ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್.ರಾಹುಲ್ ಗೆ ನ್ಯೂಜಿಲ್ಯಾಂಡ್ ನಲ್ಲಿ ಹುಡುಕಿಕೊಂಡು ಬಂದ ಅದೃಷ್ಟದ ಬಾಗಿಲು

With Virat Kohli Taken Rest, Rohit Sharma Injured, It Is KL Rahul Leading The Team

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐದು ಮ್ಯಾಚಿನ ಟಿ20 ಸರಣಿ ಮುಕ್ತಾಯಗೊಂಡಿದೆ. ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ, ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಕೊನೆಯ ಪಂದ್ಯದಲ್ಲಿ ಭಾರತ ತಂಡದಲ್ಲಿ ಕೆಲುವು ಬದಲಾವಣೆಗಳಾಗಿದ್ದವು. ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರಿಂದ, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರು.

ಭರ್ಜರಿ ಫಾರ್ಮ್‌ನಲ್ಲಿ ಕೆ.ಎಲ್ ರಾಹುಲ್: ಕೊಹ್ಲಿ ದಾಖಲೆ ಮುರಿದ ಕನ್ನಡಿಗಭರ್ಜರಿ ಫಾರ್ಮ್‌ನಲ್ಲಿ ಕೆ.ಎಲ್ ರಾಹುಲ್: ಕೊಹ್ಲಿ ದಾಖಲೆ ಮುರಿದ ಕನ್ನಡಿಗ

ಓಪನರ್ ಆಗಿ ಬ್ಯಾಟ್ ಮಾಡುವ ರೋಹಿತ್ ಶರ್ಮಾ ಐದನೇ ಪಂದ್ಯದಲ್ಲಿ ಒನ್ ಡೌನ್ ಆಟಗಾರರಾಗಿ ಕಣಕ್ಕಿಳಿದರು. ಕೆ.ಎಲ್. ರಾಹುಲ್ ಗೆ ಸಾಥ್ ಆಗಿ ಕೇರಳದ ಯುವ ಸಂಜು ಸ್ಯಾಮ್ಸನ್ ಗೆ ಇನ್ನೊಂದು ಚಾನ್ಸ್ ಅನ್ನು ನೀಡಲಾಗಿತ್ತು. ಆದರೆ, ಅವರು ಮತ್ತೆ ವಿಫಲರಾದರು.

ಭಾರತ vs ಕೀವಿಸ್ ಅಂತಿಮ ಪಂದ್ಯ : ಭರ್ಜರಿಯಾಗಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾಭಾರತ vs ಕೀವಿಸ್ ಅಂತಿಮ ಪಂದ್ಯ : ಭರ್ಜರಿಯಾಗಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

ಸರಣಿಯುದ್ದಕ್ಕೂ ಭರ್ಜರಿ ಫಾರಂನಲ್ಲಿರುವ ಕೆ.ಎಲ್.ರಾಹುಲ್ ಗೆ ಐದನೇ/ಕೊನೆಯ ಟಿ20 ಪಂದ್ಯದಲ್ಲಿ ಇನ್ನೊಂದು ಅದೃಷ್ಟ ಒಲಿದು ಬಂದಿತ್ತು. ಇದು, ಎಲ್ಲಾ ಕ್ರಿಕೆಟಿಗರ ಕನಸಿನ ಮೈಲಿಗಲ್ಲು, ಮುಂದೆ ಓದಿ..

