ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಆಟಗಾರನ ಮೇಲೆ ಉಗಿದ ಡಗ್ಲಾಸ್ ಕೋಸ್ಟಾಗೆ ನಾಲ್ಕು ಪಂದ್ಯಗಳ ನಿಷೇಧ

Douglas Costa gets four-match suspension for spitting

ರೋಮ್, ಸೆಪ್ಟೆಂಬರ್ 19: ಇಟಲಿಯಲ್ಲಿ ನಡೆಯುತ್ತಿರುವ ಸೀರೀ ಎ (ಇಟಲಿ ಲೀಗ್) ಫುಟ್ಬಾಲ್ ಟೂರ್ನಿಯ ವೇಳೆ ಎದುರಾಳಿ ಸಸ್ಸುಲೊ ಆಟಗಾರನ ಮೇಲೆ ಉಗಿದಿದ್ದಕ್ಕಾಗಿ ಯುವೆಂಟಸ್ ತಂಡದ ಪ್ರಮುಖ ಆಟಗಾರ ಡಗ್ಲಾಸ್ ಕೋಸ್ಟಾಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ.

'ಆರ್ಸೆನಲ್' ಮುಖ್ಯಸ್ಥರಾಗಿ ಗಝಿಡಿಸ್ ಸ್ಥಾನಕ್ಕೆ ರೌಲ್ ಸಾನ್ಲೆಹಿ ಆಯ್ಕೆ'ಆರ್ಸೆನಲ್' ಮುಖ್ಯಸ್ಥರಾಗಿ ಗಝಿಡಿಸ್ ಸ್ಥಾನಕ್ಕೆ ರೌಲ್ ಸಾನ್ಲೆಹಿ ಆಯ್ಕೆ

ಭಾನುವಾರ (ಸೆಪ್ಟೆಂಬರ್ 16) ನಡೆದ ಯುವೆಂಟಸ್-ಸಸ್ಸುಲೊ ತಂಡಗಳ ನಡುವಿನ ಜಿದ್ದಾಜಿದ್ದಿಯ ವೇಳೆ ಕೋಸ್ಟಾ ಅವರು ಸಸ್ಸುಲೊ ಆಟಗಾರ ಫೆಡೆರಿಕೊ ಡಿ ಫ್ರಾನ್ಸೆಸ್ಕೊ ಅವರ ಮೇಲೆ ಉಗಿದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಟಗಾರನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಟಲಿ ಲೀಗ್, ಯುವೆಂಟಸ್ ಪ್ರಮುಖ ಆಟಗಾರನಿಗೆ ಶಿಕ್ಷೆ ವಿಧಿಸಿದೆ.

ಸೆಪ್ಟೆಂಬರ್ 16ರಂದು ನಡೆದಿದ್ದ ಪಂದ್ಯದ ವೇಳೆ ಯುವೆಂಟಸ್ ತಂಡವೇ ಸಸ್ಸುಲೊ ಎದುರು 2-1ರ ಗೆಲುವು ದಾಖಲಿಸಿತ್ತು. ಆದರೆ ಅಂದಿನ ಪಂದ್ಯದ ವಿಡಿಯೋದಲ್ಲಿ ಡಗ್ಲಾಸ್ ಅವರ ಅನುಚಿತ ಅರ್ತನೆ ಸೆರೆಯಾಗಿತ್ತು. ಪಂದ್ಯದ ವೇಳೆ ಕೋಸ್ಟಾ ಅವರು ಎದುರಾಳಿ ಆಟಗಾರರಿಗೆ ಸುಖಾಸುಮ್ಮನೆ ಗುದ್ದಾಡುತ್ತಿದ್ದುದೂ ವಿಡಿಯೋದಲ್ಲಿ ದಾಖಲಾಗಿತ್ತು.

ಪಂದ್ಯದ ಬಳಿಕ 28ರ ಹರೆಯದ ಬ್ರೆಜಿಲ್ ಆಟಗಾರ ಡಗ್ಲಾಸ್ ಅವರು ತಪ್ಪಿಗಾಗಿ ಕ್ಷಮೆ ಯಾಚಿಸಿದಾದರೂ ನಾಲ್ಕು ಪಂದ್ಯಗಳ ನಿಷೇಧದ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ. ಟೂರ್ನಿಯಲ್ಲಿ ಫ್ರೊಸಿನಾನ್, ಬೊಲೊಗ್ನಾ, ನಪೋಲಿ ಮತ್ತು ಉಡಿನೆಸೆ ತಂಡಗಳ ಎದುರಿನ ಮುಂದಿನ ನಾಲ್ಕು ಪಂದ್ಯಗಳಲ್ಲಿ ಕೋಸ್ಟಾ ಭಾಗವಹಿಸುವಂತಿಲ್ಲ.

Story first published: Wednesday, September 19, 2018, 15:19 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X