Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ವಾರಂಟೈನ್ ನಿಯಮ ಉಲ್ಲಂಘನೆ: ಬ್ರೆಝಿಲ್ vs ಅರ್ಜೆಂಟೀನಾ ಪಂದ್ಯ ಅಮಾನತು

Brazil vs Argentina match suspended over quarantine breach

ಸಾವೋ ಪೌಲೋ: ಬ್ರೆಝಿಲ್‌ನಲ್ಲಿ ನಡೆಯಲಿದ್ದ ಅರ್ಜೆಂಟೀನಾ ಮತ್ತು ಬ್ರೆಝಿಲ್ ನಡುವಿನ ಫೀಫಾ ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯ ಅಮಾನತಾಗಿದೆ. ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅರ್ಜೆಂಟೀನಾ ಆಟಗಾರರು ಬ್ರೆಝಿಲ್ ದೇಶದ ಕೋವಿಡ್-19 ಕ್ವಾರಂಟೈನ್ ನಿಯಮ ಮೀರಿ ನಡೆದುಕೊಂಡಿರುವುದಾಗಿ ಬ್ರೆಝಿಲ್‌ನ ಅಧಿಕಾರಿಗಳು ದೂರಿದ್ದಾರೆ. ಹೀಗಾಗಿ ನಡೆಯಬೇಕಿದ್ದ ಪಂದ್ಯ ಅಮಾನತಾಗಿದೆ (ಸಾಂದರ್ಭಿಕ ಚಿತ್ರ).

ಫೀಫಾ ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯದ ಭಾಗವಾಗಿ ಅರ್ಜೆಂಟೀನಾ ತಂಡದ ಆ್ಯಷ್ಟನ್ ವಿಲ್ಲಾ ಗೋಲ್‌ ಕೀಪರ್ ಎಮಿಲಿಯಾನೊ ಮಾರ್ಟಿನೆಜ್, ಟೊಟೆನ್ಹ್ಯಾಮ್ ನ ಇಬ್ಬರು ಆಟಗಾರರಾದ ಕ್ರಿಸ್ಟಿಯನ್ ರೊಮೆರೊ ಮತ್ತು ಜಿಯೋವಾನಿ ಲೋ ಸೆಲ್ಸೊ ನಿಯೋ ಕ್ವಿಮಿಕಾ ಅರೆನಾದಲ್ಲಿ ಪಂದ್ಯ ಆಡುತ್ತಿದ್ದರು.

ಪಂದ್ಯ ಶುರುವಾಗಿ ಐದು ನಿಮಿಷದ ಬಳಿಕ ಬ್ರೆಝಿಲ್‌ನ ವೈದ್ಯಾಧಿಕಾರಿಗಳು ಅನ್ವಿಸ್ತಾ ಅಧಿಕಾರಿಗಳ ಜೊತೆ ಬಂದು ಪಂದ್ಯ ನಿಲ್ಲಿಸಿದ್ದಾರೆ. ಎಮಿಲಿಯಾನೊ ಮಾರ್ಟಿನೆಜ್, ಕ್ರಿಸ್ಟಿಯನ್ ರೊಮೆರೊ ಮತ್ತು ಜಿಯೋವಾನಿ ಲೋ ಸೆಲ್ಸೊ ಅಲ್ಲದೆ ಸ್ಟ್ಯಾಂಡ್‌ನಲ್ಲಿದ್ದ ಆ್ಯಷ್ಟನ್ ವಿಲ್ಲಾದ ಎಮಿಲಿಯಾನೊ ಬುಂಡಿಯಾ ಕೂಡ ಕ್ವಾರಂಟೈನ್ ನಿಮಯ ಮೀರಿರುವುದಾಗಿ ಅಧಿಕಾರಿಗಳು ದೂರಿದ್ದಾರೆ.

ಆಟ ಆರಂಭವಾಗಿ ಕೆಲವೇ ಕ್ಷಣದಲ್ಲಿ ಮೈದಾನಕ್ಕೆ ಪ್ರವೇಶಿಸಿದ ಅಧಿಕಾರಿಗಳು ಪಂದ್ಯ ನಿಲ್ಲಿಸಿದ್ದಾರೆ. ಆಟದ ಮಧ್ಯೆ ಅಧಿಕಾರಿಗಳು ಮೈದಾನಕ್ಕೆ ಪ್ರವೇಶಿಸಿರುವುದು ಗೊಂದಲಕ್ಕೀಡಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈಲ್ ಆಗಿದೆ. ಬ್ರೆಝಿಲ್‌ನಲ್ಲಿ ಕೋವಿಡ್ ಕಾರಣದಿಂದಾಗಿ ಈವರೆಗೆ 583,000 ಮಂದಿ ಬಲಿಯಾಗಿರುವುದು ವರದಿಯಾಗಿದೆ.

Story first published: Monday, September 6, 2021, 17:33 [IST]
Other articles published on Sep 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+