24,000 ರನ್‌ ಪೂರೈಸಿದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ 7ನೇ ಬ್ಯಾಟರ್

ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವುದರ ಜೊತೆಗೆ ಅನೇಕ ದಾಖಲೆಗಳನ್ನ ತನ್ನ ಹೆಸರಿಗೆ ದಾಖಲಿಸಿದ್ದಾರೆ. ಅಫ್ಘಾನಿಸ್ತಾನ ಚೊಚ್ಚಲ ಟಿ20 ಶತಕ ಸಿಡಿಸಿದ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತಷ್ಟು ಸಾಧನೆಗಳ ಮೈಲಿಗಲ್ಲು ತಲುಪಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಒಟ್ಟಾರೆ ಆರನೇ ಶತಕ ದಾಖಲಿಸಿದ ಕೊಹ್ಲಿಗೆ ಇದು ಮೊದಲ ಟಿ20 ಅಂತರಾಷ್ಟ್ರೀಯ ಶತಕವಾಗಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಈಗಾಗಲೇ 70 ಶತಕಗಳನ್ನ ದಾಖಲಿಸಿದ್ದ ವಿರಾಟ್‌ ಇದೊಂದು ಫಾರ್ಮೆಟ್‌ನಲ್ಲಿ ಶತಕ ಸಿಡಿಸಲು ಸಾಧ್ಯವಾಗಿರ್ಲಿಲ್ಲ. ಆದ್ರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆ ಸಾಧನೆಯ ಮೆಟ್ಟಿಲನ್ನು ಹತ್ತಿರುವುದರ ಜೊತೆಗೆ ಮತ್ತೊಂದು ಅಮೋಘ ಸಾಧನೆ ಮಾಡಿದ್ದಾರೆ.

24,000 ಗಡಿ ದಾಟಿದ ವಿರಾಟ್ ಕೊಹ್ಲಿ

24,000 ಗಡಿ ದಾಟಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,000 ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಳನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಟ್ಟಾರೆ ಮೂರು ಫಾರ್ಮೆಟ್‌ನಿಂದ 468 ಪಂದ್ಯಗಳು 522 ಇನ್ನಿಂಗ್ಸ್‌ಗಳಲ್ಲಿ 53.81ರ ಬ್ಯಾಟಿಂಗ್ ಸರಾಸರಿಯಲ್ಲಿ ವಿರಾಟ್ ಕೊಹ್ಲಿ 24,002 ರನ್ ದಾಖಲಿಸಿದ್ದಾರೆ. ಇದರಲ್ಲಿ 71 ಶತಕ ಹಾಗೂ 124 ಅರ್ಧಶತಕಗಳು ಒಳಗೊಂಡಿವೆ. ಇಷ್ಟಲ್ಲದೆ ಕೊಹ್ಲಿ 76 ಬಾರಿ ಅಜೇಯರಾಗಿ ಉಳಿದ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಅಂತರಾಷ್ಟ್ರೀಯ ಸಚಿನ್ ತೆಂಡೂಲ್ಕರ್‌ಗೆ ಅಗ್ರಪಟ್ಟ

ಅತಿ ಹೆಚ್ಚು ಅಂತರಾಷ್ಟ್ರೀಯ ಸಚಿನ್ ತೆಂಡೂಲ್ಕರ್‌ಗೆ ಅಗ್ರಪಟ್ಟ

ಇನ್ನು ಕೊಹ್ಲಿ ಮೊದಲು ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಕುಮಾರ ಸಂಗಕ್ಕಾರ, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಜಾಕ್ವೆಸ್ ಕಾಲಿಸ್, ರಾಹುಲ್ ದ್ರಾವಿಡ್ 24 ಗಡಿದಾಟಿರುವ ಸಾಧನೆ ಮಾಡಿದ್ದಾರೆ. ಅದ್ರಲ್ಲೂ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಅಗ್ರ ಪಟ್ಟ ಅಲಂಕರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಒಟ್ಟಾರೆ 664 ಪಂದ್ಯ 782 ಇನ್ನಿಂಗ್ಸ್‌ಗಳಲ್ಲಿ 48.52ರ ಸರಾಸರಿಯಲ್ಲಿ 34,357 ರನ್ ಕಲೆಹಾಕಿದ್ದಾರೆ. ಇದರಲ್ಲಿ 100 ಶತಕ, 164 ಅರ್ಧಶತಕ ಒಳಗೊಂಡಿದ್ದು, 74 ಬಾರಿ ಔಟಾಗದೇ ಉಳಿದಿದ್ದಾರೆ.

ಸಚಿನ್ ನಂತರದ ಸ್ಥಾನದಲ್ಲಿ ಕುಮಾರ ಸಂಗಕ್ಕಾರ 594 ಪಂದ್ಯ 666 ಇನ್ನಿಂಗ್ಸ್‌ಗಳಲ್ಲಿ 46.77 ರ ಸರಾಸರಿಯಲ್ಲಿ 28,016 ರನ್ ಕಲೆಹಾಕಿದ್ದಾರೆ. ಜೊತೆಗೆ 63 ಶತಕ ಮತ್ತು 153 ಅರ್ಧಶತಕಗಳು ಒಳಗೊಂಡಿವೆ. ಇನ್ನು ರಿಕಿ ಪಾಂಟಿಂಗ್ 560 ಪಂದ್ಯಗಳಲ್ಲಿ 45.95 ರ ಸರಾಸರಿಯಲ್ಲಿ 27,483 ರನ್, ಮಹೇಲಾ ಜಯವರ್ಧನೆ 652 ಪಂದ್ಯಗಳಲ್ಲಿ 25,957 ರನ್, ಜಾಕ್ವೆಸ್ ಕಾಲಿಸ್ 519 ಪಂದ್ಯಗಳಲ್ಲಿ 25,534 ರನ್, ರಾಹುಲ್ ದ್ರಾವಿಡ್ 509 ಪಂದ್ಯಗಳಲ್ಲಿ 24,208 ರನ್ ಸಿಡಿಸಿದ್ದಾರೆ.

3 ವರ್ಷಗಳಾದ್ಮೇಲೆ Virat Kohli ಸೆಂಚುರಿ ನೋಡಿ ಸೋಶಿಯಲ್ ಮೀಡಿಯಾದ ರಿಯಾಕ್ಷನ್ ಹೇಗಿತ್ತು? | *Cricket | OneIndia
ಅತಿ ಹೆಚ್ಚು 50+ ರನ್ ದಾಖಲಿಸಿರುವ ಟೀಂ ಇಂಡಿಯಾದ 2ನೇ ಬ್ಯಾಟರ್

ಅತಿ ಹೆಚ್ಚು 50+ ರನ್ ದಾಖಲಿಸಿರುವ ಟೀಂ ಇಂಡಿಯಾದ 2ನೇ ಬ್ಯಾಟರ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಭಾರತಕ್ಕಾಗಿ 50 ಕ್ಕೂ ಹೆಚ್ಚು ರನ್ ಗಳಿಸಿದ ವಿಚಾರದಲ್ಲಿ, ಕೊಹ್ಲಿ ಇತ್ತೀಚೆಗಷ್ಟೇ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕಗಳನ್ನು ಹೊಂದಿದ್ದಾರೆ, ಅಲ್ಲದೆ 195 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈಗ ಸಚಿನ್ ಬಳಿಕ ನಂತರದ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಮಾತ್ರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, September 9, 2022, 23:17 [IST]
Other articles published on Sep 9, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X