ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಭಾರತ: ವಿಶ್ವಕಪ್‌ ಮುಖಾಮುಖಿಯ ಕುತೂಹಕಾರಿ ಅಂಕಿ-ಅಂಶ!

World Cup 2019: England vs India-Head to head statistics

ಬರ್ಮಿಂಗ್‌ಹ್ಯಾಮ್, ಜೂನ್ 30: ಐಸಿಸಿ ವಿಶ್ವಕಪ್ 2019ರ ಲೀಗ್ ಹಂತದ ಸ್ಪರ್ಧೆಗಳು ಇನ್ನು ಬೆರಳೆಣಿಕೆಯ ದಿನಗಳಲ್ಲಿ ಮುಗಿದು ಹೋಗಲಿದೆ. ಟೂರ್ನಿ ಸೆಮಿಫೈನಲ್ ಪಂದ್ಯಗಳತ್ತ ಮುಂದರಿಯುತ್ತಿರುವುದರಿಂದ ಪ್ರತಿ‍ಷ್ಠಿತ ಪಂದ್ಯಾಟ ಕುತೂಹಲಕಾರಿ ಘಟ್ಟ ಪ್ರವೇಶಿಸುವುದರಲ್ಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ (ಜೂನ್ 30) ಬಲಿಷ್ಠ ತಂಡಗಳಾದ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದೆ. ಭಾರತ ಸೆಮಿಫೈನಲ್ ಹಂತಕ್ಕೇರಲು ಈ ಪಂದ್ಯದ ಗೆಲುವು ಬಹು ಮುಖ್ಯ. ಆದರೆ ಇಂಗ್ಲೆಂಡ್ ಸೋತರೆ ಪ್ರಶಸ್ತಿ ಸುತ್ತಿನ ಕನಸು ಆಂಗ್ಲರ ಪಾಲಿಗೆ ಕನಸಾಗೇ ಉಳಿಯುವ ಸಂಭವವಿದೆ. ಅಂದ್ಹಾಗೆ ಈ ಪಂದ್ಯದಲ್ಲಿ ಭಾರತ ನೂತನ ಕೇಸರಿ ಜರ್ಸಿಯಲ್ಲಿ ಮೈದಾನಕ್ಕಿಳಿಯುತ್ತಿದೆ.

ಭಾರತ vs ಇಂಗ್ಲೆಂಡ್, ಜೂನ್ 30, Live ಸ್ಕೋರ್‌ಕಾರ್ಡ್

1
43681

ಹಾಗಾದರೆ ಈ ಕುತೂಹಲಕಾರಿ ಪಂದ್ಯದಲ್ಲಿ ಗೆಲ್ಲೋರು ಯಾರು? ವಿಶ್ವಕಪ್ ಇತಿಹಾಸದಲ್ಲಿ ಇತ್ತಂಡಗಳ ಏಳು-ಬೀಳುಗಳೇನು? ಇಲ್ಲೊಂದಿಷ್ಟು ಮಾಹಿತಿಯಿದೆ.

ಇಂಗ್ಲೆಂಡ್ ಸೋತರೆ ಕಂಟಕ

ಇಂಗ್ಲೆಂಡ್ ಸೋತರೆ ಕಂಟಕ

ಟೂರ್ನಿಯ ಆರಂಭದಲ್ಲಿ ಗೆಲುವಿನ ಹಾದಿ ತುಳಿದಿದ್ದ ಇಂಗ್ಲೆಂಡ್ ಸೆಮಿಫೈನಲ್‌ಗೆ ನಿರಾಯಾಸವಾಗಿ ಪ್ರವೇಶಿಸುವ ನಿರೀಕ್ಷೆ ಮೂಡಿಸಿತ್ತು. ಆದರೆ ಲೀಗ್ ಹಂತದ ಕೊನೇ ಗಳಿಗೆಗಳಲ್ಲಿ ಆಂಗ್ಲರ ಲೆಕ್ಕಾಚಾರ ಉಲ್ಟಾ ಆಗಿದೆ. ಇಂಗ್ಲೆಂಡ್ ಆಡಿರುವ 7 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಸೋತು ವಿಶ್ವಕಪ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಕೊಹ್ಲಿ ಬಳಗ ಮಾತ್ರ ಈ ಬಾರಿಯ ವಿಶ್ವಕಪ್‌ನಲ್ಲಿ ಸೋಲೇ ಕಂಡಿರದ ತಂಡವಾಗಿ ಗುರುತಿಸಿಕೊಂಡಿದೆ. ಭಾರತ 6ರಲ್ಲಿ 5 ಪಂದ್ಯ ಗೆದ್ದು ಮತ್ತೊಂದನ್ನು ರದ್ದಾಗಿಸಿಕೊಂಡಿದೆ. ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದರೆ ಇಂಗ್ಲೆಂಡ್ ಸೆಮಿಫೈನಲ್ ಹಾದಿ ಇನ್ನಷ್ಟು ದುರ್ಗಮವಾಗಲಿದೆ.

