ನಾನೇನು ದೇವರಲ್ಲ, ಸಾಮಾನ್ಯ ಆಟಗಾರ: ಮರಡೋನಾ

Posted By:

ಕೋಲ್ಕತಾ, ಡಿಸೆಂಬರ್ 12: 'ನಾನೇನು ದೇವರಲ್ಲ, ಒಬ್ಬ ಸಾಮಾನ್ಯ ಫುಟ್ಬಾಲ್ ಆಟಗಾರ' ಎಂದು ಫುಟ್ಬಾಲ್ ಲೋಕದ ಜೀವಂತ ದಂತಕಥೆ ಡಿಯಾಗೋ ಮರಡೋನಾ ಅವರು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲ್ಕತಾಗೆ ಬಂದಿರುವ ಮರಡೋನಾ ಅವರು, 'ಕೋಲ್ಕತಾಗೆ ಮತ್ತೊಮ್ಮೆ ಬರುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ' ಎಂದರು.

ಕೋಲ್ಕತಾಗೆ ಬಂದಿಳಿದ ಫುಟ್ಬಾಲ್ ದಿಗ್ಗಜ ಮರಡೋನಾ

'ಭಾರತದಲ್ಲಿ ಫುಟ್ಬಾಲ್ ಕ್ರೇಜ್ ಹೆಚ್ಚಾಗುತ್ತಿದ್ದು, ಹೊಸ ಅಭಿಮಾನಿಗಳನ್ನು ಪಡೆಯುತ್ತಿದ್ದೇನೆ ಎಂದು ಶ್ರೀಭೂಮಿ ಸ್ಫೋರ್ಟಿಂಗ್ ಕ್ಲಬ್ ಹಮ್ಮಿಕೊಂಡಿದ್ದ ದಾನ ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 1986ರ ವಿಶ್ವಕಪ್ ವಿಜೇತ ಮರಡೋನಾ ಅವರು ಈ ಹಿಂದೆ ಡಿಸೆಂಬರ್ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದರು.

ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತಂಡ ಹಾಗೂ ಡಿಯಾಗೋ ಮರಡೋನಾ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು, ಬರಸಾತ್ ಸ್ಟೇಡಿಯಂನಲ್ಲಿ ಡಿಸೆಂಬರ್ 12ರಂದು ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ.

ಹಲವು ಕಾರ್ಯಕ್ರಮಗಳಲ್ಲಿ ಮರಡೋನಾ

ಹಲವು ಕಾರ್ಯಕ್ರಮಗಳಲ್ಲಿ ಮರಡೋನಾ

ಕೋಲ್ಕತಾದ ರಾಜರ್ಹಾತ್ ನ್ಯೂಟೌನ್ ನಲ್ಲಿರುವ ಹೋಟೆಲ್ ನಲ್ಲಿರುವ ಮರಡೋನಾ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಮರಡೋನಾ ಹಾಗೂ ಅವರ ಗೆಳತಿಯನ್ನು ಬೆಂಗಾಲಿ ಸಾಂಪ್ರದಾಯದಂತೆ ಸತ್ಕರಿಸಿ, ಸನ್ಮಾನಿಸಲಾಯಿತು, ಬಿಳಿ ಉತ್ತರೀಯ, ಚಿನ್ನದ ಬ್ರೇಸ್ ಲೆಟ್ ಉಡುಗೊರೆಯಾಗಿ ನೀಡಲಾಯಿತು.

ಕ್ಯಾನ್ಸರ್ ಪೀಡಿತ ರೋಗಿಗಳ ಭೇಟಿ

ಕ್ಯಾನ್ಸರ್ ಪೀಡಿತ ರೋಗಿಗಳ ಭೇಟಿ

ಸೆಪ್ಟೆಂಬರ್ ತಿಂಗಳಿನಲ್ಲಿ ದುರ್ಗಾ ಪೂಜೆ ಸಮಯದಲ್ಲಿ ಬಂದು ಪೆಂಡಾಲ್ ಉದ್ಘಾಟಿಸಬೇಕಿದ್ದ ಮರಡೋನಾ ಅವರು ಈಗ ಕ್ಯಾನ್ಸರ್ ಪೀಡಿತ ರೋಗಿಗಳನ್ನು ಭೇಟಿ ಮಾಡಿದರು.

11 ಮಂದಿ ಕ್ಯಾನ್ಸರ್ ರೋಗಿಗಳಿಗೆ ತಲಾ 10 ಸಾವಿರ ರುಗಳ ಚೆಕ್ ವಿತರಿಸಿದರು. ಜತೆಗೆ ಹವಾನಿಯಂತ್ರಿತ ಆಂಬ್ಯುಲೆನ್ಸ್ ಗಳನ್ನು ಸೇವೆಗೆ ಮುಕ್ತಗೊಳಿಸಿದರು.

1986ರ ವಿಶ್ವಕಪ್ ಎತ್ತಿ ಹಿಡಿದಿರುವ ಪ್ರತಿಮೆ

1986ರ ವಿಶ್ವಕಪ್ ಎತ್ತಿ ಹಿಡಿದಿರುವ ಪ್ರತಿಮೆ

ಕ್ಯಾನ್ಸರ್ ರೋಗಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ಪಾರ್ಕೊಂದರಲ್ಲಿ 12 ಅಡಿ ಎತ್ತರದ 1986ರ ವಿಶ್ವಕಪ್ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಅನಾವರಣಗೊಳಿಸಿದರು. ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದರು.

ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ

ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ

ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ತಂಡ ಹಾಗೂ ಡಿಯಾಗೋ ಮರಡೋನಾ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು, ಬರಸಾತ್ ಸ್ಟೇಡಿಯಂನಲ್ಲಿ ಡಿಸೆಂಬರ್ 12ರಂದು ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ಸಿಗಲಿದೆ.

Story first published: Tuesday, December 12, 2017, 10:02 [IST]
Other articles published on Dec 12, 2017
Read in English: I am not a God: Maradona
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