ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ ಐಯ್ಯರ್‌ಗೆ ಯಾವ ಹಂತದಲ್ಲಿಯೂ ಸಹಾಯಕ್ಕೆ ನಾವಿದ್ದೇವೆ: ಡೆಲ್ಲಿ ಫ್ರಾಂಚೈಸಿ

We will always be there for any assistance Shreyas may require: Delhi Capitals

ಇಂಡಿಯನ್ ಪ್ರೀಮಿಯರ್ ಲೀಗ್‌ನ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ಶ್ರೇಯಸ್ ಐಯ್ಯರ್‌ಗೆ ಶೀಘ್ರ ಚೇತರಿಕೆಗೆ ಹಾರೈಸಿ ಭಾವುಕ ಟ್ವೀಟ್‌ವೊಂದನ್ನು ಹಂಚಿಕೊಂಡಿದೆ. ಭುಜದ ಗಾಯಕ್ಕೆ ತುತ್ತಾದ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಆದರೆ ನಿಮ್ಮೊಂದಿಗೆ ಯಾವ ಸಂದರ್ಭದಲ್ಲೂ ನಾವಿದ್ದೇವೆ ಶ್ರೇಯಸ್ ಎನ್ನುವ ಮೂಲಕ ಧೈರ್ಯ ತುಂಬಿದೆ.

"ಡೆಲ್ಲಿ ತಂಡದ ನಾಯಕನಾಗಿ ಶ್ರೇಯಸ್ ಐಯ್ಯರ್ ಜವಾಬ್ಧಾರಿ ವಹಿಸಿಕೊಂಡ ನಂತರ ಹಿಂದೆಂದೂ ತಲುಪದ ಎತ್ತರಕ್ಕೆ ಏರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಪ್ರಥಮ ಬಾರಿಗೆ ಫೈನಲ್‌ಗೆ ತಲುಪಿದ್ದರು. ಯಾವುದೇ ಹಂತದಲ್ಲಿ ಆತನಿಗೆ ಅಗತ್ಯವಿರುವ ಯಾವುದೇ ಸಹಾಯ ಮತ್ತು ಬೆಂಬಲಕ್ಕಾಗಿ ಫ್ರಾಂಚೈಸಿ ಯಾವಾಗಲೂ ಇರುತ್ತದೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟ್ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ

ಶೀಘ್ರ ಚೇತರಿಕೆ ಕಾಣಲಿ

ಶೀಘ್ರ ಚೇತರಿಕೆ ಕಾಣಲಿ

"ಶ್ರೇಯಸ್ ಅಪಾರವಾಗಿ ಮಿಸ್ ಮಾಡಿಕೊಳ್ಳಲಿದ್ದಾರೆ, ಆತ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ತಮಡದ ಜರ್ಸಿಯನ್ನು ತೊಡುವುದನ್ನು ನೋಡಲು ನಮ್ಮಿಂದ ಕಾಯಲು ಸಾಧ್ಯವಿಲ್ಲ. ಆತ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

ಡೆಲ್ಲಿಗೆ ರಿಷಭ್ ನಾಯಕ

ಡೆಲ್ಲಿಗೆ ರಿಷಭ್ ನಾಯಕ

ಈ ಬಾರಿಯ ಐಪಿಎಲ್‌ಗೆ ಸಂಪೂರ್ಣವಾಗಿ ಶ್ರೇಯಸ್ ಐಯ್ಯರ್ ಅಲಭ್ಯರಾಗಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ನೂತನ ನಾಯಕನನ್ನು ಘೋಷಿಸಿದೆ. ಶ್ರೇಯಸ್ ಅಲಭ್ಯತೆಯಲ್ಲಿ ಯುವ ಆಟಗಾರ ರಿಷಬ್ ಪಂತ್ ಡೆಲ್ಲಿ ಕ್ಯಾಪಟಿಲ್ಸ್ ತಂಡವನ್ನು ಮುನ್ನಡೆಸುವ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಮುಂಬೈಗೆ ತಲುಪಿದ ಡೆಲ್ಲಿ ಸದಸ್ಯರು

ಮುಂಬೈಗೆ ತಲುಪಿದ ಡೆಲ್ಲಿ ಸದಸ್ಯರು

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಹುತೇಕ ಸದಸ್ಯರು ಈಗಾಗಲೇ ಮುಂಬೈಯನ್ನು ಸೇರಿಕೊಂಡಿದ್ದು ಹೋಟೆಲ್ ಕ್ವಾರಂಟೈನ್ ಪೂರೈಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಮೊದಲ ಕಾದಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು ಏಪ್ರಿಲ್ 10 ರಂದು ಪಂದ್ಯ ನಡೆಯಲಿದೆ.

Story first published: Wednesday, March 31, 2021, 21:41 [IST]
Other articles published on Mar 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X