ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಷ್ಟ್ರೀಯ ಫುಟ್ಬಾಲ್ ತಂಡ ಬೆಂಬಲಿಸುವಂತೆ ಕೊಹ್ಲಿ ಕೋರಿಕೆ

Virat Kohli Asks Fans to Go Watch Indian football Team Play

ನವದೆಹಲಿ, ಜೂ. 3: ಫುಟ್ಬಾಲ್ ಮೈದಾನಕ್ಕೆ ಬನ್ನಿ, ರಾಷ್ಟ್ರೀಯ ತಂಡವನ್ನು ಬೆಂಬಲಿಸಿ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕ್ರೀಡಾಭಿಮಾನಿಗಳಲ್ಲಿ ಕೋರಿಕೊಂಡ ಬೆನ್ನಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರೂ ಛೆಟ್ರಿಗೆ ಧ್ವನಿ ಸೇರಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.

ಟ್ವಿಟರ್ ನಲ್ಲಿ ಸೆಲ್ಫೀ ವೀಡಿಯೋ ಹಾಕಿರುವ ಕೊಹ್ಲಿ, 'ನನ್ನ ಸ್ನೇಹಿತ, ಭಾರತ ಫುಟ್ಬಾಲ್ ತಂಡದ ನಾಯಕರೂ ಆಗಿರುವ ಸುನಿಲ್ ಛಟ್ರಿ ಮಾತನ್ನು ಕೇಳಿಸಿಕೊಳ್ಳಿ. ಕ್ರೀಡಾಭಿಮಾನಿಗಳೆಲ್ಲ ಫುಟ್ಬಾಲ್ ಮೈದಾನಕ್ಕೆ ಬನ್ನಿ. ನಮ್ಮ ರಾಷ್ಟ್ರೀಯ ತಂಡವನ್ನು ಬೆಂಬಲಿಸೋಣ' ಎಂದು ಕೋರಿಕೊಂಡಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಗಿರುವ ಮನ್ನಣೆ, ಅದಕ್ಕಿರುವ ಅಭಿಮಾನಿಗಳ ಸಂಖ್ಯೆ ಬೇರೆ ಆಟಗಳಿಗಿಲ್ಲ ಎನ್ನುವ ಸತ್ಯ ನಮಗೆ ಗೊತ್ತಿರುವಂಥದ್ದೇ. ಆದರೆ ಕೊಹ್ಲಿಯಂತ ನಿಜವಾದ ಕ್ರೀಡಾಸ್ಫೂರ್ತಿಯಿರುವ ಅಪ್ಪಟ ಕ್ರೀಡಾಭಿಮಾನಿಗಳಷ್ಟೇ ಎಲ್ಲಾ ಆಟಗಳನ್ನೂ ಬೆಂಬಲಿಸುತ್ತಾರೆ, ಕ್ರಿಕೆಟ್ ಆಟವನ್ನು ಸಂಭ್ರಮಿಸುವಷ್ಟೇ ಉಳಿದ ಆಟಗಳ ಆಟಗಾರರನ್ನೂ ಹುರಿದುಂಬಿಸುತ್ತಾರೆ. ಇದನ್ನೇ ಇಲ್ಲಿ ಕೊಹ್ಲಿ ಹೇಳಿದ್ದಾರೆ. ಎಲ್ಲಾ ಕ್ರೀಡೆಯನ್ನೂ ಬೆಂಬಲಿಸೋಣ ಎಂದು ಎಲ್ಲರಲ್ಲಿ ವಿನಂತಿಸಿಕೊಂಡಿದ್ದಾರೆ.

'ಕ್ರೀಡೆಯನ್ನು ಪ್ರೀತಿಸುವ ಎಲ್ಲರೂ ಫುಟ್ಬಾಲ್ ಮೈದಾನಕ್ಕೆ ತೆರಳಿ ನಮ್ಮ ರಾಷ್ಟ್ರೀಯ ತಂಡವನ್ನು ಹುರಿದುಂಬಿಸುವಂತೆ ನಾನು ವಿನಂತಿಸುತ್ತಿದ್ದೇನೆ. ಯಾಕೆಂದರೆ ಫುಟ್ಬಾಲ್ ಆಟಗಾರರೂ ಬೆವರುಹರಿಸುತ್ತಾರೆ. ಅವರಲ್ಲೂ ಪ್ರತಿಭಾನ್ವಿತರಿದ್ದಾರೆ. ಕಳೆದ ಸೀಸನ್ ಗಳನ್ನು ಗಮನಿಸಿದರೆ ನಮ್ಮ ಫುಟ್ಬಾಲ್ ತಂಡ ಉತ್ತಮ ಸಾಧನೆ ಮೆರೆಯುತ್ತಿದೆ. ಅವರನ್ನೂ ಬೆಂಬಲಿಸೋಣ' ಎಂದು ಕೊಹ್ಲಿ ಟ್ವಿಟರ್ ನಲ್ಲಿ ಪ್ರಕಟಿಸಿರುವ ವೀಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಕೊಹ್ಲಿಯ ಮಾತು ಅಪ್ಪಟ ಸತ್ಯ. ಕ್ರಿಕೆಟ್ ಗೆ ಹೋಲಿಸಿದರೆ ಫುಟ್ಬಾಲ್ ಹೆಚ್ಚು ಕಷ್ಟಕರ ಆಟ. ಹೆಚ್ಚು ಶಕ್ತಿ, ಶ್ರಮ, ಬೇಡುವ ಆಟ ಫುಟ್ಬಾಲ್ ಎನ್ನುವುದು ಫುಟ್ಬಾಲ್ ಮೈದಾನಕ್ಕಿಳಿದವರಿಗಷ್ಟೇ ಗೊತ್ತು. ಬೇಗ ನೋವು-ಗಾಯಗಳಿಗೆ ತುತ್ತಾಗುವ ಆಟವೂ ಫುಟ್ಬಾಲೆ. ನಮ್ಮ ದೇಶಕ್ಕೋಸ್ಕರ ಹೊಯ್ದಾಡುವ, ಭಾರತದ ಪ್ರತಿಷ್ಠೆ ಕಾಯಲು ಫುಟ್ಬಾಲ್ ಮೈದಾನದಲ್ಲಿ ಸೆಣಸಾಡುವ ಆಟಗಾರರನ್ನೂ ಹುರಿದುಂಬಿಸೋಣವೆ? ಕೊಹ್ಲಿ ಮಾತಿಗಾದರೂ ಬೆಲೆ ಕೊಟ್ಟು ಫುಟ್ಬಾಲ್ ಮೈದಾನ ಹೇಗಿದೆಯೆಂಬುದನ್ನು ಒಮ್ಮೆ ಕಣ್ಣಾರೆ ನೋಡಿ ಬರೋಣವೆ?

Story first published: Sunday, June 3, 2018, 16:38 [IST]
Other articles published on Jun 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X