ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಐಪಿಎಲ್ 2021' ಮತ್ತೆ ನಡೆಯುತ್ತಾ?: ಇಲ್ಲಿದೆ ಸಂಪೂರ್ಣ ಮಾಹಿತಿ

Will IPL 2021 Played Later? Here is the complete detail

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ರದ್ದುಗೊಳಿಸಿದೆ. ನಾಲ್ಕು ಫ್ರಾಂಚೈಸಿಗಳಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಮಂಗಳವಾರ (ಮೇ 3) ಬಿಸಿಸಿಐ ಈ ಬಾರಿಯ ಐಪಿಎಲ್‌ ಅನ್ನು ರದ್ದು ಗೊಳಿಸಿರುವುದಾಗಿ ತಿಳಿಸಿದೆ.

ಐಪಿಎಲ್ ರದ್ದಾಯಿತು ; ಟಿ ಟ್ವೆಂಟಿ ವಿಶ್ವಕಪ್ ಕೂಡ ಅನುಮಾನ!ಐಪಿಎಲ್ ರದ್ದಾಯಿತು ; ಟಿ ಟ್ವೆಂಟಿ ವಿಶ್ವಕಪ್ ಕೂಡ ಅನುಮಾನ!

ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಾಗೆ ಕೊರೊನಾ ಸೋಂಕು ತಗುಲಿರುವುದು ಕಾಣಿಸಿತ್ತು.

ಕೋವಿಡ್-19 ದ್ವಿತೀಯ ಅಲೆಗೆ ನಲುಗಿ ಭಾರತದ ನಗದು ಶ್ರೀಮಂತ ಟೂರ್ನಿ ಐಪಿಎಲ್ ರದ್ದಾಗಿರುವುದು ನಿಜ. ಆದರೆ ಈ ಬಾರಿಯ ಸೀಸನ್ ಮುಂದೆ ನಡೆಯೋದೇ ಇಲ್ವಾ? ನಡೆಯಲೂಬಹುದು, ನಡೆಯದಿರಲೂಬಹುದು. ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸದ್ಯಕ್ಕೆ ಐಪಿಎಲ್ ರದ್ದುಗೊಳಿಸಿದ್ದೇವೆ ಎಂದು ಬಿಸಿಸಿಐ ಹೇಳಿದೆಯಷ್ಟೇ.

ಐಪಿಎಲ್ 2021: ಆಸ್ಟ್ರೇಲಿಯಾ ಪ್ರಧಾನಿ ನಿರ್ಧಾರಕ್ಕೆ ಕೆಂಡಕಾರಿದ ಆಸಿಸ್ ಕಾಮೆಂಟೇಟರ್ಐಪಿಎಲ್ 2021: ಆಸ್ಟ್ರೇಲಿಯಾ ಪ್ರಧಾನಿ ನಿರ್ಧಾರಕ್ಕೆ ಕೆಂಡಕಾರಿದ ಆಸಿಸ್ ಕಾಮೆಂಟೇಟರ್

ಐಪಿಎಲ್ 2021ರ ಆವೃತ್ತಿ ರದ್ದಾಗಿರುವುದಾಗಿ ತಿಳಿಸುವಾಗ ಬಿಸಿಸಿಐ, 'ಸದ್ಯಕ್ಕೆ ನಾವು 2021ರ ಐಪಿಎಲ್ ಅನ್ನು ರದ್ದುಗೊಳಿಸುತ್ತಿದ್ದೇವೆ. ಮುಂದೆ ಹೊಸ ವೇಳಾಪಟ್ಟಿಯತ್ತ ಕಾರ್ಯೋನ್ಮುಖರಾಗಲಿದ್ದೇವೆ. ಸದ್ಯಕ್ಕಂತೂ ಅನಿರ್ಧಿಷ್ಟಾವಧಿಗೆ ಐಪಿಎಲ್ ರದ್ದಾಗಿದೆ,' ಎಂದು ಹೇಳಿತ್ತು. ಇದರರ್ಥ ಕೊರೊನಾ ಪ್ರಕರಣಗಳು ತಗ್ಗಿದ ಮೇಲೆ ಹೊಸ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮುಂದಿನ ಪಂದ್ಯಗಳು ನಡೆದರೂ ನಡೆಯಬಹುದು.

Story first published: Tuesday, May 4, 2021, 15:07 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X