ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯನ್ ಕಪ್ 2019: ಗಾಯಗೊಂಡ ಯುಎಇಗೆ ಭಾರತ ಸವಾಲು

By Isl Media
Asian Cup 2019: India must be wary of wounded UAE

ಅಬು ಧಾಬಿ, ಜನವರಿ 9: ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಆದರೆ ಸ್ಟೀನ್ ಕಾನ್‌ಸ್ಟೆಂಟೈನ್ ಪಡೆಗೆ ಈಗ ಯುಎಇ ವಿರುದ್ಧ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಇಲ್ಲಿನ ಜಾಯೇದ್ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಮೊದಲ ಪಂದ್ಯದ ಯಶಸ್ಸಿನ ಪುನರಾವರ್ತನೆಯ ನಿರೀಕ್ಷೆಯಲ್ಲಿದೆ.

ಥಾಯ್ಲೆಂಡ್ ವಿರುದ್ಧ ದ್ವಿತಿಯಾರ್ಧದಲ್ಲಿ ಭಾರತ ತೋರಿದ ಸಾಧನೆಗೆ ಕೋಚ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಥಮಾರ್ಧದಲ್ಲಿ 1-1 ರಲ್ಲಿ ಪಂದ್ಯ ಸಮಬಲಗೊಂಡರೂ ಭಾರತ ತಂಡ ಥಾಯ್ಲೆಂಡ್‌ನ ಅಟ್ಯಾಕ್ ವಿಭಾಗವನ್ನು ನಿಷ್ಕ್ರಿಯಗೊಳಿಸಿತು. ಈ ಜಯದೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಮೂರು ಗೋಲುಗಳ ಮುನ್ನಡೆಯೊಂದಿಗೆ.

'ನಮ್ಮದು ಅತ್ಯಂತ ಯುವ ಆಟಗಾರರಿಂದ ಕೂಡಿದ ತಂಡ. ಆತಿಥೇಯ ಯುಎಇ ವಿಭಿನ್ನವಾದ ತಂಡ ಎಂಬುದು ನಿಜ. ಅದು ಉತ್ತಮ ತಂಡ, ಆದರೆ ನಮ್ಮ ಮುಂದೆ ಅದು ಮತ್ತೊಂದು ತಂಡ,' ಎಂದು ಭಾರತದ ಕೋಚ್ ಕಾನ್‌ಸ್ಟೆಂಟೈನ್ ಹೇಳಿದ್ದಾರೆ.

ಸ್ಟ್ರೈಕರ್ ವಿಭಾಗದಲ್ಲಿ ಆಟಗಾದಲ್ಲಿ ಆಟಗಾರರು ಥಾಯ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದು ಜಯಕ್ಕೆ ಪ್ರಮುಖ ಕಾರಣವಾಗಿತ್ತು. ಸುನಿಲ್ ಛೆಟ್ರಿ ಎರಡು ಹಾಗೂ , ಜೆಜೆ ಮತ್ತು ಅನಿರುಧ್ ಥಾಪಾ ಇತರ ಎರಡು ಗೋಲುಗಳನ್ನು ಗಳಿಸಿದರು.

ಆಶಿಖ್ ಕುರುನಿಯಾನ್ ಗೋಲು ಗಳಿಸದೇ ಇರಬಹುದು, ಆದರೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೋಲು ಗಳಿಕೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಛೆಟ್ರಿ ಹಾಗೂ ಪುಣೆ ಸಿಟಿ ತಂಡದ ಆಟಗಾರ ಆಶಿಖ್ ಯಾವಾಗಲೂ ಚೆಂಡಿನ ಮೇಲೆಯೇ ತಮ್ಮ ಗಮನ ಹರಿಸುತ್ತಿದ್ದುದು ಗೋಲು ದಾಖಲಾಗಲು ಪ್ರಮುಖ ಕಾರಣವಾಗಿತ್ತು. ಅವರ ತಾಂತ್ರಿಕ ಆಟಕ್ಕೆ ಥಾಯ್ಲೆಂಡ್ ತಂಡದಲ್ಲಿ ಉತ್ತರ ಇರಲಿಲ್ಲ. ಆದರೆ ಥಾಯ್ಲೆಂಡ್‌ಗಿಂತ ಬಲಿಷ್ಠವಾಗಿರುವ ಯುಎಇ ವಿರುದ್ಧವೂ ಈ ಆಟಗಾರರು ಅದೇ ರೀತಿಯ ಪ್ರದರ್ಶನ ತೋರಬೇಕಾಗಿದೆ.

