ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5ನೇ ಟೆಸ್ಟ್ ಗೆ ಭಾರತ ತಂಡ ಸೇರಿಕೊಂಡರಲ್ಲ, ಯಾರೀ ಹನುಮ ವಿಹಾರಿ?

India v/s England Test cricket : ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡ ಹನುಮ ವಿಹಾರಿ
Who is Hanuma Vihari? Know all about Indias latest Test cricketer

ಲಂಡನ್, ಸೆಪ್ಟೆಂಬರ್ 7: ಭಾರತ vs ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಯುವ ಆಟಗಾರ ಹನುಮ ವಿಹಾರಿ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ವಿಹಾರಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 292ನೇ ಆಟಗಾರ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಬಿಸಿಸಿಐಗೆ ಛೀಮಾರಿ, ಮಯಾಂಕ್ ತಂಡದಲ್ಲಿ ಏಕಿಲ್ಲ? ಹರ್ಭಜನ್ ಪ್ರಶ್ನೆಬಿಸಿಸಿಐಗೆ ಛೀಮಾರಿ, ಮಯಾಂಕ್ ತಂಡದಲ್ಲಿ ಏಕಿಲ್ಲ? ಹರ್ಭಜನ್ ಪ್ರಶ್ನೆ

ಲಂಡನ್ ನ ಕೆನ್ನಿಂಗ್ಟನ್ ನಲ್ಲಿನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಹನುಮ ವಿಹಾರಿ ಟೀಮ್ ಇಂಡಿಯಾಕ್ಕೆ ಸೇರಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ವಿಹಾರಿಗೆ ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡಿದ್ದಾಗಿದೆ.

ಭಾರತದಲ್ಲಿ ಅನುಭವಿ ಮತ್ತು ಘಟಾನುಘಟಿ ಯುವ ಕ್ರಿಕೆಟ್ ಆಟಗಾರರ ಸಮೂಹವೇ ಇರುವಾಗ ಟೀಮ್ ಇಂಡಿಯಾದಲ್ಲಿ ಹನುಮ ವಿಹಾರಿಗೆ ಸ್ಥಾನ ದೊರೆತಿದೆ. ಹಾಗಾದರೆ 'ಯಾರೀ ಹನುಮ ವಿಹಾರಿ' ಅನ್ನೋ ಪ್ರಶ್ನೆಯ ಬೆಂಬತ್ತುವ ಕ್ರಿಕೆಟ್ ಕುತೂಹಲಿಗರಿಗಾಗಿ ಇಲ್ಲೊಂದಿಷ್ಟು ಮಾಹಿತಿಗಳಿವೆ.

ವಿಶ್ವ ನಂ. 1 ಸರಾಸರಿ ಸಾಧನೆ

ವಿಶ್ವ ನಂ. 1 ಸರಾಸರಿ ಸಾಧನೆ

ಬ್ಯಾಟ್ಸ್ಮನ್ ಮತ್ತು ಸಾಂದರ್ಭಿಕವಾಗಿ ಆಫ್ ಸ್ಪಿನ್ ಬೌಲಿಂಗ್ ಕೂಡ ಎಸೆಯುವ ಹನುಮ ವಿಹಾರಿ ಈ ಮೊದಲು ಭಾರತ ಅಂಡರ್ -19 ತಂಡದ ಸದಸ್ಯ. ಅದ್ಭುತ ಪ್ರದರ್ಶನ ತೋರಿರುವ ವಿಹಾರಿ ದೇಸಿ ಕ್ರಿಕೆಟ್ ನಲ್ಲಿ 59.79 ರನ್ ಸರಾಸರಿ ಹೊಂದಿದ್ದಾರೆ. ಈಗಿರುವ ಆಟಗಾರರನ್ನು ಪರಿಗಣಿಸಿದರೆ ವಿಶ್ವ ಮಟ್ಟದಲ್ಲಿ ಸ್ಟೀವ್ ಸ್ಮಿತ್ ಅವರು ದೇಸೀ ಕ್ರಿಕೆಟ್ ನಲ್ಲಿ ದ್ವಿತೀಯ ಸ್ಥಾನದ ಸರಾಸರಿ (57.27) ಹೊಂದಿದ್ದಾರೆ.

