ಅನುಷ್ಕಾ ಶರ್ಮಾರನ್ನು ಮೊದಲು ಭೇಟಿಯಾದ ಕ್ಷಣದ ಕುರಿತು ಹಂಚಿಕೊಂಡ ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಗೌರವ ಸ್ಥಾನ ಮತ್ತು ಹಿಂಬಾಲಕರನ್ನು ಹೊಂದಿರುವಂತಹ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಯಾವುದಾದರೂ ಫೋಟೊ ಅಥವಾ ವಿಡಿಯೋಗಳನ್ನು ಹಂಚಿಕೊಂಡರೆ ಸಾಕು ಅವುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ, ಅಷ್ಟರ ಮಟ್ಟಿಗಿನ ಅನುಯಾಯಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಮತ್ತು ವಿರಾಟ್ ದಂಪತಿ ಹೊಂದಿದ್ದಾರೆ.

ಭಾರತ vs ಇಂಗ್ಲೆಂಡ್: ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳುಭಾರತ vs ಇಂಗ್ಲೆಂಡ್: ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು

ಹೀಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರೀತಿಸಿ ಮದುವೆಯಾದದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಯಾವ ಕ್ಷಣದಲ್ಲಿ ಮೊದಲು ಭೇಟಿಯಾದರು ಹಾಗೂ ಅವರಿಬ್ಬರ ಪರಿಚಯ ಹೇಗೆ ಶುರುವಾಯ್ತು ಎಂಬುದನ್ನು ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಈ ಕುತೂಹಲಕಾರಿ ಅಂಶದ ಕುರಿತು ವಿರಾಟ್ ಕೊಹ್ಲಿ ಮಾತನಾಡಿದ್ದು ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ತಾವು ಮೊದಲು ಎಲ್ಲಿ ಭೇಟಿ ಮಾಡಿದರು ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಜೋ ರೂಟ್ ಹೊಸ ದಾಖಲೆ, ಸ್ಯಾಮ್ ಕರನ್ ಹೊಸ ಮೈಲಿಗಲ್ಲು!ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಜೋ ರೂಟ್ ಹೊಸ ದಾಖಲೆ, ಸ್ಯಾಮ್ ಕರನ್ ಹೊಸ ಮೈಲಿಗಲ್ಲು!

ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾರನ್ನು ಮೊದಲು ಭೇಟಿಯಾದದ್ದು ಒಂದು ಕಮರ್ಷಿಯಲ್ ಜಾಹೀರಾತಿನ ಮೂಲಕವಂತೆ. ಹೌದು ಕಮರ್ಷಿಯಲ್ ಜಾಹೀರಾತೊಂದರ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪರಸ್ಪರ ಭೇಟಿಯಾಗಿದ್ದರಂತೆ. ವಿರಾಟ್ ಕೊಹ್ಲಿ ಯಾವಾಗಲೂ ಜೋಕ್ ಹೇಳುವ ಮೂಲಕ ಸುತ್ತಮುತ್ತಲವರನ್ನು ನಗಿಸುತ್ತಾ ಇರುವಂತಹ ಗುಣವನ್ನು ಹೊಂದಿರುವ ವ್ಯಕ್ತಿ. ಹೀಗೆ ಅನುಷ್ಕಾ ಶರ್ಮಾರನ್ನು ಭೇಟಿಯಾದ ಸಂದರ್ಭದಲ್ಲಿಯೂ ವಿರಾಟ್ ಕೊಹ್ಲಿ ಆಕೆಯ ಜೊತೆ ಮಾತನಾಡುವಾಗ ಕೆಲವೊಂದಷ್ಟು ಜೋಕ್ ಹೇಳುತ್ತಾ ಇದ್ದರಂತೆ. ವಿರಾಟ್ ಕೊಹ್ಲಿ ಮಾಡುತ್ತಿದ್ದ ಈ ಜೋಕ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದ ಅನುಷ್ಕಾ ಶರ್ಮಾ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರು ನನ್ನನ್ನು ಜೋಕ್ ಮಾಡಿ ನಗಿಸುತ್ತಿದ್ದಾರೆ ಎಂದು ವಿರಾಟ್ ಕೊಹ್ಲಿಗೆ ಹೇಳಿದ್ದರಂತೆ.

ಹೀಗೆ ಜಾಹೀರಾತೊಂದರ ಚಿತ್ರೀಕರಣದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೇಳುತ್ತಿದ್ದ ಜೋಕ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದ ಅನುಷ್ಕಾ ಶರ್ಮಾ ಸಮಯ ಕಳೆದಂತೆ ವಿರಾಟ್ ಕೊಹ್ಲಿ ಜೊತೆ ಸ್ನೇಹಿತೆಯಾದರಂತೆ. ಹೀಗೆ ವಿರಾಟ್ ಕೊಹ್ಲಿ ತಮ್ಮ ಮತ್ತು ಅನುಷ್ಕಾ ಶರ್ಮಾ ನಡುವೆ ನಡೆದ ಪರಿಚಯದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಎರಡನೇ ದಿನ ಮಳೆ ಅಡ್ಡಿಯಿರುತ್ತಾ? ಇಲ್ಲಿದೆ ಹವಾಮಾನ ವರದಿಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಎರಡನೇ ದಿನ ಮಳೆ ಅಡ್ಡಿಯಿರುತ್ತಾ? ಇಲ್ಲಿದೆ ಹವಾಮಾನ ವರದಿ

ಇನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ದಂಪತಿ ಇಂಗ್ಲೆಂಡ್‌ನಲ್ಲಿನ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಸದ್ಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಆಗಸ್ಟ್ 4ರ ಬುಧವಾರದಿಂದ ಈ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಒಳ್ಳೆಯ ಆರಂಭವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಸರಣಿಯನ್ನು ಗೆಲ್ಲುವುದರ ಮೂಲಕ ವಿರಾಟ್ ಕೊಹ್ಲಿ ಪಡೆ ಟೆಸ್ಟ್ ಕ್ರಿಕೆಟ್‍ನಲ್ಲಿ ಗೆಲುವಿನ ಹಾದಿಗೆ ಮರಳುವ ಯತ್ನದಲ್ಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, August 5, 2021, 16:43 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X