ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಲೆಳೆದ ನೇಥನ್ ಲಿಯಾನ್

ಸಿಡ್ನಿ, ಏಪ್ರಿಲ್ 14: ಪ್ರೇಕ್ಷಕರಿಂದ ತುಂಬಿದ ಮೈದಾನದಲ್ಲಿ, ಕ್ರಿಕೆಟ್ ಅಭಿಮಾನಿಗಳ ಕೇಕೆ-ಗದ್ದಲದ ಮಧ್ಯೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿದ್ದರೆ ಅವರ ವರ್ತನೆಯೇ ವಿಭಿನ್ನವಾಗಿರುತ್ತದೆ. ಸದ್ದು-ಗದ್ದಲದ ಮೈದಾನದ ಮಧ್ಯೆ ನಿಂತ ಕೊಹ್ಲಿ ಅಷ್ಟೇ ಅಪಾಯಕಾರಿ ಬ್ಯಾಟ್ಸ್‌ಮನ್ ಆಗಿ ಬದಲಾಗೋದೂ ಹೌದು.
ಕೊಹ್ಲಿ ಒಂದುವೇಳೆ ಒಬ್ಬನೇ ಒಬ್ಬ ಪ್ರೇಕ್ಷಕನಿಲ್ಲದ ಮೈದಾನದ ಮಧ್ಯೆ ನಿಂತು ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದರೆ ಹೇಗಿರುತ್ತದೆ? ಇಂಥದ್ದೊಂದು ಗಮ್ಮತ್ತಿನ ಟಾಪಿಕ್ ಅನ್ನು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲಿಯಾನ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಕಿದಕಿದ್ದಾರೆ.
ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದರಲ್ಲಿದೆ. ಆದರೆ ಕೊರೊನಾವೈರಸ್ ಸೋಂಕಿನ ಕಾರಣ ಸರಣಿ ಒಂದೋ ರದ್ದಾಗಬಹುದು, ಇಲ್ಲವೆ ಪ್ರೇಕ್ಷಕರೇ ಇಲ್ಲದ ಮೈದಾನದಲ್ಲಿ ನಡೆಯಬಹುದು. ಇದೇ ಕಾರಣಕ್ಕೆ ಲಿಯಾನ್ ಮತ್ತು ಸ್ಟಾರ್ಕ್, ಪ್ರೇಕ್ಷಕರಿಲ್ಲದ ಮೈದಾನದಲ್ಲಿನ ಕೊಹ್ಲಿಯ ಟಾಪಿಕ್ ಅನ್ನು ಚರ್ಚೆಗೆ ಎತ್ತಿಕೊಂಡಿದ್ದು.
ಕೊಹ್ಲಿ ಬಗ್ಗೆ ಚರ್ಚೆ ನಡೆಸುತ್ತ ಲಿಯಾನ್, 'ಇಂಥ ಸಂದರ್ಭಗಳು ಎದುರಾದಾಗ ಅದಕ್ಕೆ ಕೊಹ್ಲಿ ಅಡ್ಜಸ್ಟ್ ಆಗಬಲ್ಲರು. ಆದರೆ ಬೇರೆ ದಿನ ನಾನು ಸ್ಟಾರ್ಕ್ ಜೊತೆ ಮಾತನಾಡುವಾಗ, ಒಂದು ವೇಳೆ ಕೊಹ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಆಡುತ್ತಿರುವಾಗ ನೋಡೋಕೆ ಸಖತ್ ಮಜ ಅನ್ನಿಸಬಹುದು ಎಂದು ನಕ್ಕಿದ್ದೆ,' ಎಂದು ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡುತ್ತ ನೇಥನ್ ಹೇಳಿದ್ದಾರೆ.
'ಖಾಲಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಆಡೋದನ್ನು ಊಹಿಸಿಕೊಳ್ಳೋದೇ ಗಮ್ಮತ್ತು ಅನ್ನಿಸುತ್ತೆ. ಎಲ್ಲಾ ಆಟಗಾರರಿಗೂ ಇಂಥ ಪರಿಸ್ಥಿತಿ ವಿಭಿನ್ನವೇ. ಆದರೆ ಕೊಹ್ಲಿ ಒಬ್ಬ ಸೂಪರ್ ಸ್ಟಾರ್. ಅವರು ಅಂಥ ಸಂದರ್ಭಗಳಲ್ಲಿ ಆಡೋಕೆ ಬೇಗನೆ ಹೊಂದಿಕೊಳ್ಳುತ್ತಾರೆ,' ಎಂದು ನೇಥನ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications