ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Pele: ಕ್ರೀಡಾಂಗಣಗಳಿಗೆ ಪೀಲೆ ಹೆಸರಿಡಲು ಎಲ್ಲ ದೇಶಗಳಿಗೆ ಮನವಿ ಮಾಡಿದ ಫಿಫಾ

FIFA Has Requested All Countries To Name Stadiums For Pele

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರೆಜಿಲ್‌ನ ಫುಟ್ಬಾಲ್ ದಂತಕಥೆ ಪೀಲೆ ಕಳೆದ ಗುರುವಾರದಂದು ನಿಧನರಾದರು. ಮೂರು ಫಿಫಾ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿದ್ದಾರೆ.

ಹೀಗಾಗಿ ಕ್ರೀಡಾಂಗಣಕ್ಕೆ ಪೀಲೆ ಹೆಸರಿಡಲು ಫಿಫಾ (FIFA) ವಿಶ್ವದ ಎಲ್ಲಾ ದೇಶಗಳಿಗೆ ಮನವಿ ಮಾಡಿದೆ ಎಂದು ಫಿಫಾದ ಕ್ರೀಡಾ ಆಡಳಿತ ಮಂಡಳಿಯ ಮುಖ್ಯಸ್ಥ ಜಿಯಾನಿ ಇನ್ಫಾಂಟಿನೊ ಸೋಮವಾರ ಹೇಳಿದರು.

ಫುಟ್ಬಾಲ್ ದಿಗ್ಗಜ ಪೀಲೆ ನಿಧನ: ಅಂತಿಮಯಾತ್ರೆ ಬಗ್ಗೆ ಸ್ಯಾಂಟೋಸ್ ಕ್ಲಬ್ ಮಾಹಿತಿಫುಟ್ಬಾಲ್ ದಿಗ್ಗಜ ಪೀಲೆ ನಿಧನ: ಅಂತಿಮಯಾತ್ರೆ ಬಗ್ಗೆ ಸ್ಯಾಂಟೋಸ್ ಕ್ಲಬ್ ಮಾಹಿತಿ

82ನೇ ವಯಸ್ಸಿನಲ್ಲಿ ಗುರುವಾರ ನಿಧನರಾದ ಸಾರ್ವಕಾಲಿಕ ಶ್ರೇಷ್ಠ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಆಟಗಾರ ಪೀಲೆಗೆ ಅಂತಿಮ ಗೌರವ ಸಲ್ಲಿಸಲು ಇನ್ಫಾಂಟಿನೊ ಬ್ರೆಜಿಲ್‌ನ ಸ್ಯಾಂಟೋಸ್ ನಗರದಲ್ಲಿದ್ದಾರೆ.

ಫುಟ್ಬಾಲ್‌ನ 'ದಿ ಕಿಂಗ್' ಎಂದು ಕರೆಯಲ್ಪಡುವ ಈ ಮಾಜಿ ಆಟಗಾರನು ಮೊದಲು ಗೋಲು ಗಳಿಸಿದ ಕ್ರೀಡಾಂಗಣವಾದ ವಿಲಾ ಬೆಲ್ಮಿರೊದಲ್ಲಿ ಜಿಯಾನಿ ಇನ್ಫಾಂಟಿನೊ ಪತ್ರಕರ್ತರೊಂದಿಗೆ ಮಾತನಾಡಿದರು.

FIFA Has Requested All Countries To Name Stadiums For Pele

"ವಿಶ್ವದ ಪ್ರತಿಯೊಂದು ದೇಶಕ್ಕೂ ತಮ್ಮ ಫುಟ್ಬಾಲ್ ಕ್ರೀಡಾಂಗಣಗಳಲ್ಲಿ ಒಂದಕ್ಕೆ ಪೀಲೆ ಹೆಸರಿಡಲು ನಾವು ಕೇಳಿಕೊಳ್ಳುತ್ತೇವೆ," ಎಂದು ಹೇಳಿದರು. ಅವರ ತಮ್ಮ ದೀರ್ಘಕಾಲದ ಕ್ಲಬ್ ಸ್ಯಾಂಟೋಸ್ ಎಫ್‌ಸಿಗಾಗಿ ಆಡಿದ್ದರು.

