FIFA World Cup: ಪೊಲೆಂಡ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಫ್ರಾನ್ಸ್

ಕೈಲಿಯನ್ ಎಂಬಾಪೆ ಎನ್ನುವ ಫುಟ್ಬಾಲ್ ಮಾಂತ್ರಿಕನ ಎರಡು ಅದ್ಭುತ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ಪೊಲೆಂಡ್ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪೊಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಫಿಫಾ ವಿಶ್ವಕಪ್ 2022ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

2018ರಲ್ಲಿ ಫ್ರಾನ್ಸ್ ತಂಡದ ಚಾಂಪಿಯನ್‌ ಆದಾಗ ಹೀರೋ ಆಗಿದ್ದ ಎಂಬಾಪೆ 2022ರ ವಿಶ್ವಕಪ್‌ನಲ್ಲೂ ತಮ್ಮ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಭಾನುವಾರ ಕತಾರ್‌ನ ಅಲ್‌ತುಮಾಮ ಕ್ರೀಡಾಂಗಣದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಚಾಂಪಿಯನ್ ಆಟ ಆಡಿತು.

ಫ್ರಾನ್ಸ್ ಪರವಾಗಿ ಒಲಿವಿಯರ್ ಗಿರೌಡ್ 44ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮೊದಲಾರ್ಧದಲ್ಲಿ ಫ್ರಾನ್ಸ್ 1-0 ಮುನ್ನಡೆ ಸಾಧಿಸಿತು. 115 ಪಂದ್ಯಗಳಲ್ಲಿ 52 ಗೋಲು ಗಳಿಸುವ ಮೂಲಕ ಒಲಿವಿಯರ್ ಗಿರೌಡ್ ಫ್ರಾನ್ಸ್ ತಂಡದ ಸಾರ್ವಕಾಲಿಕ ಶ್ರೇಷ್ಠ ಗೋಲ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

ಇದಕ್ಕೂ ಮುನ್ನ ಗಿರೌಡ್ ಫಿಫಾ ವಿಶ್ವಕಪ್ 2022ರ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಸ್ಮರಣೀಯ ಗೆಲುವು ಹೊಡೆದಿದ್ದರು. ಎರಡು ಗೋಲ್ ಹೊಡೆಯುವ ಮೂಲ 51 ಗೋಲ್ ಗಳಿಸಿ ತಮ್ಮ ದೇಶದ ಥಿಯರಿ ಹೆನ್ರಿ ಗಳಿಸಿದ್ದ 51 ಗೋಲುಗಳ ದಾಖಲೆಯನ್ನು ಸರಿಗಟ್ಟಿದ್ದರು. ಈಗ 52ನೇ ಗೋಲು ಗಳಿಸಿ ಇತಿಹಾಸ ಸೃಷ್ಠಿಸಿದ್ದಾರೆ.

2 ಗೋಲು ಹೊಡೆದ ಕೈಲಿಯನ್ ಎಂಬಾಪೆ

ಇದಾದ ನಂತರ ಫ್ರಾನ್ಸ್‌ನ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ 74ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಫ್ರಾನ್ಸ್ 2-0 ಗೋಲುಗಳ ಮುನ್ನಡೆ ಸಾಧಿಸಿತು. ಈ ಗೋಲಿನಿಂದ ಫ್ರಾನ್ಸ್ ತನ್ನ ಜಯವನ್ನು ಖಚಿತಪಡಿಸಿಕೊಂಡಿತು.

ಹೆಚ್ಚುವರಿ ಸಮಯದಲ್ಲಿ ಮತ್ತೆ ಪೊಲೆಂಡ್ ಮಾಡಿದ ತಪ್ಪಿನ ಲಾಭ ಪಡೆದ ಎಂಬಾಪೆ (90+1) ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ 3-0 ಮುನ್ನಡೆ ಪಡೆದು ಸಂಭ್ರಮಿಸಿದರು. ಎಂಬಾಪೆ ಈ ವಿಶ್ವಕಪ್‌ನಲ್ಲಿ ಬಾರಿಸಿದ ಐದನೇ ಗೋಲು ಇದಾಗಿದೆ.

(90+9)ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಗಳಿಸುವ ಮೂಲಕ ಪೊಲೆಂಡ್ ಗೋಲುಗಳ ಅಂತರವನ್ನು 3-1ಕ್ಕೆ ಕಡಿಮೆಗೊಳಿಸಿತು. ಕೊನೆಯ ನಿಮಿಷದಲ್ಲಿ ರಾಬರ್ಟ್ ಲೆವಾಂಡೌಸ್ಕಿ ಈ ಗೋಲು ಗಳಿಸುವ ಮೂಲಕ ತಂಡಕ್ಕೆ ಸ್ವಲ್ಪ ಸಮಾಧಾನ ತಂದುಕೊಟ್ಟರು.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Monday, December 5, 2022, 5:40 [IST]
Other articles published on Dec 5, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X