ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಆತ ರವೀಂದ್ರ ಜಡೇಜಾ ಸ್ಥಾನವನ್ನು ಆಕ್ರಮಿಸಿಕೊಳ್ಳಬಲ್ಲ ಆಟಗಾರ"

Washington Sundar can challenge or replace Ravindra Jadeja in the Test says Mark Butcher

ಆಲ್‌ರೌಂಡರ್ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಪ್ರಮುಖ ಆಲ್‌ರೌಂಡರ್ ಆಟಗಾರ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಹಾಗೂ ಅದ್ಭುತವಾದ ಫೀಲ್ಡಿಂಗ್ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಗಾಯಗೊಂಡ ಕಾರಣ ಜಡೇಜಾ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಗಾಯದ ಕಾರಣದಿಂದ ವಿಶ್ರಾಂತಿ ಪಡೆಯುತ್ತಿರುವ ಜಡೇಜಾ ಸ್ಥಾನ ಈಗ ಅಲುಗಾಡುತ್ತಿದೆಯಾ. ಅದ್ಭುತ ಫಾರ್ಮ್‌ನಲ್ಲಿದ್ದರೂ ಜಡೇಜಾ ಸ್ಥಾನವನ್ನು ಆ ಓರ್ವ ಆಟಗಾರ ತುಂಬ ಬಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ಬ್ಯಾಟ್ಸ್‌ಮನ್ ಹೇಳಿದ್ದಾರೆ.

ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಲು ತಂಡಕ್ಕೆ ಸೇರಿಕೊಂಡ ಆಟಗಾರ ವಾಶಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಗಿದ್ದಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲೂ ಬ್ಯಾಟ್ ಮೂಲಕ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀಗಾಗಿ ವಾಶಿಂಗ್ಟನ್ ಸುಂದರ್ ರವೀಂದ್ರ ಜಡೇಜಾಗೆ ಸವಾಲೆಸೆಯಬಲ್ಲ ಅಥವಾ ಅವರ ಸ್ಥಾನವನ್ನು ಆಕ್ರಮಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟರ್ ಮಾರ್ಕ್ ಬಚರ್ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಕುತ್ತಿಗೆ ಹಿಡಿದಿದ್ದೇಕೆ?: ವಿಡಿಯೋಮೊಹಮ್ಮದ್ ಸಿರಾಜ್ ಕುಲದೀಪ್ ಯಾದವ್ ಕುತ್ತಿಗೆ ಹಿಡಿದಿದ್ದೇಕೆ?: ವಿಡಿಯೋ

ಆಸಿಸ್ ಬಳಿಕ ಇಂಗ್ಲೆಂಡ್ ವಿರುದ್ಧ ಪ್ರದರ್ಶನ

ಆಸಿಸ್ ಬಳಿಕ ಇಂಗ್ಲೆಂಡ್ ವಿರುದ್ಧ ಪ್ರದರ್ಶನ

ವಾಶಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ತಂಡ ಸಂಕಷ್ಟದಲ್ಲಿದ್ದಾಗ ಅತ್ಯಂತ ನಿರ್ಣಾಯಕ ಪ್ರದರ್ಶನವನ್ನು ನಿಡಿದ್ದರು. ಶಾರ್ದೂಲ್ ಠಾಕೂರ್ ಜೊತೆ ಸೇರಿ ಶತಕದ ಜೊತೆಯಾಟವಾಡಿದ ಸುಂದರ್ ಮೊದಲ ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದರು. ಈಗ ಇಂಗ್ಲೆಂಡ್ ಈ ಪ್ರದರ್ಶನದ ನಂತರ ಇಂಗ್ಲೆಂಡ್ ವಿರುದ್ಧದ ಸರಣಿಗೂ ಆಯ್ಕೆಯಾದ ಸುಂದರ್ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 85 ರನ್‌ಗಳ ಅಜೇಯ ಕೊಡುಗೆಯನ್ನು ನೀಡಿ ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು.

