ವಿಶ್ವಕಪ್ 2018: ಒಂದೇ ಗುಂಪಿನಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್!

Posted By:

ಕ್ರೆಮ್ಲಿನ್, ಡಿಸೆಂಬರ್ 03: 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಜಾಗತಿಕ ಸಮರದಲ್ಲಿ ಯಾವ ತಂಡ ಯಾವ ಗುಂಪಿನಲ್ಲಿದೆ ಎಂಬ ಪಟ್ಟಿಯನ್ನು ಫಿಫಾ ಪ್ರಕಟಿಸಿದೆ. ಈಗಾಗಲೇ ಪ್ರತಿ ಗುಂಪಿನಿಂದ ಮುಂದಿನ ಸುತ್ತಿಗೆ ಅರ್ಹತೆ ಗಳಿಸುವ ತಂಡಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ವಿಶ್ವಕಪ್ ಅರ್ಹತೆಯಲ್ಲಿ ಫೇಲಾದ ಮಾಜಿ ಚಾಂಪಿಯನ್

ಅತಿಥೇಯ ರಷ್ಯಾ ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಎದುರಿಸಲಿದೆ. ಮಾಜಿ ಚಾಂಪಿಯನ್ ಜರ್ಮನಿ ತಂಡವು ಮೆಕ್ಸಿಕೋ ವಿರುದ್ಧ ಸೆಣಸಲಿದೆ.

2018 FIFA World Cup: Russia to take on Saudi in World Cup opener

ಯುರೋ 2016 ಹಾಗೂ ಕಾನ್ಫೆಡರೇಷನ್ಸ್ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡದ ರಷ್ಯಾ ತಂಡ ಎ ಗುಂಪಿನಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೇರಲು ಯತ್ನಿಸಲಿದೆ.

ಗುಂಪುಗಳು ಹೀಗಿವೆ:

ಎ ಗುಂಪು : ರಷ್ಯಾ, ಸೌದಿ ಅರೇಬಿಯಾ, ಈಜಿಪ್ಟ್ ಹಾಗೂ ಉರುಗ್ವೆ
ಬಿ ಗುಂಪು: ಪೋರ್ಚುಗಲ್, ಸ್ಪೇನ್, ಮೊರಕ್ಕೋ ಹಾಗೂ ಇರಾನ್
ಸಿ ಗುಂಪು : ಫ್ರಾನ್ಸ್, ಆಸ್ಟ್ರೇಲಿಯಾ, ಪೆರು, ಡೆನ್ಮಾರ್ಕ್
ಡಿ ಗುಂಪು: ಅರ್ಜೆಂಟೀನಾ, ಐಸ್ ಲ್ಯಾಂಡ್, ಕ್ರೋವೆಷಿಯಾ, ನೈಜಿರಿಯಾ
ಇ ಗುಂಪು: ಬ್ರೆಜಿಲ್, ಸ್ವಿಟ್ಜರ್ಲೆಂಡ್, ಕೊಸ್ಟರಿಕಾ, ಸೆರ್ಬಿಯಾ
ಎಫ್ ಗುಂಪು : ಜರ್ಮನಿ, ಮೆಕ್ಸಿಕೋ, ಸ್ವೀಡನ್, ದಕ್ಷಿಣ ಕೊರಿಯಾ
ಜಿ ಗುಂಪು : ಬೆಲ್ಜಿಯಂ, ಪನಮಾ, ಟ್ಯುನಿಷಿಯಾ, ಇಂಗ್ಲೆಂಡ್
ಎಚ್ ಗುಂಪು : ಪೋಲೆಂಡ್,ಸೆನೆಗಲ್, ಕೊಲಂಬಿಯಾ, ಜಪಾನ್

ರಷ್ಯಾ ಟಿಕೆಟ್ ಮಿಸ್ ಮಾಡಿಕೊಂಡ ತಂಡಗಳು: ನೆದರ್ಲೆಂಡ್, ಯುಎಸ್ಎ, ಚಿಲಿ ನಂತರ ರಷ್ಯಾ ವಿಶ್ವಕಪ್ 2018ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ನಾಲ್ಕನೇ ಪ್ರಮುಖ ತಂಡವಾಗಿ ಇಟಲಿ ಕಾಣಿಸಿಕೊಂಡಿದೆ.

Story first published: Sunday, December 3, 2017, 17:43 [IST]
Other articles published on Dec 3, 2017
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