ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜರ್ಮನಿಗೆ ಫೀಫಾ ವಿಶ್ವಕಪ್, ಮೆಸ್ಸಿಗೆ ಗೋಲ್ಡನ್ ಬಾಲ್

By Prasad

ರಿಯೋ ಡಿ ಜನೈರೋ, ಜು. 14 : ಗಳಗಳನೆ ಅಳುತ್ತಿದ್ದ ಆ ಪುಟ್ಟ ಹುಡುಗ ಮಾತ್ರವಲ್ಲ ಇಡೀ ಜಗತ್ತು ಕಟ್ಟಕಡೆ ಘಳಿಗೆಯಲ್ಲಿ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿ ತನ್ನ ಮ್ಯಾಜಿಕ್ ಮಾಡಲೆಂದು ಎದುರು ನೋಡುತ್ತಿತ್ತು. ಆದರೆ, ಮೆಸ್ಸಿ ಮಾಂತ್ರಿಕತೆ ನಡೆಯಲೇ ಇಲ್ಲ. ಮ್ಯಾಜಿಕ್ ಮಾಡಿದ್ದು ಜರ್ಮನಿಯ ಮಾರಿಯೋ ಗೋಟ್ಜೆ.

ಯಸ್, 113ನೇ ನಿಮಿಷದಲ್ಲಿ ಆತ ಗಳಿಸಿದ ಅದ್ಭುತ ಗೋಲ್ ನಿಂದಾಗಿ ಜರ್ಮನಿ ಫೀಫಾ ವಿಶ್ವ ಚಾಂಪಿಯನ್ ಆಗಿದೆ. 90 ನಿಮಿಷಗಳ ಕಾಲ್ಚೆಂಡಿನಾಟದಲ್ಲಿ ಎರಡೂ ತಂಡ ಗೋಲ್ ಹೊಡೆಯಲು ವಿಫಲವಾಗಿದ್ದವು. ಹೆಚ್ಚುವರಿ 30 ನಿಮಿಷಗಳ ಅವಧಿ ಕೂಡ ಇನ್ನೇ ಮುಗಿದೇಬಿಟ್ಟಿತು ಎನ್ನುವಷ್ಟರಲ್ಲಿ ಮಾರಿಯೋ ಅರ್ಜೆಂಟಿನಾದ ಡಿಫೆನ್ಸ್ ಭೇದಿಸಿ ಗೋಲ್ ಬಾರಿಸಿದ್ದರು. [ವಿವಿಧ ಟ್ರೋಫಿಗಳ ವಿಜೇತರು]

Germany FIFA 2014 world cup champion

ಐದನೇ ಬಾರಿ ಫೀಫಾ ವಿಶ್ವಕಪ್ ಎತ್ತಿಹಿಡಿಯಲು ಕಾತುರದಿಂದಿದ್ದ ಅರ್ಜೆಂಟಿನಾದ ಕನಸನ್ನು ಜರ್ಮನಿ ಭಗ್ನಗೊಳಿಸಿದೆ. 24 ವರ್ಷಗಳಿಂದ ವಿಶ್ವಕಪ್ ಗೆಲ್ಲಬೇಕೆಂಬ ಜರ್ಮನಿಯ ಕನಸು ಕೊನೆಗೂ ನನಸಾಗಿದೆ. ಗೋಲು ಹೊಡೆಯಲು ವಿಫಲರಾದರೂ ಟೂರ್ನಿಯುದ್ದಕ್ಕೂ ಅದ್ಬುತ ಆಟ ಪ್ರದರ್ಶಿಸಿದ್ದ ಮೆಸ್ಸಿಗೆ ಗೋಲ್ಡನ್ ಬಾಲ್ ಲಭಿಸಿದೆ.

ತಮಾಷೆ ಅಂದ್ರೆ, ಮಾರಿಯೋ ಗೋಟ್ಜೆ ಹೊಡೆದಿರುವ ಗೋಲಿಗಿಂತ ಆತನ ಪ್ರೇಯಸಿ, ರೂಪಸಿ ಆನ್ ಕ್ಯಾಥ್ರಿನ್ ಬ್ರೋಮೆಲ್ ಬಗ್ಗೆಯೇ ಭಾರೀ ಚರ್ಚೆ ನಡೆಯುತ್ತಿದೆ. ಮಾಹಿಯೋ ಗೋಟ್ಜೆ (20 ವರ್ಷ 40 ದಿನ) ವಿಶ್ವಕಪ್ ಫುಟ್ಬಾಲ್ ಫೈನಲ್ ನಲ್ಲಿ ಗೋಲ್ ಗಳಿಸಿದ ಅತಿ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು ಜರ್ಮನಿಯವರೇ ಆದ ವೊಲ್ಫ್ ಗ್ಯಾಂಗ್ ವೇಬರ್ (20 ವರ್ಷ 34 ದಿನ) ಅತಿಕಿರಿಯ ಆಟಗಾರನಾಗಿದ್ದರು.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X