ಮಯಾಂಕ್ ಹಿಂದಿಕ್ಕಿದ ಹನುಮ

ಮಯಾಂಕ್ ಹಿಂದಿಕ್ಕಿದ ಹನುಮ

5ನೇ ಟೆಸ್ಟ್ ಗೆ ವಿಹಾರಿ ಆಯ್ಕೆ ಆದಾಗ ಕ್ರೀಡಾವಲಯದಲ್ಲಿ ಸಾಕಷ್ಟು ಮಂದಿ ಹುಬ್ಬೇರಿಸಿದ್ದರು. ಕಾರಣ ಮಯಾಂಕ್ ಅಗರ್ವಾಲ್ ಬದಲು ವಿಹಾರಿ ರೇಸ್ ಗೆದ್ದಿದ್ದರು. ಸಾಧನೆ ಪರಿಗಣಿಸಿದರೂ ವಿಹಾರಿಯೇ ಮುಂದೆ ನಿಲ್ಲುತ್ತಾರೆ. ಮಯಾಂಕ್ 2017-18ರ ದೇಸಿ ಕ್ರಿಕೆಟ್ ಸೀಸನ್ ನಲ್ಲಿ 2000 ರನ್ ಸಾಧನೆ ಹೊಂದಿದ್ದರೆ ಹನುಮ ಅವರು ಕೇವಲ 94 ಪಂದ್ಯಗಳಲ್ಲಿ 752 ರನ್ ಸಾಧನೆ ಮಾಡಿದ್ದಾರೆ.

ಹೆಚ್ಚು ಗಮನ ಸೆಳೆದಿದ್ದು

ಹೆಚ್ಚು ಗಮನ ಸೆಳೆದಿದ್ದು

ದೇಶೀಯ ಕ್ರಿಕೆಟ್ ನಲ್ಲಿ ಆಂಧ್ರ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಹನುಮ ವಿಹಾರಿ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕನೇ ದಿನದಾಟದಲ್ಲಿ 148 ರನ್ ಪೇರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದು ಹೆಚ್ಚು ಗಮನ ಸೆಳೆದಿತ್ತು.

ಸವಾಲಿಗೆ ಸಜ್ಜಾಗಿದ್ದೇನೆ

ಸವಾಲಿಗೆ ಸಜ್ಜಾಗಿದ್ದೇನೆ

'ನನಗೂ ಮತ್ತು ನನ್ನ ಕುಟುಂಬಕ್ಕೂ ಅತ್ಯಪೂರ್ವ ಕ್ಷಣವಿದು. ದೇಸೀ ಕ್ರಿಕೆಟ್ ನಲ್ಲಿ ನಾನು ಕಳೆದ ಕೆಲವು ವರ್ಷ ಚೆನ್ನಾಗಿ ಆಡಿದ್ದೆ. ಆದ್ರೆ ಟೀಮ್ ಇಂಡಿಯಾಕ್ಕೆಇಷ್ಟು ಬೇಗ ನನ್ನ ಕರೆಯುತ್ತಾರೆಂದು ಅಂದುಕೊಂಡಿರಲಿಲ್ಲ. ನಾನು ಸವಾಲು ಸ್ವೀಕರಿಸಲು ಸಜ್ಜಾಗಿದ್ದೇನೆ' ಎಂದು ಗದೆ ಹನುಮ ವಿಹಾರಿ ಅವರು ವಿರಾಟ್ ಕೊಹ್ಲಿಯಿಂದ ಕ್ಯಾಪ್ ಯೀಸಿಕೊಳ್ಳುತ್ತಾ ಸಂತಸ ವ್ಯಕ್ತಪಡಿಸಿದರು.

Story first published: Friday, September 7, 2018, 18:30 [IST]
Other articles published on Sep 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X