ಅಂತಾರಾಷ್ಟ್ರೀಯ ಫ್ರೆಂಡ್ಲಿ ಪಂದ್ಯದಲ್ಲಿ ನೇಪಾಳ ವಿರುದ್ಧ ಡ್ರಾ ಸಾಧಿಸಿದ ಭಾರತ

ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿ ಗುರುವಾರ (ಸೆಪ್ಟೆಂಬರ್ 2) ನಡೆದ ಭಾರತ ಮತ್ತು ನೇಪಾಳ ನಡುವಿನ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ. ಮೂರು ಪಂದ್ಯಗಳ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಸದ್ಯ ಸಮಬಲದ ಪ್ರದರ್ಶನ ನೀಡಿದೆ.

ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್ಟಿ20 ವಿಶ್ವಕಪ್‌ನಲ್ಲಿ ನಮಗಿಂತಲೂ ಭಾರತದ ಮೇಲೆ ಒತ್ತಡ ಹೆಚ್ಚು: ಬಾಬರ್

ನೇಪಾಳದ ದಶರಥ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೋಲ್ ಖಾತೆ ತೆರೆದಿದ್ದು ನೇಪಾಳ. ಪ್ರಥಮಾರ್ಧದ 36ನೇ ನಿಮಿಷದಲ್ಲಿ ನೇಪಾಳದ ಅಂಜನ್ ಬಿಸ್ತಾ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಪ್ರಥಮಾರ್ಧದಲ್ಲಿ ಭಾರತ ಗೋಲ್ ಬಾರಿಸಲು ಪ್ರಯತ್ನಿಸಿತಾದರೂ ಎದುರಾಳಿ ತಂಡ ಅದಕ್ಕೆ ಅವಕಾಶ ಕೊಡಲಿಲ್ಲ.

ಭಾರತ ಪ್ರಥಮಾರ್ಧದಲ್ಲಿ ಗೋಲ್ ದಾಖಲಿಸಲಾದಿದ್ದಾಗ ಒತ್ತಡಕ್ಕೆ ಒಳಗಾಗಿತ್ತು. ಬಳಿಕ ದ್ವಿತೀಯಾರ್ಧದ ವೇಳೆ ಬದಲಿ ಆಟಗಾರನಾಗಿ ಅನಿರುದ್ಧ್ ಥಾಪ ಅವರನ್ನು ಕಣಕ್ಕಿಳಿಸಲಾಯ್ತು. ಬದಲಿ ಆಟಗಾರನಾಗಿ ಬಂದ ಥಾಪ, 60ನೇ ನಿಮಿಷದಲ್ಲಿ ಗೋಲ್ ಬಾರಿಸಿ ಅಂಕವನ್ನು 1-1ರಿಂದ ಸರಿದೂಗಿಸಿಕೊಂಡರು.

ಪಿಕೆಎಲ್ 2021: ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡಪಿಕೆಎಲ್ 2021: ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡ

ಭಾರತ ಮತ್ತು ನೇಪಾಳ ತಂಡಗಳು ಸೆಪ್ಟೆಂಬರ್‌ 5ರಂದು ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸಂಜೆ 4.45 PMಗೆ ಪಂದ್ಯ ಶುರುವಾಗಲಿದೆ. ಇದು ಬಿಟ್ಟರೆ ಅಕ್ಟೋಬರ್‌ 10ಕ್ಕೆ ಎಸ್‌ಎಎಫ್‌ಎಫ್‌ ಚಾಂಪಿಯನ್ಸ್ ಗ್ರೂಪ್ ಹಂತದಲ್ಲಿ ಮತ್ತೆ ಭಾರತ-ನೇಪಾಳ ತಂಡಗಳು ಕಾದಾಡಲಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Thursday, September 2, 2021, 23:34 [IST]
Other articles published on Sep 2, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X