ಮಹಿಳಾ ಏಷ್ಯಾ ಕಪ್ ಸೆಮಿಫೈನಲ್: ಭಾರತ vs ಥಾಯ್ಲೆಂಡ್: ಆಡುವ ಬಳಗ

ಮಹಿಳಾ ಏಷ್ಯಾ ಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಇಂದು ನಡೆಯುತ್ತಿದ್ದು ಭಾರತ ಹಾಗೂ ಥಾಯ್ಲೆಂಡ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಥಾಯ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತದ ವನಿತೆಯರ ಪಡೆಗೆ ಮೊದಲು ಬ್ಯಾಟಿಂಗ್ ನಡೆಸುವ ಸವಾಲು ಎದುರಾಗಿದೆ.

ಈ ಟೂರ್ನಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಲೀಗ್ ಹಂತದ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದ್ದು ಭಾರತದ ಅಜೇಯ ಓಟಕ್ಕೆ ತಡೆಯೊಡ್ಡುವಂತೆ ಮಾಡಿತ್ತು. ಮತ್ತೊಂದೆಡೆ ಪಾಕಿಸ್ತಾನ ತಂಡ ಕೂಡ ಆರರಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಥಾಯ್ಲೆಂಡ್ ವಿರುದ್ಧದ ಸೋಲು ಅನುಭವಿಸಿರುವುದು ತಂಡಕ್ಕೆ ಹಿನ್ನಡೆಯುಂಟು ಮಾಡಿತ್ತು. ಆದರೆ ಭಾರತ ತಂಡವನ್ನು ಮಣಿಸಿದ ಆತ್ಮವಿಶ್ವಾಸ ಪಾಕಿಸ್ತಾನಕ್ಕಿದೆ.

ಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆಮಾಡಿದ ಕರ್ಮ ತಿರುಗೇಟು, ಕೊಹ್ಲಿಗೆ ಆದ ಗತಿಯೇ ಗಂಗೂಲಿಗೂ ಆಯ್ತಾ? ನೆಟ್ಟಿಗರ ಟೀಕೆ

ಥಾಯ್ಲೆಂಡ್ ಐತಿಹಾಸಿಕ ಸಾಧನೆ

ಥಾಯ್ಲೆಂಡ್ ಐತಿಹಾಸಿಕ ಸಾಧನೆ

ಇತ್ತ ಥಾಯ್ಮೆಂಡ್ ತಂಡ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಬಾಂಗ್ಲಾದೇಶ, ಯುಎಇ ಹಾಗೂ ಮಲೇಷ್ಯಾ ತಂಡಗಳನ್ನು ಮಣಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದು ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ಇನ್ನು ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸುವ ಮೂಲಕ ಬಲಿಷ್ಠ ತಂಡಕ್ಕೂ ಆಘಾತ ನೀಡಿತ್ತು.

ಫೈನಲ್ ಮೇಲೆ ಭಾರತದ ಕಣ್ಣು

ಫೈನಲ್ ಮೇಲೆ ಭಾರತದ ಕಣ್ಣು

ಇನ್ನು ಭಾರತ ಮಹಿಳಾ ತಂಡ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದು ಫೈನಲ್ ಹಂತಕ್ಕೇರುವ ಆತ್ಮವಿಶ್ವಾಸದಲ್ಲಿದೆ. ಲೀಗ್ ಹಂತದಲ್ಲಿ ಥಾಯ್ಲೆಂಡ್ ತಂಡಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದ್ದ ಭಾರತದ ವನಿತೆಯರು ಅಂಥಾದ್ದೇ ಪ್ರದರ್ಶನ ಮತ್ತೆ ನೀಡುವ ವಿಶ್ವಾಸದಲ್ಲಿದ್ದಾರೆ. ನಾಯಕಿ ಹರ್ಮನ್‌ಪ್ರೀತ್, ಜಮಿಮಾ ರೋಡ್ರಿಗಸ್, ಸ್ಮೃತಿ ಮಂಧಾನ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಭಾರತದ ಬೌಲಿಂಗ್ ವಿಭಾಗ ಥಾಯ್ಲೆಂಡ್‌ಗೆ ಸಂಕಷ್ಟವನ್ನು ಮಾಡುವುದರಲ್ಲಿ ಅನುಮಾನವಿಲ್ಲ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಕಿರಣ್ ನವಗಿರೆ, ದಯಾಳನ್ ಹೇಮಲತಾ

ಥಾಯ್ಕೆಂಡ್ ಆಡುವ ಬಳಗ: ನನ್ನಪತ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಯೆಮೊಲ್ ಚೈವಾಯ್ (ನಾಯಕಿ), ಚನಿದಾ ಸುತ್ತಿರುಯಾಂಗ್, ಸೊರ್ನರಿನ್ ಟಿಪ್ಪೊಚ್, ಫನ್ನಿತಾ ಮಾಯಾ, ರೋಸೆನನ್ ಕಾನೋಹ್, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ತಿಪತ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಂ
ಬೆಂಚ್: ಬಂತಿದಾ ಲೀಫತ್ತನಾ, ಸುನಿದಾ ಚತುರೋಂಗ್ರಟ್ಟನಾ, ಅಫಿಸರ ಸುವಾಂಚೊನ್ರಾತಿ, ಸುವನನ್ ಖಿಯಾಟೊ, ಸುಲೀಪೋರ್ನ್ ಲಾವೋಮಿ

For Quick Alerts
ALLOW NOTIFICATIONS
For Daily Alerts
Story first published: Thursday, October 13, 2022, 9:38 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X