ಸೈನಿಕರಿಗೆ ಸಿಹಿ ಹಂಚಿ ದೀಪಾವಳಿ ಆಚರಿಸಿದ ಯುಸೂಫ್ ಪಠಾಣ್

Posted By:

ಬರೋಡಾ, ಅಕ್ಟೋಬರ್ 19: ಈ ಬಾರಿಯ ದೀಪಾವಳಿ ಹಬ್ಬವನ್ನು ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯುಸೂಫ್ ಪಠಾಣ್ ವಿಶೇವಾಗಿ ಆಚರಿಸಿದ್ದಾರೆ.

ಬರೋಡಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸೈನಿಕರಿಗೆ ಸಿಹಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅಷ್ಟೇ ಅಲ್ಲದೇ ಹಬ್ಬದ ಸಮಯದಲ್ಲೂ ಸೇವೆ ಸಲ್ಲಿಸುವ ಸೈನಿಕರ ಬಗ್ಗೆ ಅಪಾರ ಗೌರವ ಇದೆ ಎಂದು ಯುಸೂಫ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

Yusuf Pathan gets love for exchanging sweets with jawans on Diwali

ಯುಸೂಫ್ ಅವರ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಸಂಸೆಗಳು ವ್ಯಕ್ತವಾಗಿದ್ದು, ಸೈನಿಕರ ಬಗ್ಗೆ ಯುಸೂಫ್ ಪಠಾಣ್ ಗೆ ಇರುವ ಗೌರವಕ್ಕೆ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿವೆ.

ಹಾಗೂ ಯುಸೂಫ್ ಪಠಾಣ್ ದೀಪಾವಳಿಯ ದಿನದಂದು ಇಂದು ಹೊಸ ಐ-ಫೋನ್ 8 ಪ್ಲಸ್ ಖರೀದಿಸಿದ್ದಾರೆ. ಈ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜತೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಯೋಧರ ಜತೆ ಪ್ರಧಾನಿಗಳು ದೀಪಾವಳಿ ಆಚರಿಸಿದರು.

Story first published: Thursday, October 19, 2017, 17:48 [IST]
Other articles published on Oct 19, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