ಮುಖಾಮುಖಿ ಸಮಬಲ

ಮುಖಾಮುಖಿ ಸಮಬಲ

ವಿಶ್ವಕಪ್ ನಲ್ಲಿ ಈವರೆಗೆ ಇಂಗ್ಲೆಂಡ್ ಮತ್ತು ಭಾರತ ಒಟ್ಟಿಗೆ 7 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 3 ಪಂದ್ಯಗಳನ್ನು ಜಯಿಸಿತ್ತು. ಇನ್ನೊಂದು ಪಂದ್ಯ ಟೈ ಅನ್ನಿಸಿಕೊಂಡಿತ್ತು. ಈ ಅಂಕಿ-ಅಂಶಗಳ ಪ್ರಕಾರ ಜೂನ್ 30ರ ಪಂದ್ಯ ಜಿದ್ದಾಜಿದ್ದಿ ಅನ್ನಿಸುವುದರಲ್ಲಿ ಸಂಶಯವೇ ಇಲ್ಲ.

ಬಾಂಗ್ಲಾ-ಪಾಕ್‌ಗೆ ಅವಕಾಶ

ಬಾಂಗ್ಲಾ-ಪಾಕ್‌ಗೆ ಅವಕಾಶ

ಭಾರತ ವಿರುದ್ಧ ಈ ಕುತೂಹಲಕಾರಿ ಪಂದ್ಯವನ್ನು ಇಂಗ್ಲೆಂಡ್ ಏನಾದರೂ ಸೋತುಬಿಟ್ಟರೆ ಇಂಗ್ಲೆಂಡ್ ತಂಡ ಲೀಗ್ ಹಂತದ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಲಾರದು. ಅಂದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ ಕಷ್ಟವಾಗಲಿದೆ. ಯಾಕೆಂದರೆ ಸೆಮಿಫೈನಲ್‌ನತ್ತ ಕಣ್ಣಿಟ್ಟಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಅವಕಾಶಗಳನ್ನು ಬಳಸಿಕೊಳ್ಳಲಿವೆ. ಸದ್ಯದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ಅನಂತರದ ಸ್ಥಾನಗಳಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ತಂಡಗಳಿವೆ. ಆದರೆ ಇಂಗ್ಲೆಂಡ್‌ಗೆ ಸೆಮಿಫೈನಲ್ ನಿಟ್ಟಿನಲ್ಲಿ ನೆರವಾಗಬಲ್ಲ ಅಂಶವೆಂದರೆ ನೆಟ್ ರನ್ ರೇಟ್. ಇಂಗ್ಲೆಂಡ್ +1.051 ರನ್ ರೇಟ್ ಹೊಂದಿದ್ದರೆ, ಪಾಕ್ -0.792 ರನ್‌ ರೇಟ್ ಗಳಿಸಿದೆ.

ಮೊದಲು ಗೆದ್ದಿದ್ದು ಇಂಗ್ಲೆಂಡ್

ಮೊದಲು ಗೆದ್ದಿದ್ದು ಇಂಗ್ಲೆಂಡ್

ಭಾರತ-ಇಂಗ್ಲೆಂಡ್ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿಯಾಗಿದ್ದು 1975ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ. ಇದರಲ್ಲಿ ಇಂಗ್ಲೆಂಡ್ ಭರ್ಜರಿ 202 ರನ್‌ಗಳಿಂದ ಗೆದ್ದಿತ್ತು. ಮುಂದೆ 1983 ರಲ್ಲಿ ಭಾರತ 6 ವಿಕೆಟ್ ಜಯ, 1987ರಲ್ಲಿ ಇಂಗ್ಲೆಂಡ್ 35 ರನ್ ಗೆಲುವು, 1992ರಲ್ಲಿ ಆಂಗ್ಲರು 9 ರನ್ ಜಯ, 1999ರಲ್ಲಿ ಭಾರತಕ್ಕೆ 63 ರನ್ ಗೆಲುವು, 2003ರಲ್ಲೀ ಭಾರತ 82 ರನ್ ಜಯಭೇರಿ ಬಾರಿಸಿತ್ತು. ಆದರೆ 2011ರ ಪಂದ್ಯ ಟೈ ಅನ್ನಿಸಿತ್ತು. ಆ ಪಂದ್ಯದಲ್ಲಿ ಎರಡೂ ತಂಡಗಳೂ 338 ರನ್ ಬಾರಿಸಿ ಸಮಬಲ ಸಾಧಿಸಿದ್ದವು.

Story first published: Sunday, June 30, 2019, 12:11 [IST]
Other articles published on Jun 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X