ಸಂಜು ಸ್ಯಾಮ್ಸನ್ ಮತ್ತೆ ವಿಫಲ

ಸಂಜು ಸ್ಯಾಮ್ಸನ್ ಮತ್ತೆ ವಿಫಲ

ರಾಹುಲ್ ಜೊತೆ ಓಪನರ್ ಆಗಿ ಬಂದ ಸಂಜು ಸ್ಯಾಮ್ಸನ್ ಎರಡನೇ ಓವರ್ ನಲ್ಲೇ ಪೆವಲಿಯನ್ ಸೇರಿದರು. ಒನ್ ಡೌನ್ ಆಗಿ ಬಂದ, ಹಂಗಾಮಿ ನಾಯಕ ರೋಹಿತ್ ಶರ್ಮಾ ಮತ್ತು ರಾಹುಲ್, ತಮ್ಮ ಎಂದಿನ ಬ್ಯಾಟಿಂಗ್ ಪ್ರದರ್ಶಿಸಿ, ಸ್ಕೋರ್ ಬೋರ್ಡ್ ಒಂದೇ ಸಮನೆ ಏರುವಂತೆ ಮಾಡಿದರು.

ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್

ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್

ಉತ್ತಮವಾಗಿ ಆಡುತ್ತಿದ್ದ ರಾಹುಲ್ (33 ಬಾಲ್ 45 ರನ್) ಹನ್ನೆರಡನೇ ಓವರ್ ನಲ್ಲಿ ಬೆನ್ನೆಟ್ ಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ನಡುವೆ ಉತ್ತಮ ಜೊತೆಯಾಟ ಮುಂದುವರಿಯಿತು. ಈ ನಡುವೆ, ಹದಿನೇಳನೇ ಓವರ್ ನಲ್ಲಿ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆಗಿ ಗ್ರೌಂಡ್ ಬಿಟ್ಟು ತೆರಳಿದರು.

ರಾಹುಲ್ ಹಂಗಾಮಿ ನಾಯಕ

ರಾಹುಲ್ ಹಂಗಾಮಿ ನಾಯಕ

ನ್ಯೂಜಿಲ್ಯಾಂಡ್ ಚೇಸಿಂಗ್ ವೇಳೆಯೂ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯಲಾಗಲಿಲ್ಲ. ಅತ್ತ ನಾಯಕ ವಿರಾಟ್ ಕೊಹ್ಲಿ ಕೂಡಾ ಇಲ್ಲ, ಇತ್ತ ರೋಹಿತ್ ಶರ್ಮಾ ಕೂಡಾ ಇಲ್ಲ. ತುರ್ತಾಗಿ ಮೀಟಿಂಗ್ ಮಾಡಿದ ನಂತರ ತಂಡವನ್ನು ಮುನ್ನಡೆಸಲು ಕೆ.ಎಲ್. ರಾಹುಲ್ ಗೆ ಸೂಚಿಸಲಾಯಿತು. ಅಲ್ಲಿಗೆ ನಾಯಕನಾಗಬೇಕು ಎನ್ನುವ ಕನಸು ಎಲ್ಲಾ ಕ್ರಿಕೆಟಿಗರಿಗೂ ಇರುತ್ತದೆ, ಆದರೆ, ರಾಹುಲ್ ಗೆ ಈ ಹುದ್ದೆ ಹುಡುಕಿಕೊಂಡು ಬಂತು.

ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್

ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್

ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಮೊದಲ ಓವರ್ ಬೌಲ್ ಮಾಡಲು ವಾಷಿಂಗ್ಟನ್ ಸುಂದರ್ ಗೆ ನೀಡಿದರು. ಎಲ್ಲಾ ಬೌಲರ್ ಗೆ ಸರಿಯಾದ ವೇಳೆ, ಬೌಲಿಂಗ್ ಚೇಂಚ್ ಮಾಡುತ್ತಾ, ವಿಕೆಟ್ ಹಿಂದೆಯೂ ಸಮರ್ಥನೀಯ ಕೆಲಸವನ್ನು ಮಾಡಿದರು. ಅಲ್ಲಿಗೆ, ಪಾರ್ಟ್ ಟೈಂ ನಾಯಕತ್ವ, ರಾಹುಲ್ ಗೆ ಒಲಿದು ಬಂದ ಕ್ಷಣವಾಗಿತ್ತದ್ದದು.

Story first published: Monday, February 3, 2020, 9:51 [IST]
Other articles published on Feb 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X