ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ಗೂ ಕರೊನಾ ಭೀತಿ: ಪ್ರೇಕ್ಷಕರಿಲ್ಲದೆ ಫೈನಲ್ ಪಂದ್ಯಕ್ಕೆ ನಿರ್ಧಾರ

Hero ISL Final to be held behind closed doors

ಇಂಡಿಯನ್ ಸೂಪರ್ ಲೀಗ್ ಫೂಟ್ಬಾಕ್ ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಫೈನಲ್ ಪಂದ್ಯ ಮಾತ್ರವೇ ಇನ್ನು ಬಾಕಿ ಉಳಿದಿದೆ. ಅತ್ಯಂತ ಯಶಸ್ವಿಯಾಗಿ ನಡೆದ ಈ ಟೂರ್ನಿಯ ಫೈನಲ್ ಪಂದ್ಯ ಮಾತ್ರ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಲಿದೆ.

ಹೌದು ಅದಕ್ಕೆ ಕಾರಣ ಬೇರೆ ಯಾವುದೂ ಅಲ್ಲ, ವಿಶ್ವವನ್ನೇ ನಡುಗಿಸಿದ ಕೊರೊನಾ ವೈರಸ್. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ಐಎಸ್‌ಎಲ್ ಫೈನಲ್ ಪಂದ್ಯವನ್ನು ಪ್ರೇಕ್ಷಕರಿಲ್ಲದೆ ನಡೆಸಲು ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಐಎಸ್‌ಎಲ್ ಟೂರ್ನಿಯ ಎಲ್ಲಾ ಪಂದ್ಯಗಳು ಮುಕ್ತಾಯವಾಗಿದ್ದು ಫೈನಲ್ ಪಂದ್ಯ ಮಾತ್ರವೆ ನಡೆಯಬೇಕಿದೆ. ಫೈನಲ್ ಪಂದ್ಯದಲ್ಲಿ ಎಟಿಕೆ ತಂಡ ಚೆನ್ನಯಿನ್ ಎಫ್‌ಸಿ ತಂಡವನ್ನು ಎದುರಿಸಲಿದೆ. ಆದರೆ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರು ಇಲ್ಲದ ಆಡುವ ತೀರ್ಮಾನವನ್ನು ಐಎಸ್‌ಎಲ್ ಆಯೋಜಕರು ತೀರ್ಮಾನಿಸಿದ್ದಾರೆ.

ಕೊರೊನಾ ವೈರಸ್ ಸದ್ಯ ಭಾರತವನ್ನೂ ಕಂಗೆಡಿಸಿದ್ದು ಎಲ್ಲಾ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ಕ್ರೀಡಾ ಕ್ಷೇತ್ರವೂ ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದು ನಿಗದಿಯಾಗಿರುವ ಪಂದ್ಯಗಳ ಆಯೋಜನೆಗೆ ತಡಕಾಡುವಂತಾಗಿದೆ.

ಫೂಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ ತನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದು ಈಗಾಗಲೆ ಮಾರಾಟ ಮಾಡಿರುವ ಟಿಕೆಟ್‌ಗಳ ಹಣವನ್ನು ವಾಪಾಸ್ ನೀಡಲು ಕ್ರಮಕೈಗೊಳ್ಳಲಾಗಯತ್ತದೆ ಎಂದು ತಿಳಿಸಿದೆ.

ಇದೇ ಶನಿವಾರ ಐಎಸ್‌ಎಲ್ ಫೈನಲ್ ಪಂದ್ಯ ನಡೆಯಲಿದೆ. ಗೊವಾದ ಫಟೋರ್ಡಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಸ್ಟಾರ್‌ಸ್ಟಪೋರ್ಟ್ಸ್ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ.

Story first published: Friday, March 13, 2020, 9:23 [IST]
Other articles published on Mar 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X