WTC Final: ಶುಬ್ಮನ್ ಗಿಲ್ ಬ್ಯಾಟಿಂಗ್‌ನಲ್ಲಿನ ಲೋಪವನ್ನು ಹೇಳಿದ ಸಂಜಯ್ ಮಂಜ್ರೇಕರ್

ಸೌಥಾಂಪ್ಟನ್, ಜೂನ್ 23: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೆಣೆಸಾಟವನ್ನು ನಡೆಸುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಂದ ಹೇಳಿಕೊಲ್ಳುವಂತಾ ಪ್ರದರ್ಶನ ಬಾರದೆ ತಂಡ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಪ್ರದರ್ಶನದ ಬಗ್ಗೆ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ.

ಶುಬ್ಮನ್ ಗಿಲ್ ಫ್ರಂಟ್‌ಫೂಟ್‌ಅನ್ನು ಹೆಚ್ಚಾಗಿ ಅವಲಂಬಿಸುವುದನ್ನು ಕಡಿಮೆಗೊಳಿಸಬೇಕು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಶುಬ್ಮನ್ ಗಿಲ್ ಪಿಚ್‌ಅಪ್ ಎಸೆತಗಳಾಗಿ ನಿರೀಕ್ಷಿಸುತ್ತಾರೆ. ಹೀಗಾಗಿ ಮುಂಗಾಲನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಇಂತಾ ಸಂದರ್ಭದಲ್ಲಿ ಆತನತ್ತ ಚೆಂಡು ಧಾವಿಸಿದಾಗ ಕಳವಳಗೊಳ್ಳುತ್ತಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್WTC Final: ಟೀಮ್ ಇಂಡಿಯಾದಲ್ಲಿ ಆಡಿಸಲೇಬೇಕಿದ್ದ ಆಟಗಾರನ ಹೆಸರಿಸಿದ ಗವಾಸ್ಕರ್

"ಆತ ತನ್ನ ಕಾಲಿನ ಚಲನೆಯ ಮೇಲೆ ಕೆಲಸಮಾಡಬೇಕಿದೆ. ಯಾಕೆಂದರೆ ಎಲ್ಲರೂ ಅದನ್ನು ಗಮನಿಸುತ್ತಾರೆ. ಶುಬ್ಮನ್ ಗಿಲ್ ಯಾವಾಗಲೂ ಫ್ರಂಟ್ ಫೂಟ್ ಬಳಸುತ್ತಾರೆ. ಅದನ್ನು ಆತ ಈ ಹಿಂದೆಯೂ ಮಾಡಿದ್ದಾರೆ. ಪಿಚ್ ಆಗುವ ಎಸೆತಗಳಿಗೆ ಔಟಾಗದಂತೆ ಮಾಡಲು ಈ ಅಭ್ಯಾಸವನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಆ ಕಾರಣದಿಂದಾಗಿ ಈ ವಿಚಾರವಾಗಿ ಆತ ಗಮನಹರಿಸಬೇಕಿದೆ" ಎಂದು ಮಂಜ್ರೇಕರ್ ಹೇಳಿದ್ದಾರೆ.

"ನ್ಯೂಜಿಲೆಂಡ್ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಗಿಲ್ ಇದೇ ಕಾರಣದಿಂದಾಗಿ ವಿಕೆಟ್ ಕಳೆದುಕೊಂಡಿದ್ದಾರೆ. ಔಟ್ ಸ್ವಿಂಗ್ ಬಗ್ಗೆ ಯೋಚಿಸುತ್ತಾ ಔಟಾಗಿ ಹೊರಬಂದರು. ಆತ ವಟ್‌ಸ್ವಿಂಗ್ ಎಸೆತಗಳನ್ನು ತುಂಬಾ ಅದ್ಭುತವಾಗಿ ಬಿಡುತ್ತಾರೆ. ಆದರೆ ಚೆಂಡು ತಮ್ಮತ್ತ ನುಗ್ಗಿದಾಗ ಆಘಾತಗೊಳ್ಳುತ್ತಾರೆ" ಎಂದು ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ.

ಐದು ದಿನಗಳ ಆಟಕ್ಕೆ ಮಳೆ ಅಡ್ಡಿಯಾಗಿರುವ ಕಾರಣ ಮೀಸಲು ದಿನಕ್ಕೆ ಆಟ ಕಾಲಿಟ್ಟಿದೆ. ಬುಧವಾರ ಸೌಥಾಂಪ್ಟನ್‌ನಲ್ಲಿ ಉತ್ತಮ ವಾತಾವರಣ ಇರುವ ಕಾರಣ ನಿರೀಕ್ಷಿತ ಪ್ರಮಾಣದ ಆಟ ನಡೆಯುವ ಸಾಧ್ಯತೆಯಿದೆ. ಆದರೆ ಭಾರತ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿರುವುದು ಟೀಮ್ ಇಂಡಿಯಾಗೆ ಹಿನ್ನಡೆಯುಂಟು ಮಾಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 23, 2021, 16:25 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X