ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅನನುಭವಿ ವಿಂಡೀಸ್ ತಂಡ ಪ್ರಕಟ

By Mahesh
India V/S west indies Test series : ವೆಸ್ಟ್ ಇಂಡೀಸ್ ತಂಡ ಪ್ರಕಟ | Oneindia Kannada
Windies recall Warrican and Ambris for Two test series against India

ಬೆಂಗಳೂರು, ಆಗಸ್ಟ್ 31: ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ವಿಂಡೀಸ್ ತಂಡದಲ್ಲಿ ಅನನುಭವಿಗಳೇ ತುಂಬಿದ್ದು, ಜಾಸನ್ ಹೋಲ್ಡರ್ ನಾಯಕರಾಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್​ 4-8 ತನಕ ರಾಜಕೋಟ್​ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 12 -16 ರವರೆಗೂ ಹೈದರಾಬಾದ್​ನಲ್ಲಿ ಆಯೋಜನೆಗೊಂಡಿದೆ.

ವಿಂಡೀಸ್ ತಂಡಕ್ಕೆ ಆರಂಭಿಕ ಆಟಗಾರ ಸುನೀಲ್ ಎಂಬ್ರಿಸ್ ಮತ್ತೆ ಸೇರಿದ್ದಾರೆ. ಕಳೆದ ವರ್ಷ ನ್ಯೂಜಿಲೆಂಡ್ ಸರಣಿಯಲ್ಲಿ ಗೋಲ್ಡನ್ ಡಕ್ ಗಳಿಸಿ, ನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಸುನೀಲ್ ಅಲ್ಲದೆ ಎಡಗೈ ಸ್ಪಿನ್ನರ್ ಜೊಮೆಲ್ ವಾರಿಕನ್ ಕೂಡಾ ತಂಡ ಸೇರಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಸರಣಿ ಡ್ರಾ, ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ಸಾಧಿಸಿರುವ ವಿಂಡೀಸ್ ತಂಡವು ಈಗ ಭಾರತದಲ್ಲಿ ವಿಜಯದ ನಿರೀಕ್ಷೆಯಲ್ಲಿದೆ.

ವೆಸ್ಟ್​ ಇಂಡೀಸ್ ತಂಡ : ಜೇಸನ್ ಹೋಲ್ಡರ್​( ನಾಯಕ) ಸುನೀಲ್​ ಎಂಬ್ರಿಸ್​, ದೇವೇಂದ್ರ ಬಿಶೋ, ಕ್ರೇಗ್​ ಬ್ರಥ್​ ವೈಟ್​, ರೋಸ್ಟನ್​ ಚೇಸ್​, ಶೇನ್​ ಡ್ರೋವಿಚ್​, ಶಾನೊನ್​ ಗ್ರಾಬ್ರಿಯಲ್​ , ಜಹ್ಮಾರ್​ ಹಾಮಿಲ್ಟನ್​, ಶಿಮ್ರೋನ್​ ಹೆಟ್ಮೈರ್​, ಶಾಯ್​​ ಹೋಪ್, ಅಲ್ಹಾರಿ ಜೋಸೆಫ್​, ಕಿಮೋ ಪಾಲ್​, ಕಿರಾನ್​ ಪೊವೆಲ್​, ಕೇಮರ್​ ರೋಚ್​, ಜೊಮೆಲ್​ ವಾರಿಕಾನ್.

ಸೆಪ್ಟೆಂಬರ್ 26ರಂದು ಭಾರತಕ್ಕೆ ಬರಲಿರುವ ವೆಸ್ಟ್ ಇಂಡೀಸ್ ತಂಡವು, ಎರಡು ಟೆಸ್ಟ್ ಪಂದ್ಯಗಳಲ್ಲದೆ, ಭಾರತ ಹಾಗೂ ವೆಸ್ಟ್​ ಇಂಡೀಸ್ ಗಳು​ ಐದು ಏಕದಿನ ಹಾಗೂ ಎರಡು ಟಿ-20 ಪಂದ್ಯಗಳನ್ನು ಆಡಲಿವೆ.

ವೇಳಾಪಟ್ಟಿ ಇಂತಿದೆ
* ಮೊದಲ ಟೆಸ್ಟ್​ ಪಂದ್ಯ: ಅಕ್ಟೋಬರ್​ 4-8: ಸೌರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್,​ ರಾಜ್​ಕೋಟ್
* ಎರಡನೇ ಟೆಸ್ಟ್​ ಪಂದ್ಯ: ಅಕ್ಟೋಬರ್​ 12-16: ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್​
* ಮೊದಲ ಏಕದಿನ ಪಂದ್ಯ, ಅಕ್ಟೋಬರ್​ 21: ಗುವಾಹಟಿ
* ಎರಡನೇ ಏಕದಿನ ಪಂದ್ಯ, ಅಕ್ಟೋಬರ್​ 24 : ಇಂದೋರ್
* ಮೂರನೇ ಏಕದಿನ ಪಂದ್ಯ, ಅಕ್ಟೋಬರ್​ 27: ಪುಣೆ
* ನಾಲ್ಕನೇ ಏಕದಿನ ಪಂದ್ಯ, ಅಕ್ಟೋಬರ್​ 29: ಮುಂಬೈ
* ಐದನೇ ಏಕದಿನ ಪಂದ್ಯ, ನವೆಂಬರ್​ 1: ತಿರುವನಂತಪುರಂ

* ಮೊದಲ ಟಿ20 ಪಂದ್ಯ, ನವೆಂಬರ್​ 6 : ಲಕ್ನೋ/ಕಾನ್ಪುರ್​
* ಎರಡನೇ ಟಿ20 ಪಂದ್ಯ, ನವೆಂಬರ್​ 11 : ಚೆನ್ನೈ

1948ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ 94 ಟೆಸ್ಟ್ ಪಂದ್ಯಗಳನ್ನಾಡಿದ್ದು, ವೆಸ್ಟ್ ಇಂಡೀಸ್ 30ರಲ್ಲಿ ಗೆಲುವು, 28ರಲ್ಲಿ ಸೋಲು ಹಾಗೂ 48ರಲ್ಲಿ ಡ್ರಾ ಸಾಧಿಸಿದೆ.

Story first published: Friday, August 31, 2018, 10:09 [IST]
Other articles published on Aug 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X