ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಲೆಕ್ಸಾಂಡರ್‌ ಜ್ವೆರೆವ್‌ ಮುಡಿಗೆ ಜಿನೆವಾ ಓಪನ್‌ ಗರಿ

Zverev edges past Jarry to win Geneva Open

ಜಿನೆವಾ, ಮೇ 26: ಪ್ರಸಕ್ತ ಸಾಲಿನ 2ನೇ ಗ್ರ್ಯಾನ್‌ ಸ್ಲ್ಯಾಮ್‌ ಟೆನಿಸ್‌ ಟೂರ್ನಿ ಫ್ರೆಂಚ್‌ ಓಪನ್‌ಗೆ ಭರ್ಜರಿ ಸಿದ್ದತೆ ಕೈಗೊಂಡಿರುವ ವಿಶ್ವದ ಐದನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಇಲ್ಲಿ ನಡೆದ ಜಿನೆವಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಎದುರಿಸಿದ 22 ವರ್ಷದ ಯುವ ಪ್ರತಿಭೆ ಜ್ವೆರೆವ್‌, 6-3, 3-6, 7-6 (10-8) ಅಂತರದ ಸೆಟ್‌ಗಳಿಂದ ಚಿಲಿಯ ಆಟಗಾರ ನಿಕೊಲಾಸ್‌ ಜಾರಿ ವಿರುದ್ಧ ಪ್ರಯಾಸದ ಜಯ ದಾಖಲಿಸಿ ಈ ವರ್ಷ ತಮ್ಮ ಮೊದಲ ಟ್ರೋಫಿಗೆ ಮುತ್ತಿಟ್ಟರು.

ಶನಿವಾರ ನಡೆಯ ಬೇಕಿದ್ದ ಫೈನಲ್‌ ಪಂದ್ಯ ಮಳೆ ಕಾರಣ ಭಾನುವಾರಕ್ಕೆ ಮುಂದೂಡಲ್ಪಟ್ಟಿತ್ತು. ಫೈನಲ್‌ನಲ್ಲಿ ಜ್ವೆರೆವ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ಸಾಧ್ಯವಾಗದೆ ಎರಡು ಮ್ಯಾಚ್‌ ಪಾಯಿಂಟ್‌ಗಳನ್ನು ಎದುರಿಸಿದ್ದರು. ಆದರೂ, 2 ಗಂಟೆ, 37 ನಿಮಿಷಗಳ ಪ್ರಬಲ ಸ್ಪರ್ಧೆಯಲ್ಲಿ ಚಿಲಿ ಆಟಗಾರನ ಎದುರು ಜಯಶೀಲರಾಗಿ ಹೊರಹೊಮ್ಮಿದರು.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಪಂದ್ಯದ ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಜ್ವೆರೆವ್‌ 2ನೇ ಗೇಮ್‌ನಲ್ಲೇ ಎರದುರಾಳಿಯ ಸರ್ವ್‌ ಮುರಿದು 6-3ರಲ್ಲಿ ಸೆಟ್‌ ವಶಪಡಿಸಿಕೊಂಡರು. ಬಳಿಕ ವಿಶ್ವದ 75ನೇ ಶ್ರೇಯಾಂಕಿತ ಆಟಗಾರ ಜಾರಿ ದ್ವಿತೀಯ ಸೆಟ್‌ನಲ್ಲಿ ಅಲೆಕ್ಸಾಂಡರ್‌ ಸವಾಲನ್ನು ಹಿಮ್ಮೆಟ್ಟಿಸಿ ಅಚ್ಚರಿ ಮೂಡಿಸಿದರು.

ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!

ಬಳಿಕ ಮೂರನೇ ಹಾಗೂ ನಿರ್ಣಾಯಕ ಸೆಟ್‌ ಕೂಡ ಸಮಬಲದಲ್ಲೇ ಸಾಗಿ ಅಂತಿಮವಾಗಿ ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ಮೊರೆ ಹೋಗುವಂತಾಯಿತು. ಇಲ್ಲಿ ಎರಡು ಬಾರಿ ಜಾರಿ ಮ್ಯಾಚ್‌ ಪಾಯಿಂಟ್‌ ಅವಕಾಶ ಪಡೆದರಾದರೂ, ಜರ್ಮನಿಯ ತಾರೆ ತಮ್ಮ ಬಲಿಷ್ಠ ಸರ್ವ್‌ಗಳ ಮೂಲಕ ಸೆಟ್‌ ಮತ್ತು ಚಾಂಪಿಯನ್‌ಷಿಪ್‌ ಎರಡನೇ ವೈಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

ಕಳೆದ ವರ್ಷ ನವೆಂಬರ್‌ನಲ್ಲಿ ಎಟಿಪಿ ಫೈನಲ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಜ್ವೆರೆವ್‌, ತಮ್ಮ ವೃತ್ತಿ ಬದುಕಿನ ಮೊದಲ ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದು, ಫ್ರೆಂಚ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜಾನ್‌ ಮಿಲ್ಮನ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

Story first published: Sunday, May 26, 2019, 17:15 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X