ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬ್ರೆಜಿಲ್ -ವೇಗ ಮತ್ತು ಉದ್ವೇಗಕ್ಕೆ ಎಲ್ಲರೂ ಬೆಚ್ಚುವರು

By Mahesh
FIFA 2018 World Cup team analysis: Brazil: Selecao swagger is back

ಬೆಂಗಳೂರು, ಜೂನ್ 05: ಪ್ರತಿ ಬಾರಿ ಫೀಫಾ ವಿಶ್ವಕಪ್ ಟೂರ್ನಮೆಂಟ್ ಶುರುವಾಗುತ್ತಿದ್ದಂತೆ ನೆಚ್ಚಿನ ತಂಡ ಯಾವುದು ಎಂಬ ಪ್ರಶ್ನೆ ಬಂದರೆ, ಟಾಪ್ 5 ತಂಡಗಳ ಪೈಕಿ ಬ್ರೆಜಿಲ್ ಇದ್ದೇ ಇರುತ್ತದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಸಾಂಬಾ ನಾಡಿನ ತಂಡ, ಈ ಬಾರಿ ಪ್ರಶಸ್ತಿ ಗೆಲ್ಲಲು ಸಜ್ಜಾಗಿ ರಷ್ಯಾಕ್ಕೆ ಕಾಲಿಡಲಿದೆ.

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ. ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಹಾಲಿ ಚಾಂಪಿಯನ್ ಜರ್ಮನಿ ಜತೆಗೆ ಬ್ರೆಜಿಲ್ ಕೂಡಾ ಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಅಲ್ಲದೆ, ಅರ್ಜೆಂಟೀನಾ, ಸ್ಪೇನ್, ಬೆಲ್ಜಿಯಂ, ಪೋರ್ಚುಗಲ್ ಸೇರಿದಂತೆ ಅನೇಕ ತಂಡಗಳು ಫೇವರೀಟ್ ಪಟ್ಟಿಯಲ್ಲಿವೆ.

ಎ ಗುಂಪಿನಲ್ಲಿರುವ ಅತಿಥೇಯ ರಾಷ್ಟ್ರ ರಷ್ಯಾ ಏಷ್ಯಾದ ದಿಗ್ಗಜ ಸೌದಿ ಅರೇಬಿಯಾ ವಿರುದ್ಧ ವಿಶ್ವಕಪ್ ನ ಉದ್ಘಾಟನಾ ಪಂದ್ಯದಲ್ಲಿ ಜೂನ್ 14ರಂದು ಸೆಣಸಲಿದೆ. ಬ್ರೆಜಿಲ್ ತಂಡದ ವಿಶ್ಲೇಷಣೆ ಇಲ್ಲಿದೆ.

ದೇಶ: ಬ್ರೆಜಿಲ್
ಫೀಫಾ ಶ್ರೇಯಾಂಕ : 2
ಯಾವ ಗುಂಪು : ಇ ಗುಂಪು, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕೋಸ್ಟರಿಕಾ

ವೇಳಾಪಟ್ಟಿ:
ಜೂನ್ 17: vs ಸ್ವಿಟ್ಜರ್ಲೆಂಡ್ (ರೋಸ್ಟೊವ್, 11:30 IST)
ಜೂನ್ 22 : vs ಕೋಸ್ಟರಿಕಾ(ಕ್ರೆಸ್ಟೋವಸ್ಕಿ, 5.30 pm IST)
ಜೂನ್ 27: vs ಸೆರ್ಬಿಯಾ(ಓಟ್ಕ್ರಿಟಿ, 11:30 PM IST)

ಈ ಹಿಂದಿನ ವಿಶ್ವಕಪ್ : ಫೈನಲ್ ಹಂತ

ಶ್ರೇಷ್ಠ ಸಾಧನೆ : ಕಪ್ ವಿಜೇತ (1958, 1962, 1970, 1994, 2002)

ಸ್ಟಾರ್ ಆಟಗಾರರು: ನೇಮಾರ್ (ಪ್ಯಾರೀಸ್ ಸೈಂಟ್ ಜರ್ಮನ್ ಫಾರ್ವಡ್), ರಾಬರ್ಟೋ ಫಿರ್ಮಿನೋ(ಲಿವರ್ ಪೂಲ್, ಫಾರ್ವಡ್), ಫಿಲಿಫೆ ಕೌಟಿನ್ಹೋ(ಬಾರ್ಸಿಲೋನಾ, ಮಿಡ್ ಫೀಲ್ಡರ್), ಪೌಲಿನ್ಹೋ(ಬಾರ್ಸಿಲೋನಾ, ಮಿಡ್ ಫೀಲ್ಡರ್)

ಕೋಚ್ : ಅಡೆನೊರ್ ಲಿಯೊನಾರ್ಡೋ ಬಾಚಿ (ಚೀಚಿ)

ನಿರೀಕ್ಷೆ: ಗೆಲುವಿನ ನೆಚ್ಚಿನ ತಂಡವೆನಿಸಿದರೂ, ಕೋಸ್ಟರಿಕಾ, ಸೆರ್ಬಿಯಾ ಹಾಗ್ ಸ್ವಿಟ್ಜರ್ಲೆಂಡ್ ತಂಡಗಳು ಲೀಗ್ ಹಂತದಲ್ಲೇ ತೊಂದರೆ ಕೊಡಬಲ್ಲ ಸಾಮರ್ಥ್ಯ ಹೊಂದಿವೆ.

ನೇಮಾರ್, ಕಾಸೆಮಿರೋ, ಕೌಟಿನ್ಹೋ ಹಾಗೂ ಜೀಸಸ್ ತಮ್ಮ ಆಟದ ವೇಗವನ್ನು ಮಿತಿಗೊಳಿಸಿ ಸಮಯೋಚಿತ ಆಟವಾಡಿದರೆ ಎಂಥಾ ಎದುರಾಳಿಗಳನ್ನು ಬೇಕಾದರೂ ಹೊಡೆದುರುಳಿಸಬಹುದು.

1982, 1986ರ ಸಾಕ್ರಟೀಸ್, ಫಾಲ್ಕೊ, ಜಿಕೋ ಇದ್ದ ತಂಡವಂತೂ ಅಲ್ಲವಾದರೂ, ಲ್ಯಾಟೀನ್ ಅಮೆರಿಕದಿಂದ ಅರ್ಹತೆ ಗಳಿಸಿದ ಮೊದಲ ತಂಡವಾಗಿದ್ದು, ಈ ಬಾರಿ ತಮ್ಮ ವೈಫಲ್ಯವನ್ನು ತಿದ್ದುಕೊಂಡು ಕಣಕ್ಕಿಳಿಯಲು ಸಜ್ಜಾಗಿದೆ. ಅಲಿಸಾನ್(ಎಎಸ್ ರೋಮಾ) ಹಾಗು ಎಡರ್ಸನ್ (ಮ್ಯಾಂಚೆಸ್ಟರ್ ಸಿಟಿ) ಉತ್ತಮ ಫಾರ್ಮ್ ನಲ್ಲಿದ್ದು, ಬ್ರೆಜಿಲ್ ಎಲ್ಲಾ ವಿಭಾಗದಲ್ಲೂ ಉತ್ತಮ ನಿರ್ವಹಣೆ ತೋರುವ ಹುಮ್ಮಸ್ಸಿನಲ್ಲಿದೆ.

Story first published: Friday, June 8, 2018, 18:13 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X