
36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರುವ ಕನಸು
ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ರೊಯೇಶಿಯಾ ವಿರುದ್ಧ ಅರ್ಜೆಂಟಿನಾ 3-0 ಅಂತರದಿಂದ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ 1986 ಬಳಿಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಸೃಷ್ಟಿಸಿಕೊಂಡಿದೆ ಅರ್ಜೆಂಟಿನಾ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ಲಿಯೋನೆಲ್ ಮೆಸ್ಸಿ ಅವರ 172ನೇ ಪಂದ್ಯವಾಗಿರಲಿದೆ.

ಪ್ರತಿಕ್ರಿಯೆ ನೀಡಿದ ಮೆಸ್ಸಿ
ಅರ್ಜೆಂಟಿನಾದ ಮಾಧ್ಯಮವೊಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಮೆಸ್ಸಿ "ಈ ಸಾಧನೆ ಮಾಡಿರುವುದು ನನಗೆ ಬಹಳ ಖುಷಿ ನೀಡಿದೆ. ವಿಶ್ವಕಪ್ ಪ್ರಯಾಣವನ್ನು ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳಿಸಲು ಅವಕಾಶ ದೊರೆತಿರುವುದಕ್ಕೆ ಸಂತಸವಿದೆ" ಎಂದಿದ್ದಾರೆ ಲಿಯೋನೆಲ್ ಮೆಸ್ಸಿ. ಮುಂದುವರಿದು ಮಾತನಾಡಿರುವ ಅರ್ಜೆಂಟಿನಾ ನಾಯಕ "ಮುಂದಿನ ವಿಶ್ವಕಪ್‌ಗ ಬಹಳ ಸಮಯವಿದೆ. ಅದು ನನ್ನಿಂದ ಸಾಧ್ಯವಿದೆ ಎನಿಸುತ್ತಿಲ್ಲ. ಹಾಗಾಗಿ ಈ ರೀತಿಯಾಗಿ ಅಂತ್ಯಗೊಳಿಸುತ್ತಿರುವುದು ಉತ್ತಮ ಸಂಗತಿ" ಎಂದಿದ್ದಾರೆ ಮೆಸ್ಸಿ.

ಅರ್ಜೆಂಟಿನಾ ಪರ ಮೆಸ್ಸಿ ದಾಖಲೆ
35ರ ಹರೆಯದ ಲಿಯೋನೆಲ್ ಮೆಸ್ಸಿ ಐದನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಈ ಮೂಲಕ ನಾಲ್ಕು ವಿಶ್ವಕಪ್‌ನಲ್ಲಿ ಆಡಿರುವ ದಾಖಲೆ ಹೊಂದಿರುವ ಅರ್ಜೆಂಟಿನಾದ ದಿಗ್ಗಜ ಆಟಗಾರರಾದ ಡಿಗೋ ಮರಡೋನಾ ಹಾಗೂ ಜೇಜಿಯರ್ ಮಸ್ಕರಾನೋ ಅವರ ನಾಲ್ಕು ವಿಶ್ವಕಪ್‌ಗಳ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ
ಎರಡೇ ಸೆಮಿಫೈನಲ್‌ನಲ್ಲಿ ಗೆದ್ದ ತಂಡದೊಂದಿಗೆ ಚಾಂಪಿಯನ್ ಪಟ್ಟಕ್ಕೆ ಸೆಣೆಸಾಟ: ಇನ್ನು ಈ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯ ಫ್ರಾನ್ಸ್ ಹಾಗೂ ಮೊರಾಕ್ಕೋ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಅರ್ಜೆಂಟಿನಾ ಭಾನುವಾರ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕೆ ಹೋರಾಟ ನಡೆಸಲಿದೆ.