ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇಟ್ರಿಗೆ ಕೊರೊನಾ ವೈರಸ್ ದೃಢ

Indian football captain Sunil Chhetri tests positive for COVID19

ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇಟ್ರಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಈ ಬಗ್ಗೆ ಸ್ವತಃ ಸುನಿಲ್ ಛೇಟ್ರಿ ಗುರುವಾರ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ತುಂಬಾ ಸಂತಸ ಪಡದಂತಾ ಮಾಹಿತಿಯಿದು, ನಾನು ಕೊರೊನಾ ಪರೀಕ್ಷೆಯಲ್ಲಿ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಸಕಾರಾತ್ಮಕ ಸಂಗತಿಯೆಂದರೆ ನಾನು ಆರೋಗ್ಯವಾಗಿದ್ದೇನೆ. ಇದರಿಂದ ಆದಷ್ಟು ಶೀಘ್ರವಾಗಿ ಚೇತರಿಸಿಕೊಂಡು ಬರುತ್ತೇನೆ. ಶೀಘ್ರದಲ್ಲೇ ಮತ್ತೆ ಫುಟ್ಬಾಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದೇನೆ" ಎಂದು ಟ್ವಿಟ್ಟರ್‌ನಲ್ಲಿ ಛೇಟ್ರಿ ಬರೆದುಕೊಂಡಿದ್ದಾರೆ.

ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಐಸಿಸಿ ಸಿಇಒ ಮನು ಸಾಹ್ನಿಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಐಸಿಸಿ ಸಿಇಒ ಮನು ಸಾಹ್ನಿ

ಇನ್ನು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರು ಸುರಕ್ಷತಾ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. "ಎಲ್ಲಾ ಸುರಕ್ಷತಾ ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲು ಎಲ್ಲರಿಗೂ ನೆನಪಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ" ಎಂದು ಸುನಿಲ್ ಛೇಟ್ರಿ ಬರೆದುಕೊಂಡಿದ್ದಾರೆ.

ಸುನಿಲ್ ಛೇಟ್ರೀ ಇತ್ತೀಚೆಗಷ್ಟೇ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಮುನ್ನಡೆಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ಸುನಿಲ್ ಛೇಟ್ರಿ ನೇತೃತ್ವದ ತಂಡ 7ನೇ ಸ್ಥಾನಕ್ಕೆ ತೃಪ್ತಿಪಟ್ಟು ಟೂರ್ನಿಯಿಂದ ಹೊರಬಿದ್ದಿತು. ಐದು ಪಂದ್ಯಗಳನ್ನು ಗೆದ್ದ ಬಿಎಸ್‌ಫ್, 7 ಡ್ರಾ ಹಾಗೂ 8 ಸೋಲು ಕಂಡು 22 ಅಂಕಗಳಿಸಿ ಲೀಗ್‌ಹಂತದಿಂದಲೇ ತಂಡ ಹೊರಬಿದ್ದಿತ್ತು.

'ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌'ಗೆ ಬಲಿಯಾದ ಗುಣತಿಲಕ: ವೈರಲ್ ವಿಡಿಯೋ'ಅಬ್ಸ್ಟ್ರಾಕ್ಟಿಂಗ್‌ ದ ಫೀಲ್ಡ್‌'ಗೆ ಬಲಿಯಾದ ಗುಣತಿಲಕ: ವೈರಲ್ ವಿಡಿಯೋ

ಸುನಿಲ್ ಛೇಟ್ರಿ ಕೊರೊನಾ ವೈರಸ್‌ಗೆ ತುತ್ತಾಗಿರುವ ಕಾರಣ ಮುಂಬರುವ ಒಮನ್ ಹಾಗೂ ಯುಎಇ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರ ಎಂಬುದು ಪ್ರಶ್ನೆಯಾಗಿದೆ. ಈ ಪಂದ್ಯ ಮಾರ್ಚ್ 25 ಹಾಗೂ 29ರಂದು ದುಬೈನಲ್ಲಿ ನಡೆಯಲಿದೆ.

Story first published: Friday, March 12, 2021, 10:17 [IST]
Other articles published on Mar 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X