ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್: ಸೆನೆಗಲ್ ವಿರುದ್ಧ ವಿರುದ್ಧ ಗೆದ್ದು ಬೀಗಿದ ನೆದರ್ಲೆಂಡ್ಸ್

FIFA World Cup: Netherlands win by 2-0 against Senegal in Group-A match

ಫಿಫಾ ವಿಶ್ವಕಪ್‌ನಲ್ಲಿ ಸೋಮವಾರ ನೆದರ್ಲೆಂಡ್ಸ ಹಾಗೂ ಸೆನೆಗಲ್ ತಂಡಗಳು ತಮ್ಮ ಆರಂಭಿಕ ಪಂದ್ಯಗಳನ್ನು ಆಡಿದೆ. ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಸೆನೆಗಲ್ ತಂಡದ ವಿರುದ್ಧ ಮೇಲುಗೈ ಸಾಧಿಸಿದ್ದು 2-0 ಅಂತರದಿಂದ ಗೆದ್ದು ಬೀಗಿದೆ. ಕೋಡಿ ಗ್ಯಾಕ್ಪೋ ಹಾಗೂ ಡ್ಯಾವ್ವಿ ಕ್ಲಾಸೆನ್ ಅವರ ಗೋಲುಗಳ ನೆರವಿನಿಂದಾಗಿ ನೆದರ್ಲೆಂಡ್ಸ್ ಕತಾರ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ.

ನೆದರ್ಲ್ಯಾಂಡ್ಸ್ ಈ ಪಂದ್ಯ ಆರಂಭವಾದ ಕೇವಲ ನಾಲ್ಕು ನಿಮಿಷಗಳಲ್ಲಿ ಮೊದಲ ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಿಕೊಂಡಿತ್ತು. ನೆದರ್ಲೆಂಡ್ಸ್‌ನ ಫಾರ್ವರ್ಡ್ ಆಟಗಾರ ಕೋಡಿ ಗ್ಯಾಕ್ಪೊ ಸ್ಟೀವನ್ ಬರ್ಗ್‌ವಿಜ್ನ್ ಅವರತ್ತ ಚೆಂಡು ನೀಡಿ ಅವಕಾಶ ಸೃಷ್ಟಿಸಿದ್ದರು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಇನ್ನು ಪಂದ್ಯದ 10ನೇ ನಿಮಿಷದಲ್ಲಿ ಸೆನೆಗಲ್ತಂಡಕೂಡ ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಿಕೊಂಡಿತಾದರೂ ಅದು ಯಶಸ್ಸಾಗಲಿಲ್ಲ. ಹೀಗೆ ಮೊದಲಾರ್ಧ ಯಾವುದೇ ಗೋಲಿಲ್ಲದೆ ಮುಕ್ತಾಯವಾಗಿತ್ತು.

IND vs NZ: 3ನೇ ಟಿ20 ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಮಿಸ್; ಈ ಬೌಲರ್‌ಗೆ ನಾಯಕತ್ವ ಹೊಣೆIND vs NZ: 3ನೇ ಟಿ20 ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಮಿಸ್; ಈ ಬೌಲರ್‌ಗೆ ನಾಯಕತ್ವ ಹೊಣೆ

ದ್ವಿತಿಯಾರ್ಧದಲ್ಲಿಯೂ ಸೆನೆಗಲ್ ಹಾಗೂ ನೆದರ್ಲೆಂಡ್ಸ್ ತಂಡದ ಆಟಗಾರರು ಸಾಕಷ್ಟು ಪೈಪೋಟಿ ನಡೆಸಿದರು. ಆದರೆ ಪಂದ್ಯದ 84ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಾಯಿತು. ಈ ಮೂಲಕ ನೆದರ್ಲೆಂಡ್ಸ್ ತಂಡ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ಕೋಡಿ ಗ್ಯಾಕ್ಪೋ ಈ ಸೋಲು ದಾಖಲಿಸುವಲ್ಲಿ ಯಶಸ್ವಿಯಾದರು.

ಅದಾದ ಬಳಿಕ ಹೆಚ್ಚುವರಿ ಅವಧಿಯಲ್ಲಿ ನೆದರ್ಲೆಂಡ್ಸ್ ತಂಡ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಡಚ್ ಪಡೆ ಸೆನೆಗಲ್ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಕತಾರ್ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ತಂಡ ಗೆಲುವಿನ ಆರಂಭವನ್ನು ಪಡೆಯುವಲ್ಲಿ ಯಶಸ್ವಿಯಾದರೆ ಸೆನೆಗಲ್ ತಂಡ ಸೋಲಿನೊಂದಿಗೆ ನಿರಾಸೆ ಅನುಭವಿಸಿದೆ.

ಇನ್ನು ಇದಕ್ಕೂ ಮುನ್ನ ನಡೆದ ಇಂಗ್ಲೆಂಡ್ ಹಾಗೂ ಇರಾನ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 6-2 ಗೋಲುಗಳ ಅಂತರದಿಂದ ಇರಾನ್ ತಂಡದ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಇಂಗ್ಲೆಂಡ್ ಶುಭಾರಂಭ ಮಾಡುವಲ್ಲಿ ಯಶಸ್ವಿಯಾಗಿದ್ದು ಇರಾನ್ ಸೋಲಿನ ಕಹಿ ಅನುಭವಿಸಿದೆ.

Story first published: Tuesday, November 22, 2022, 2:30 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X