ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ 3ನೇ ಕ್ರಮಾಂಕದಲ್ಲಿದ್ದರೆ ಅದ್ಭುತ ಆಟಗಾರ : ರಿಚರ್ಡ್ಸ್

By Kiran B Hegde

ಸಿಡ್ನಿ, ಜ. 24: ಟೀಂ ಇಂಡಿಯಾದ ಭರವಸೆದಾಯಕ ದಾಂಡಿಗ ಎಂದೇ ಹೆಸರು ಪಡೆದಿರುವ ವಿರಾಟ್ ಕೊಹ್ಲಿ ಹಲವು ಕಾರಣಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದಾರೆ. ಆದರೆ, ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟ್ ಪಟು ಸರಿ ವಿವ್ ರಿಚರ್ಡ್ಸ್ ಪ್ರಕಾರ ವಿರಾಟ್ ಕೊಹ್ಲಿ ಮೊದಲಿನ ಕ್ರಮಾಂಕದಲ್ಲಿಯೇ ಬ್ಯಾಟಿಂಗ್‌ಗೆ ಇಳಿಯಬೇಕೆಂದು ಇಚ್ಛಿಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಜೊತೆ ತ್ರಿಕೋನ ಸರಣಿ ಆಡುತ್ತಿರುವ ಭಾರತ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದೆ. ಆದರೆ, ಇಲ್ಲಿ ಕೊಹ್ಲಿ ವಿಫಲನಾಗಿದ್ದು ಕೇವಲ 9 ಮತ್ತು 4 ರನ್ ಮಾತ್ರ ಗಳಿಸಿದ್ದಾರೆ. ಆದ್ದರಿಂದ ಕೊಹ್ಲಿ ಕ್ರಮಾಂಕವೀಗ ಚರ್ಚೆಗೊಳಗಾಗಿದೆ.

ಆದರೆ, ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಈ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗೆ ಮಾಡುವುದರಿಂದ ಕೊಹ್ಲಿ ಪ್ರಥಮ ಅಥವಾ ದ್ವಿತೀಯ ಇನ್ನಿಂಗ್ಸ್ ಎರಡನ್ನೂ ಎದುರಿಸಬಲ್ಲ ಸಾಮರ್ಥ್ಯ ಗಳಿಸಿಕೊಳ್ಳುತ್ತಾರೆ ಎಂದಿದ್ದಾರೆ. [ಕೊಹ್ಲಿ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ]

kohli

ವಿವ್ ರಿಚರ್ಡ್ಸ್ ಹೇಳಿದ್ದೇನು?

"ಯಾವುದೇ ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ಗೆ ನಾಲ್ಕನೇ ಕ್ರಮಾಂಕ ಉತ್ತಮವಾದದ್ದು. ಆಸ್ಟ್ರೇಲಿಯಾದ ಪಿಚ್‌ನಲ್ಲಿ ಕೊಹ್ಲಿ ವಿಫಲರಾಗುತ್ತಿರುವ ಕಾರಣ ಕ್ರಮಾಂಕ ಬದಲಾವಣೆಗೆ ಯೋಚಿಸುವುದು ಒಳ್ಳೆಯದು". [ಭಾರತ ತಂಡಕ್ಕೆ ಪರಿಸರ ಪ್ರೇಮದ ಜರ್ಸಿ]

"ಕೊಹ್ಲಿ ಅತ್ಯಂತ ವೇಗವಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದಾರೆ. ನಾನು ಕೂಡ ಕೊಹ್ಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯ ಅಭಿಮಾನಿಯಾಗಿದ್ದೇನೆ. ಕೊಹ್ಲಿ ಅವರನ್ನು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಅವರಿಗೆ ಹೋಲಿಸಲಾಗುತ್ತಿದೆ."

"ಕೊಹ್ಲಿ, ಪಾಂಟಿಂಗ್ ಇಬ್ಬರೂ ಮೂರನೇ ಕ್ರಮಾಂಕದಲ್ಲಿ ಆಡಿ ಅದ್ಭುತ ಯಶಸ್ಸು ಗಳಿಸಿದವರು. ಆದ್ದರಿಂದ ತಂಡದ ಅತ್ಯುತ್ತ ದಾಂಡಿಗ ಯಾವತ್ತೂ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಆದರೆ, ತಂಡದ ಒಳಗಿನ ಸ್ಥಿತಿ ಗೊತ್ತಿಲ್ಲದೆ ಹೊರಗೆ ನಿಂತು ಮಾತನಾಡುವುದು ಕಷ್ಟವಾಗುತ್ತದೆ". [ಕೊಹ್ಲಿ ಬದುಕಲ್ಲಿ ಎಂದೂ ಮರೆಯದ ದಿನ]

vv

"ಕೊಹ್ಲಿ ಅವರು ಯಾವುದೇ ಕ್ರಮಾಂಕದಲ್ಲಿಯೂ ಆಡಿ ತಂಡವನ್ನು ಗೆಲ್ಲಿಸಬಲ್ಲರು. ಆದರೆ, ಉತ್ತಮ ದಾಂಡಿಗನೋರ್ವ ಹೆಚ್ಚು ಓವರ್‌ಗಳನ್ನು ಆಡಬೇಕು. ಈ ಸಂದರ್ಭ ದಾಂಡಿಗ ಕೂಡ ಪಂದ್ಯವನ್ನು ಸುಲಭವಾಗಿ ಎದುರಿಸುವಂತಾಗಬೇಕು."

"ಒಂದು ವೇಳೆ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಷ್ಟಪಟ್ಟರೆ ಅದು ತಂಡಕ್ಕೆ ಒಳ್ಳೆಯದೇ ಆಗಲಿದೆ. ಏಕೆಂದರೆ ನನ್ನ ಪ್ರಕಾರ ವಿರಾಟ್ ಕೊಹ್ಲಿ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ". [ಭಾರತ ಮತ್ತೆ ವಿಶ್ವಕಪ್ ಗೆಲ್ಲುತ್ತೆ]

"ಶಿಖರ್ ಧವನ್ ಕೂಡ ಆಕ್ರಮಣಕಾರಿ ಆಟಗಾರ. ರೋಹಿತ್ ಶರ್ಮಾ ಇದ್ದರೆ ಭಾರತ ತಂಡ ಅತ್ಯುತ್ತಮವಾಗುತ್ತದೆ" ಎಂದು ವಿವ್ ರಿಚರ್ಡ್ಸ್ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X