ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫುಟ್ಬಾಲ್‌ ಕ್ಲಬ್‌ಗಾಗಿ ಕೆವಿನ್ ಪೀಟರ್ಸನ್ ಕಾಲೆಳೆದ ಯುವರಾಜ್ ಸಿಂಗ್

Yuvraj Singh and Kevin Pietersen engage in fun banter on Twitter

ನವದೆಹಲಿ, ಜೂನ್ 20: ಕೊರೊನಾವೈರಸ್ ಕಾರಣ ವೀಕ್ಷಕರಿಲ್ಲದ ಮೈದಾನದಲ್ಲಿ ಕ್ರೀಡಾಕೂಟಗಳನ್ನು ನಡೆಸಬೇಕಾಗಿ ಬಂದಿರುವುದು ಕ್ರೀಡಾವಲಯದಲ್ಲಿ ಚರ್ಚಿಸಲ್ಪಡುತ್ತಿದೆ. ಈ ಮಧ್ಯೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಇಂಗ್ಲೆಂಡ್‌ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಫುಟ್ಬಾಲ್ ಕ್ಲಬ್‌ಗೋಸ್ಕರ ತಮಾಷೆಯಾಗಿ ಕಾಲೆಳೆದಾಡಿಕೊಂಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದಲ್ಲಿ ಕೊರೊನಾ ವೈರಸ್ ಭೀತಿ!ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದಲ್ಲಿ ಕೊರೊನಾ ವೈರಸ್ ಭೀತಿ!

ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರೀಡಾಸ್ಪರ್ಧೆಗಳು ನಿಲುಗಡೆಯಾದಾಗ ಸ್ಥಗಿತವಾಗಿದ್ದ ಪ್ರತಿಷ್ಠಿತ (ಇಂಗ್ಲಿಷ್) ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿ ಈಗ ಪುನರಾರಂಭಗೊಂಡಿದೆ. ಈ ಟೂರ್ನಿಯ ಪಂದ್ಯದ ಸಲುವಾಗಿ ಮ್ಯಾನ್ಚೆಸ್ಟರ್ ಯುನೈಟೆಡ್ ಅಭಿಮಾನಿ ಯುವಿ, ಚೆಲ್ಸಿಯಾ ಅಭಿಮಾನಿಯಾದ ಕೆವಿಯನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ.

ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್ಪಾಕ್‌ ವಿರುದ್ಧ ತೆಂಡೂಲ್ಕರ್ ಅದ್ಭುತ ಇನ್ನಿಂಗ್ಸ್‌ ಸ್ಮರಿಸಿದ ವಾಕರ್ ಯೂನಿಸ್

ಶುಕ್ರವಾರ ರಾತ್ರಿ ಮ್ಯಾನ್ಚೆಸ್ಟರ್ ಯುನೈಟೆಡ್ ಮತ್ತು ಟೊಟೆನ್ಹ್ಯಾಮ್ ಮಧ್ಯೆ ಪಂದ್ಯ ನಡೆದಿತ್ತು. ಈ ಪಂದ್ಯ ಪೆನಾಲ್ಟಿ ನಾಟಕೀಯದೊಂದಿಗೆ 1-1ರಿಂದ ಸಮಬಲಗೊಂಡಿತ್ತು. ಪಂದ್ಯದ ವೇಳೆ ವೀಕ್ಷಕರಿಗೆ ಅನುಮತಿ ನೀಡಿರಲಿಲ್ಲ, ಖಾಲಿ ಮೈದಾನದಲ್ಲಿ ಪಂದ್ಯ ನಡೆದಿತ್ತು. ವೀಕ್ಷಕರಿಲ್ಲದ ಮೈದಾನದಲ್ಲಿ ಪಂದ್ಯ ನಡೆದಿದ್ದು ಪೀಟರ್ಸನ್‌ಗೆ ಬೇಸರ ಮೂಡಿಸಿತ್ತು.

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ''ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

ಹೀಗಾಗಿ ಪೀಟರ್ನಸನ್, 'ಅಭಿಮಾನಿಗಳಿಲ್ಲದೆ ಫುಟ್ಬಾಲ್ ಪಂದ್ಯ' ಅಂತ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಯುವಿ, 'ಮೈದಾನದಲ್ಲಿ ಅಭಿಮಾನಿಗಳಿರಲಿ, ಮನೆಯಲ್ಲಿ ಅಭಿಮಾನಿಗಳಿರಲಿ ಅದು ವಿಷ್ಯ ಅಲ್ಲ ಗೆಳೆಯ, ನಾವು ಯಾವತ್ತಿಗೂ ವಿಶ್ವದ ಅತ್ಯುತ್ತಮ ತಂಡ ಮ್ಯಾನ್ ಯುನೈಟೆಡ್‌ಗೆ ಬೆಂಬಲಿಸುತ್ತೇವೆ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Story first published: Saturday, June 20, 2020, 20:36 [IST]
Other articles published on Jun 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X