ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಯೋಬಬಲ್‌ನ ಸುರಕ್ಷೆ ಪ್ರಶ್ನಿಸಿದ ವೃದ್ಧಿಮಾನ್ ಸಾಹ

Wriddhiman Saha questions IPL bubble tightness, says UAE would have been better venue

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಅನುಭವಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಐಪಿಎಲ್ ಬಯೋಬಬಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕಳೆದ ವರ್ಷದ ಐಪಿಎಲ್ ಬಯೋ ಬಬಲ್‌ಗೆ ಹೋಲಿಸಿದರೆ ಈ ಬಾರಿಯ ಬಯೋ ಬಬಲ್ ಅಷ್ಟೇನೂ ಸುರಕ್ಷಿತವಾಗಿರಲಿಲ್ಲ ಎಂಬರ್ಥದಲ್ಲಿ ಸಾಹ ಮಾತನಾಡಿದ್ದಾರೆ.

ಇಂಗ್ಲೆಂಡನ್ನು 5-0ಯಿಂದ ಸೋಲಿಸುವ ಸಾಮರ್ಥ್ಯ ಭಾರತಕ್ಕಿದೆ: ಪನೇಸರ್ಇಂಗ್ಲೆಂಡನ್ನು 5-0ಯಿಂದ ಸೋಲಿಸುವ ಸಾಮರ್ಥ್ಯ ಭಾರತಕ್ಕಿದೆ: ಪನೇಸರ್

ಐಪಿಎಲ್ ಬಯೋಬಬಲ್ ಬಗ್ಗೆ ಭಾರತೀಯ ಯಾವ ಆಟಗಾರರೂ ಪ್ರಶ್ನಿಸಿರಲಿಲ್ಲ. ಐಪಿಎಲ್ ಬಯೋಬಬಲ್ ಸುರಕ್ಷತೆ ಬಗ್ಗೆ ಮಾತನಾಡಿದ ಭಾರತೀಯ ಮೊದಲ ಆಟಗಾರನಾಗಿ ವೃದ್ಧಿಮಾನ್ ಸಾಹ ಕಾಣಿಸಿಕೊಂಡಿದ್ದಾರೆ. ಅದು ಬಿಟ್ಟರೆ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮತ್ತು ಬೆನ್ ಸ್ಟೋಕ್ಸ್ ಸಣ್ಣಮಟ್ಟಿಗೆ ಐಪಿಎಲ್ ಬಯೋಬಬಲ್ ಸುರಕ್ಷತೆ ಬಗ್ಗೆ ಧ್ವನಿಯೆತ್ತಿದ್ದರು.

14ನೇ ಆವೃತ್ತಿಯ ಐಪಿಎಲ್ ಅರ್ಧದಲ್ಲೇ ನಿಲುಗಡೆಯಾಗಿದೆ. ಕಾರಣ ಬಯೋ ಬಬಲ್ ಒಳಗಿದ್ದ ನಾಲ್ಕು ತಂಡಗಳ ಆಟಗಾರರಿಗೆ ಕೋವಿಡ್-19 ಸೋಂಕು ತಗುಲಿತ್ತು. ಸಾಹಗೂ ಕೊರೊನಾ ಪಾಸಿಟಿವ್ ಬಂದಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಈ ಬಾರಿಯ ಐಪಿಎಲ್ ಅನ್ನು ಅಮಾನತುಗೊಳಿಸಲಾಗಿತ್ತು.

ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್: ಹಕ್ ಹೇಳಿದ್ದೇನು ಗೊತ್ತಾ?!ಶ್ರೀಲಂಕಾ ಪ್ರವಾಸಕ್ಕೆ ದ್ರಾವಿಡ್ ಕೋಚ್: ಹಕ್ ಹೇಳಿದ್ದೇನು ಗೊತ್ತಾ?!

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ 36ರ ಹರೆಯದ ಸಾಹ, 'ಬಯೋಬಬಲ್ ಸುರಕ್ಷೆ ಕಡೆ ಗಮನ ಹರಿಸೋದು ಮಧ್ಯಸ್ಥದಾರರ ಜವಾಬ್ದಾರಿ. ಆದರೆ ನಾನು ಒಂದು ವಿಚಾರ ಹೇಳ್ತೇನೆ, ಯುಎಇಯಲ್ಲಿ ಕಳೆದ ವರ್ಷ ಐಪಿಎಲ್ ನಡೆದಿದ್ದಾಗ ಒಬ್ಬನೇ ಒಬ್ಬ ಆಟಗಾರನಿಗೆ, ಸಿಬ್ಬಂದಿಗೆ ಸೋಂಕು ತಗುಲಿರಲಿಲ್ಲ,' ಎಂದಿದ್ದಾರೆ.

Story first published: Saturday, May 22, 2021, 19:11 [IST]
Other articles published on May 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X