ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಾಜೀವ್‌ ಗಾಂಧಿ ಖೇಲ್‌ ರತ್ನಕ್ಕೆ ಸುನಿಲ್ ಛೆಟ್ರಿ ಹೆಸರು ಶಿಫಾರಸು

All India Football Federation to recommend footballer Sunil Chhetri for Rajeev Gandhi Khel Ratna award

ನವದೆಹಲಿ: ಭಾರತದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್‌ ರತ್ನಕ್ಕೆ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೆಸರನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಶಿಫಾರಸು ಮಾಡಿದೆ. ಮಹಿಳಾ ಫುಟ್ಬಾಲ್ ತಂಡದ ಸ್ಟ್ರೈಕರ್ ಬಲ ದೇವಿ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಹೊಸ ಅಂಕ ನಿಯಮ ಘೋಷಿಸಿದ ಐಸಿಸಿ

ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಸದ್ಯ 13ನೇ ಸ್ಥಾನದಲ್ಲಿದ್ದು, 118 ಪಂದ್ಯಗಳಲ್ಲಿ 74 ಗೋಲ್ ದಾಖಲೆ ಹೊಂದಿದ್ದಾರೆ. ಇದಕ್ಕೂ ಮುನ್ನ ಛೆಟ್ರಿ ಅರ್ಜೆಂಟೀನಾ ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ್ದರು. ಆದರೆ ಈಗ ಮೆಸ್ಸಿ ಮತ್ತೆ ಛೆಟ್ರಿಗಿಂತ ಒಂದು ಹೆಚ್ಚುವರಿ ಗೋಲ್ ಬಾರಿಸಿ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಛೆಟ್ರಿಗಿಂತ ಮುಂದಿರುವ ಮೆಸ್ಸಿ 148 ಪಂದ್ಯಗಳಲ್ಲಿ 75 ಗೋಲ್ ದಾಖಲೆ ಹೊಂದಿದ್ದಾರೆ. ಇನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿರುವ ಬಲ ದೇವಿ ಸದ್ಯ ಸ್ಕಾಟಿಶ್ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರೇಂಜರ್ಸ್ ತಂಡದ ಪರ ಆಡುತ್ತಿದ್ದಾರೆ.

WTCಗೆ ಅತ್ಯುತ್ತಮ XI ಹೆಕ್ಕಿದ ಬ್ರಾಡ್, ಪ್ರಮುಖ ಭಾರತೀಯನ ಅವಗಣನೆ, ಪಾಕ್ ಆಟಗಾರನಿಗೆ ಮಣೆ!WTCಗೆ ಅತ್ಯುತ್ತಮ XI ಹೆಕ್ಕಿದ ಬ್ರಾಡ್, ಪ್ರಮುಖ ಭಾರತೀಯನ ಅವಗಣನೆ, ಪಾಕ್ ಆಟಗಾರನಿಗೆ ಮಣೆ!

"ನಾವು ಸುನಿಲ್ ಛಟ್ರಿಯನ್ನು ಖೇಲ್‌ ರತ್ನಕ್ಕೆ ಮತ್ತು ಬಲ ದೇವಿಯನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ. ಜೊತೆಗೆ ಗೇಬ್ರಿಯಲ್ ಜೋಸೆಫ್ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಿದ್ದೇವೆ," ಎಂದು ಪಿಟಿಐಗೆ ಅಧಿಕೃತ ಮೂಲ ತಿಳಿದಿದೆ.

Story first published: Thursday, July 1, 2021, 11:19 [IST]
Other articles published on Jul 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X