ಮೂರು ಇನ್ನಿಂಗ್ಸ್‌ನಲ್ಲಿ ಎರಡು ಅರ್ಧ ಶತಕ

ಮೂರು ಇನ್ನಿಂಗ್ಸ್‌ನಲ್ಲಿ ಎರಡು ಅರ್ಧ ಶತಕ

ವಾಶಿಂಗ್ಟನ್ ಸುಂದರ್ ತಾನು ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧ ಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಎರಡು ಅರ್ಧ ಶತಕಗಳು ಕೂಡ ತಂಡ ಸಂಕಷ್ಟದ ಸಂದರ್ಭದಲ್ಲಿದ್ದಾ ಬಂದಿದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಹೀಗಾಗಿ ವಾಶಿಂಗ್ಟನ್ ಸುಂದರ್ ಬ್ಯಾಟಿಂಗ್ ಬಗ್ಗೆ ದಿಗ್ಗಜ ಆಟಗಾರರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಆತನೋರ್ವ ಅದ್ಭುತ ಆಟಗಾರ

ಆತನೋರ್ವ ಅದ್ಭುತ ಆಟಗಾರ

"ವಾಶಿಂಗ್ಟನ್ ಸುಂದರ್ ಓರ್ವ ಅದ್ಭುತವಾದ ಆಟಗಾರ. ಆತ ತನ್ನ ಬೌಲಿಂಗ್‌ನ ಕಾರಣದಿಂದ ಆಯ್ಕೆಯಾಗಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾನೆ ಎಂಬುದು ಅರಿವಿಲ್ಲದಿದ್ದರೆ ಆತನೋರ್ವ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ನೀವು ಹೇಳುತ್ತೀರಿ. ಜಾಕ್ ಲೀ್ ಬೌಲಿಂಗ್‌ಗೆ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದರು. ಅದು ಇನ್ನಿಂಗ್ಸ್‌ನ ಟ್ರೇಡ್ ಮಾರ್ಕ್ ಆಗಿದೆ. ಆತನೋರ್ವ ತುಂಬಾ ಪ್ರತಿಭಾವಂತ ಆಟಗಾರ" ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾರ್ಕ್ ಬಚರ್ ಹೇಳಿದ್ದಾರೆ.

ದಿನದ ಸುಂದರ ಶಾಟ್ ಬಾರಿಸಿದ ಸುಂದರ್

ದಿನದ ಸುಂದರ ಶಾಟ್ ಬಾರಿಸಿದ ಸುಂದರ್

"ಡಾಮ್ ಬೆಸ್ ಅವರ ದುರ್ಬಲ ಎಸೆತಗಳನ್ನು ಸುಲಭವಾಗಿ ಸುಂದರ್ ದಂಡಿಸುತ್ತಿದ್ದರು. ವಿಕೆಟ್‌ನಿಂದ ಆಚೆ ಬಂದ ಎಸೆತಗಳನ್ನು ಅವರು ಬಿಡುತ್ತಲೇ ಇರಲಿಲ್ಲ. ಡಾಮ್ ಬೆಸ್ ಬಳಲಿದಂತೆ ಕಂಡು ಬಂದಿದ್ದರು. ಜೋಫ್ರಾ ಆರ್ಚರ್ ಎಸೆತಕ್ಕೆ ಸುಂದರವಾಗಿ ಬಾರಿಸಿದ ಡ್ರೈವ್ ದಿನದ ಅತ್ಯುತ್ತಮ ಶಾಟ್ ಆಗಿತ್ತು" ಎಂದು ವಾಶಿಂಗ್ಟನ್ ಸುಂದರ್ ಪ್ರದರ್ಶನದ ಬಗ್ಗೆ ಮಾರ್ಕ್ ಬಚರ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

Story first published: Monday, February 8, 2021, 22:19 [IST]
Other articles published on Feb 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X