ದಕ್ಷಿಣ ಅಮೇರಿಕಾ ಮತ್ತು ಬ್ರೆಜಿಲಿಯನ್ ಫುಟ್‌ಬಾಲ್ ಒಕ್ಕೂಟಗಳ ಮುಖ್ಯಸ್ಥರೊಂದಿಗೆ 24 ಗಂಟೆಗಳ ನಿರಂತರ ಮಾತುಕತೆಯಲ್ಲಿ ಭಾಗವಹಿಸಿದ ಜಿಯಾನಿ ಇನ್‌ಫಾಂಟಿನೊ ಅವರು ವಿಲಾ ಬೆಲ್ಮಿರೊ ಕ್ರೀಡಾಂಗಣದಲ್ಲಿ ಮೈದಾನದ ಮಧ್ಯದಲ್ಲಿ ಪೀಲೆಯ ತೆರೆದ ಕ್ಯಾಸ್ಕೆಟ್‌ಗೆ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ಪೀಲೆ ಇನ್ನಿಲ್ಲ: ಫುಟ್ಬಾಲ್ ದಿಗ್ಗಜ ಸಾಧಿಸಿರುವ ಕೆಲ ಮಹತ್ವದ ದಾಖಲೆಗಳು ಹಾಗೂ ಮೈಲಿಗಲ್ಲುಗಳುಪೀಲೆ ಇನ್ನಿಲ್ಲ: ಫುಟ್ಬಾಲ್ ದಿಗ್ಗಜ ಸಾಧಿಸಿರುವ ಕೆಲ ಮಹತ್ವದ ದಾಖಲೆಗಳು ಹಾಗೂ ಮೈಲಿಗಲ್ಲುಗಳು

'ನಾವು ಬಹಳ ದುಃಖದಿಂದ ಇಲ್ಲಿದ್ದೇವೆ, ಪೀಲೆ ಶಾಶ್ವತ. ಅವರು ಫುಟ್‌ಬಾಲ್‌ನ ಜಾಗತಿಕ ಐಕಾನ್' ಎಂದು ಫಿಫಾದ ಕ್ರೀಡಾ ಆಡಳಿತ ಮಂಡಳಿಯ ಮುಖ್ಯಸ್ಥ ಜಿಯಾನಿ ಇನ್ಫಾಂಟಿನೊ ಹೇಳಿದರು.

20ನೇ ಶತಮಾನದ ಶ್ರೇಷ್ಠ ಆಟಗಾರ ಎಂದು ಸಂಸ್ಥೆಯು ಹೆಸರಿಸಿರುವ ಪೀಲೆ ಅವರ ಗೌರವಾರ್ಥವಾಗಿ ಫಿಫಾ ಈಗಾಗಲೇ ಜ್ಯೂರಿಚ್‌ನಲ್ಲಿರುವ ತನ್ನ ಪ್ರಧಾನ ಕಚೇರಿಯ ಹೊರಗೆ ಶುಕ್ರವಾರ ವಿಶ್ವದ ಎಲ್ಲ ಧ್ವಜಗಳನ್ನು ಅರ್ಧಕ್ಕೆ ಹಾರಿಸಿತ್ತು.

ಫುಟ್ಬಾಲ್ ವೃತ್ತಿಜೀವನ ಇತಿಹಾಸದಲ್ಲಿ ಮೂರು ವಿಶ್ವಕಪ್‌ಗಳನ್ನು ಗೆದ್ದ ಜಗತ್ತಿನ ಏಕೈಕ ಆಟಗಾರ ಪೀಲೆ ಅವರು ಕ್ಯಾನ್ಸರ್‌ನೊಂದಿಗೆ ಸುದೀರ್ಘ ಹೋರಾಟದ ನಂತರ ಸಾವೊ ಪಾಲೊ ಆಸ್ಪತ್ರೆಯಲ್ಲಿ ನಿಧನರಾದರು.

ಸೋಮವಾರದ ತಡರಾತ್ರಿಯೂ ಸ್ಯಾಂಟೋಸ್‌ನ ಬೀದಿಗಳಲ್ಲಿ ಮಂಗಳವಾರದವರೆಗೆ ಪಾರ್ಥಿವ ಶರೀರದ ಮೆರವಣಿಗೆಯನ್ನು ಮಾಡಲಾಗುತ್ತದೆ, ನಂತರ ಖಾಸಗಿ ಸಮಾರಂಭವಾಗಿ ಅಂತ್ಯಕ್ರಿಯೆ ನೆರವೇರಲಿದೆ.

Story first published: Tuesday, January 3, 2023, 11:45 [IST]
Other articles published on Jan 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X