ಫರ್ಗುಸನ್ ನಂತರ ರೆಡ್ ಡೆವಿಲ್ ತಂಡ ಸೇರಿದ 11 ದುಬಾರಿ ಆಟಗಾರರು

ಮ್ಯಾಂಚೆಸ್ಟರ್, ಜನವರಿ 24: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ ಜನಪ್ರಿಯ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ಕೊನೆಗೂ ಬಿಗ್ ಡೀಲ್ ಸಾಧಿಸಿದೆ. ಆರ್ಸೆನೆಲ್ ನಿಂದ ಅದಲು ಬದಲು ಒಪ್ಪಂದದಂತೆ ಆಲೆಕ್ಸಿಸ್ ಸ್ಯಾಂಚೇಜ್ ಈಗ ಓಲ್ಡ್ ಟ್ರಾಫರ್ಡ್ ಗೆ ಬಂದಿದ್ದಾರೆ. ಹೆನ್ರಿಕ್ ಖಿತರಾನ್ ಆರ್ಸೆನಲ್ ಪಾಲಾಗಿದ್ದಾರೆ.
ಜೋಸ್ ಮೌರಿನ್ಹೋ ಹಾಗೂ ಪೆಪ್ ಗಾರ್ಡಿಯೋಲಾ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯುತ್ತಿದೆ. ಬದಲಿ ಒಪ್ಪಂದದ ಮೊತ್ತ ಸುಮಾರು 350,000 ಪೌಂಡ್ ನಿಂದ 500,000 ಪೌಂಡ್ ಪ್ರತಿ ವಾರದಂತೆ ಎನ್ನಲಾಗಿದೆ.
ಪೋಗ್ಬಾ ಸೇರಿದಂತೆ ಭಾರಿ ಮೊತ್ತಕ್ಕೆ ಆಟಗಾರರನ್ನು ಖರೀದಿಸುವುದು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಹೊಸದೇನಲ್ಲ. ಅಲೆಕ್ಸ್ ಫರ್ಗುಸನ್ 2013ರಲ್ಲಿ ನಿವೃತ್ತರಾದ ಬಳಿಕ ರೆಡ್ ಡೆವಿಲ್ ತಂಡ ಸೇರಿದ 11 ದುಬಾರಿ ಆಟಗಾರರ ವಿವರ ಮುಂದಿದೆ..
ಮರೌನೆ ಫೆಲ್ಲಾನಿ (27.5 ಮಿಲಿಯನ್ ಪೌಂಡ್)
ಫರ್ಗುಸನ್ ಸ್ಥಾನಕ್ಕೆ ಡೇವಿಡ್ ಮೊಯೆಸ್ ಬಂದ ಬಳಿಕ ಗರೇತ್ ಬೇಲ್, ಟೋನಿ ಕ್ರೂಸ್, ಸೆಸ್ ಫ್ಯಾಬ್ರೆಗಸ್ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಹೀಗೆ ಟಾಪ್ ಆಟಗಾರರು ರೆಡ್ ಡೆವಿಲ್ ಬಳಗ ಸೇರುವ ನಿರೀಕ್ಷೆಯಿತ್ತು. ಆದರೆ, ವಿಶ್ವದರ್ಜೆಯ ಆಟಗಾರರನ್ನು ಬದಿಗೊತ್ತಿ ಮರೌನೆ ಫೆಲ್ಲಾನಿ ಅವರನ್ನು ಆಯ್ಕೆ ಮಾಡಲಾಯಿತು. ಜೋಸ್ ಮೌರಿನ್ಹೋ ಮಾರ್ಗದರ್ಶನದಡಿಯಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿದ್ದಾರೆ.
ಯಶಸ್ವಿಯೇ ಅಥವಾ ಕಳಪೆಯೆ? ತಕ್ಕಮಟ್ಟಿಗೆ ಯಶಸ್ವಿ
ಯುವಾನ್ ಮಟ- 37.1 ಮಿಲಿಯನ್ ಪೌಂಡ್
ಸ್ಟಾನ್ ಫೋರ್ಡ್ ಬ್ರಿಡ್ಜ್ ನಿಂದ ಓಲ್ಡ್ ಟ್ರಾಫೊರ್ಡ್ ಗೆ ಬಂದ ಬಳಿಕ 30 ಪ್ರೀಮಿಯರ್ ಲೀಗ್ ಗೋಲು ಗಳಿಸಿದ್ದಾರೆ. 29 ವರ್ಷ ವಯಸ್ಸಿನ ಮಟ ಅವರು ಬೆಲೆಗೆ ತಕ್ಕ ಆಟವಾಡಿದ್ದಾರೆ.
* ಆಂಡ್ರೆ ಹೆರೆರಾ -29 ಮಿಲಿಯನ್ ಪೌಂಡ್-ಸಫಲ
* ಲೂಕ್ ಶಾ -30 ಮಿಲಿಯನ್ ಪೌಂಡ್- ವಿಫಲ
* ಏಂಜೆಲ್ ಡಿ ಮಾರಿಯಾ- 59.7 ಮಿಲಿಯನ್ ಪೌಂಡ್- ವಿಫಲ
* ಅಂಥೋನಿ ಮಾರ್ಟಿಯಲ್ -36 ಮಿಲಿಯನ್ ಪೌಂಡ್- ಯಶಸ್ವಿ
* ಎರಿಕ್ ಬೈಲಿ -30 ಮಿಲಿಯನ್ ಪೌಂಡ್-ಯಶಸ್ವಿ
* ಹೆನ್ರಿಕ್ ಖಿಟಾರಿಯಾನ್- 30 ಮಿಲಿಯನ್ ಪೌಂಡ್- ವಿಫಲ
* ಪೌಲ್ ಪೋಗ್ಬಾ -89.3 ಮಿಲಿಯನ್ ಪೌಂಡ್- ಯಶಸ್ವಿ
* ರೊಮೆಲು ಲುಕಾಕು -75 ಮಿಲಿಯನ್ ಪೌಂಡ್- ವಿಫಲ
* ನೆಮಾಂಜ ಮ್ಯಾಟಿಕ್ -40 ಮಿಲಿಯನ್ ಪೌಂಡ್- ಯಶಸ್ವಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications