
ಎರಡನೇ ಎಸತಕ್ಕೇ ವಿಕೆಟ್ ಒಪ್ಪಿಸಿದ ಕೊಹ್ಲಿ
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹತ್ತನೇ ಬಾರಿಗೆ ಡಕ್‌ಔಟ್ ಆಗಿದ್ದಾರೆ. ತಾನು ಎದುರಿಸಿದ ಎರಡನೇ ಎಸೆತದ ಗತಿಯನ್ನು ಗುರುತಿಸಲು ಸಾಧ್ಯವಾಗದೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ನಿರಾಸೆ ಅನುಭವಿಸಿದರು. ಬಾಂಗ್ಲಾ ಯುವ ವೇಗಿ ಅಬು ಜಾಯೇದ್ ಕೊಹ್ಲಿಯನ್ನು ಸೊನ್ನೆಗೆ ಕೆಡವಿ ಸಂಭ್ರಮಿಸಿದರು.

140 ಇನ್ನಿಂಗ್ಸ್10 ಡಕ್‌ಔಟ್
ಆದರೆ 83 ಟೆಸ್ಟ್ ಪಂದ್ಯಗಳಲ್ಲಿ 140 ಇನ್ನಿಂಗ್ಸ್ ಆಡಿರುವ ಕೊಹ್ಲಿ ಸೊನ್ನೆಗೆ ಔಟಾಗಿರೋದು ಕೇವಲ ಹತ್ತು ಬಾರಿ ಮಾತ್ರ. ಇದಕ್ಕೂ ಮುನ್ನ ಇದೇ ವರ್ಷದ ಆಗಸ್ಟ್‌ನಲ್ಲಿ ಕೊಹ್ಲಿ ವೆಸ್ಟ್‌ಇಂಡಿಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದರು.

ಹತ್ತು ಡಕ್‌ಔಟ್‌ಗಳಲ್ಲಿ ನಾಲ್ಕು ಗೋಲ್ಡನ್‌ಡಕ್
ಕೊಹ್ಲಿ ಔಟಾಗಿರುವ ಹತ್ತು ಡಕ್‌ಔಟ್‌ಗಳಲ್ಲಿ ನಾಲ್ಕು ಗೋಲ್ಡನ್‌ಡಕ್ ಆಗಿದೆ. ಅಂದರೆ ತಾನೆದುರಿಸಿದ ಮೊದಲ ಎಸತದಲ್ಲಿಯೇ ಔಟಾಗುವುದು. ಅವುಗಳ ಮಾಹಿತಿ ಕೆಳಗಿದೆ.
2011 ಡಿಸೆಂಬರ್‌ನಲ್ಲಿ ಆಸ್ಟ್ರೆಲಿಯಾ ವಿರುದ್ಧ ಮೆಲ್ಬೋರ್ನ್ ಪಂದ್ಯ
2014 ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ ಪಂದ್ಯ
2018 ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಓವಲ್ ಪಂದ್ಯ
2019 ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕಿಂಗ್‌ಸ್ಟನ್ ಪಂದ್ಯ

ವಿರಾಟ್‌ಕೊಹ್ಲಿಯ ಇನ್ನುಳಿದ ಆರು ಡಕ್‌ಔಟ್‌ಗಳು ಈ ಕೆಳಗಿನಂತಿವೆ:
2011ರ ಜೂನ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಬ್ರಿಜ್‌ಟೌನ್ ಪಂದ್ಯ
2014ರ ಆಗಸ್ಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮ್ಯಾಂಚೆಸ್ಟರ್ ಪಂದ್ಯ
2017ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪುಣೆ ಪಂದ್ಯ
2018ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಪಂದ್ಯ
2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಇಂದೋರ್ ಪಂದ್ಯ

ಕೊಹ್ಲಿ ಎಡವಿರೊದೆ ವಿರಳ
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಎಡವಿರುವ ಅತಿ ಕಡಿಮೆ ಸನ್ನಿವೇಶಗಳು ಇದು ಅನ್ನೋದು ಗಮನಿಸಬೇಕಿದೆ.


Click it and Unblock the Notifications












