ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ಆಫ್ಘನ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

World Cup 2019: Host England beat Afghanistan by 9 Wickets in practice match

ಲಂಡನ್‌, ಮೇ 27: ಅನುಭವಿ ಆಟಗಾರ ಜೋ ರೂಟ್‌ ಅವರ ಆಲ್‌ರೌಂಡ್‌ ಪ್ರದರ್ಶನ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಮಿಂಚಿದ ಆತಿಥೇಯ ಇಂಗ್ಲೆಂಡ್‌ ತಂಡ, ಇಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

ಮೇ 25 ರಂದು ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ 12 ರನ್‌ಗಳ ಸೋಲನುಭವಿಸಿದ್ದ ಈ ಬಾರಿಯ ವಿಶ್ವಕಪ್‌ ಗೆಲುವಿನ ಫೇವರಿಟ್ಸ್‌ ನಂ.1 ಶ್ರೇಯಾಂಕಿತ ಇಂಗ್ಲೆಂಡ್‌ ತಂಡ ಕ್ರಿಕೆಟ್‌ ಕೂಸು ಅಫಘಾನಿಸ್ತಾನ ವಿರುದ್ಧ ಗೆದ್ದು ಲಯಕ್ಕೆ ಮರಳಿದೆ.

 ಸನತ್‌ ಜಯಸೂರ್ಯ ಸಾವಿನ ಸುಳ್ಳು ಸುದ್ದಿ ಕೇಳಿ ಬೆಚ್ಚಿದ ರವಿಚಂದ್ರನ್‌ ಅಶ್ವಿನ್‌! ಸನತ್‌ ಜಯಸೂರ್ಯ ಸಾವಿನ ಸುಳ್ಳು ಸುದ್ದಿ ಕೇಳಿ ಬೆಚ್ಚಿದ ರವಿಚಂದ್ರನ್‌ ಅಶ್ವಿನ್‌!

ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಉದ್ಘಾಟನಾ ಪಂದ್ಯವನ್ನಾಡಲಿದೆ.

ನಿವೃತ್ತಿ ವಿಚಾರದಲ್ಲಿ ರಾಸ್‌ ಟೇಲರ್‌ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ!ನಿವೃತ್ತಿ ವಿಚಾರದಲ್ಲಿ ರಾಸ್‌ ಟೇಲರ್‌ಗೆ ಕ್ರಿಸ್‌ ಗೇಲ್‌ ಸ್ಫೂರ್ತಿ!

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅಫಘಾನಿಸ್ತಾನ ತಂಡ 38.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇಂಗ್ಲೆಂಡ್‌ ಪರ ಯುವ ವೇಗದ ಬೌಲರ್‌ ಜೋಫ್ರಾ ಆರ್ಚರ್‌ 32ಕ್ಕೆ 3 ವಿಕೆಟ್‌ ಪಡೆದು ಮಿಂಚಿದರೆ, ಅಚ್ಚರಿಯ ಬೌಲಿಂಗ್‌ ಪ್ರದರ್ಶಿಸಿದ ಸಾಂದರ್ಭಿಕ ಲೆಗ್‌ಸ್ಪಿನ್ನರ್‌ ಜೋ ರೂಟ್‌ 22ಕ್ಕೆ 3 ವಿಕೆಟ್‌ ಉರುಳಿಸಿ ಆಫ್ಘನ್‌ ಪಡೆಯನ್ನು ಬೇಟೆಯಾಡಿದರು.

ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದ ಲಯಾನ್‌!ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದ ಲಯಾನ್‌!

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡ ಕೇವಲ 17.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 161 ರನ್‌ಗಳನ್ನು ಚಚ್ಚಿ ಜಯದ ಹಾದಿ ತುಳಿಯಿತು. ಇಂಗ್ಲೆಂಡ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ ಜಾನಿ ಬೈರ್‌ಸ್ಟೋವ್‌ 22 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿ ಔಟಾದರೆ, ಅಬ್ಬರಿಸಿದ ಜೇಸನ್‌ ರಾಯ್‌ 46 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು 11 ಫೋರ್‌ಗಳನ್ನು ಒಳಗೊಂಡ ಅಜೇಯ 89 ರನ್‌ಗಳನ್ನು ಸಿಡಿಸಿ ವಿಶ್ವಕಪ್‌ಗೆ ಭರ್ಜರಿಯ ತಾಲೀಮು ನಡೆಸಿದರು. ಮೊದಲ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಅನುಭವಿ ಆಟಗಾರ ರೂಟ್‌, 37 ಎಸೆತಗಳಲ್ಲಿ ಅಜೇಯ 29 ರನ್‌ಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಅಫಘಾನಿಸ್ತಾನ: 38.4 ಓವರ್‌ಗಳಲ್ಲಿ 160/10
ಇಂಗ್ಲೆಂಡ್‌: 17.3 ಓವರ್‌ಗಳಲ್ಲಿ 161/1

Story first published: Monday, May 27, 2019, 20:03 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X