಲ್ 20, ಮೊನಂಕ್ ಪಟೇಲ್ 2, ಸ್ಟೀವನ್ ಟೇಲರ್ 17, ಕರಿಮಾ ಗೋರ್ 3, ಅಭಿಷೇಕ್ ಪರಾಡ್ಕರ್ 2, ಸುಶಾಂತ್ ಮೋದಾನಿ 7, ನೋಸ್ತುಶ್ ಕೆಂಜಿಗೆ 6, ಜಸ್ದೀಪ್ ಸಿಂಗ್ 6, ಜಸ್ಕರಣ್ ಮಲ್ಹೋತ್ರ 173 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 271 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಪುವಾ ನ್ಯೂ ಗಿನಿಯಾ, ಟೋನಿ ಉರ 10, ಲೆಗ ಸಿಯಾಕ 30, ಚಾರ್ಲ್ಸ್ ಅಮಿನಿ 17, ಸೆಸೆ ಬವು 7, ಕಿಪ್ಲಿನ್ ಡೊರಿಗ 14, ಗೌಡಿ ಟೋಕ 10, ನೋರ್ಮನ್ ವನುವ 30, ಡೇಮಿಯೆನ್ ರಾವು 9 ರನ್‌ನೊಂದಿಗೆ 37.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 137 ರನ್ ಗಳಿಸಿತು. ಜಸ್‌ಕರಣ್ ಮಲ್ಹೊತ್ರ ಪಂದ್ಯಶ್ರೇಷ್ಠರೆನಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 23:49 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X