ಫಿಫಾ ರಾಂಕಿಂಗ್‌ನಲ್ಲಿ 79ನೇ ಸ್ಥಾನ

ಫಿಫಾ ರಾಂಕಿಂಗ್‌ನಲ್ಲಿ 79ನೇ ಸ್ಥಾನ

ಫಿಫಾ ರಾಂಕಿಂಗ್‌ನಲ್ಲಿ 79ನೇ ಸ್ಥಾನದಲ್ಲಿರುವ ಯುಎಇ ಗ್ರೂಪ್ ಎ ತಂಡದಲ್ಲಿ ಭಾರತಕ್ಕೆ ಕಠಿಣ ಸವಾಲನ್ನು ನೀಡಬಲ್ಲ ತಂಡವಾಗಿದೆ. ಅನಿರುಧ್ ಥಾಪಾ ಹಾಗೂ ಪ್ರಣೋಯ್ ಹಾಲ್ದರ್ ಅವರು ಮಿಡ್‌ಫೀಲ್ಡ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಯುಎಇ ತಂಡಕ್ಕೆ ಕಠಿಣ ಸವಾಲು ನೀಡುವ ಆಟಗಾರರು.

ಯುಎಇಯ ಕಠಿಣ ಸವಾಲು

ಯುಎಇಯ ಕಠಿಣ ಸವಾಲು

ಭಾರತ ತಂಡ ಬ್ಯಾಕ್ ವಿಭಾಗದಲ್ಲಿ ಯುಎಇಯ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಆಲಿ ಮಾಬ್ಖೌತ್ ಹಾಗೂ 2015ರ ವರ್ಷದ ಏಷ್ಯನ್ ಆಟಗಾರ ಅಹಮ್ಮದ್ ಖಾಲಿಲ್ ತಂಡದ ಪ್ರಮುಖ ಅಸ್ತ್ರವೆನಿಸಿದ್ದಾರೆ. ಮಾಬ್ಖೌತ್ ಏಳು ಗೋಲುಗಳನ್ನು ಗಳಿಸಿದ್ದು, ಯುಎಇ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಇದರಿಂದಾಗಿ ಸಂದೇಶ್ ಜಿಂಗಾನ್ ಹಾಗೂ ಅನಾಸ್ ಎಡಥೋಡಿಕಾ ಅವರು ಸದಾ ಎಚ್ಚರಿಕೆಯ ಆಟವನ್ನು ಆಡಬೇಕಾಗುತ್ತದೆ.

ಅಬ್ದುಲ್‌ ರೆಹಮಾನ್ ಗಾಯ

ಅಬ್ದುಲ್‌ ರೆಹಮಾನ್ ಗಾಯ

ಏಷ್ಯಾದ ಉತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಓಮರ್ ಅಬ್ದುಲ್‌ರೆಹಮಾನ್ ಅವರು ಗಾಯಗೊಂಡಿದ್ದು, ತಂಡಕ್ಕೆ ತುಂಬಲಾರದ ನಷ್ಟವೆನಿಸಿದೆ. ಆದರೆ ಅಲ್ಬೆರ್ಡೋ ಜಾಚ್ಚೆರೋನಿ ಪಡೆ ಭಾರತದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಅವರ ಕಡೆಗೆ ಗುರಿ ಇಡುವ ಆಟಗಾರರನ್ನು ಹೊಂದಿದೆ. ಮೊದಲ ಪಂದ್ಯದಲ್ಲಿ ಯುಎಇ ತಂಡ ಬಹರೆನ್ ವಿರುದ್ಧ ಡ್ರಾ ಸಾಧಿಸಿತ್ತು.

ಹೋರಾಟದ ಮನೋಭಾವ

ಹೋರಾಟದ ಮನೋಭಾವ

‘ಆಟಗಾರರಲ್ಲಿ ಹೋರಾಟದ ಮನೋಭಾವ ಇಲ್ಲದಿರುವುದು ನಾವು ಪಿಚ್‌ನಲ್ಲಿ ಕಾಣುವ ಅಂಶ. ಮುಂದಿನ ಪಂದ್ಯಕ್ಕೆ ಸಜ್ಜಾಗುವ ಈ ಸಂದರ್ಭದಲ್ಲಿ ನಾವು ತಂಡದ ಗಮನಕ್ಕೆ ಈ ವಿಷಯವನ್ನು ತರುತ್ತೇವೆ. ಭಾರತ ವಿರುದ್ಧದ ಪಂದ್ಯದಲ್ಲಿ ನಾವು ಹೋರಾಟದ ಮನೋಭಾವವನ್ನು ತೋರಿಸುತ್ತೇವೆ. ಅದು ಕೂಡ ವಿಭಿನ್ನವಾಗಿರುತ್ತದೆ,‘ ಎಂದು ಜಾಚ್ಚೆರೋನಿ ಹೇಳಿದ್ದಾರೆ.

Story first published: Wednesday, January 9, 2019, 17:16 [IST]
Other articles published on Jan 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X