ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ನಾಲ್ಕರಲ್ಲೇ ಭದ್ರವಾದ ನಾರ್ತ್ ಈಸ್ಟ್ ಯುನೈಟೆಡ್

By Isl Media
ISL 2019: NorthEast win a point but don’t make much progress

ಗುವಾಹಟಿ, ಫೆಬ್ರವರಿ 8: ಡೆಲ್ಲಿ ಡೈನಮೋಸ್ ಪರ ಮಾರ್ಕಸ್ ತೇಬರ್ (67ನೇ ನಿಮಿಷ ), ನಾರ್ತ್ ಈಸ್ಟ್ ಯುನೈಟೆಡ್ ಪರ ಬಾರ್ತಲೋಮ್ಯೊ ಒಗ್ಬಚೆ ಪೆನಾಲ್ಟಿ ಶೂಟ್ ಮೂಲಕ (71ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಇಂಡಿಯನ್ ಸೂಪರ್ ಲೀಗ್ ನ 71ನೇ ಪಂದ್ಯ 1-1 ಗೋಲಿನಿಂದ ಡ್ರಾ ಗೊಂಡಿತು. ಬಾರ್ತಲೋಮ್ಯೊ ಒಗ್ಬಚೆ 11ನೇ ಗೋಲು ಗಳಿಸಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮುಂದುವರಿದರು. ಈ ಫಲಿತಾಂಶದ ಮೂಲಕ ನಾರ್ತ್ ಈಸ್ಟ್ ಯುನೈಟೆಡ್ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಶೇಷ ಭಾರತಕ್ಕೆ ರಹಾನೆ, ಭಾರತ 'ಎ' ತಂಡಕ್ಕೆ ಕೆಎಲ್ ರಾಹುಲ್ ನಾಯಕಶೇಷ ಭಾರತಕ್ಕೆ ರಹಾನೆ, ಭಾರತ 'ಎ' ತಂಡಕ್ಕೆ ಕೆಎಲ್ ರಾಹುಲ್ ನಾಯಕ

ಎರಡೂ ತಂಡಗಳು 45 ನಿಮಿಷಗಳ ಅತ್ಯಂತ ಎಚ್ಚರಿಕೆಯಿಂದ ಆಟವಾಡಿದವು. ಪರಿಣಾಮ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಕಂಡಿತು. ಡೆಲ್ಲಿ ತಂಡ ಆರಂಭದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಆದರೆ ಗೋಲಿಗೆ ಯಾವುದೇ ಅವಕಾಶ ಇರಲಿಲ್ಲ.

ವಿಶ್ವ ನಂ.1 ಆಟಗಾರ್ತಿ ಮಂಧಾನರ ಬ್ಯಾಟಿಂಗ್‌ಗೆ ಚಾಹಲ್ ಸ್ಫೂರ್ತಿಯಂತೆ!ವಿಶ್ವ ನಂ.1 ಆಟಗಾರ್ತಿ ಮಂಧಾನರ ಬ್ಯಾಟಿಂಗ್‌ಗೆ ಚಾಹಲ್ ಸ್ಫೂರ್ತಿಯಂತೆ!

ನಾರ್ತ್ ಈಸ್ಟ್‌ನ ಗೋಲ್‌ಕೀಪರ್ ಟಿ.ಪಿ. ರೆಹನೇಶ್ ಉಡುಗೊರೆಯಾಗಿ ನೀಡಿದ ಚೆಂಡನ್ನು ಲಾಲಿಯಾನ್ಜುವಾಲ ಚಾಂಗ್ಟೆಗೆ ಗೋಲು ಗಳಿಸಬಹುದಾಗಿತ್ತು, ಆದರೆ ತುಳಿದ ಚೆಂಡು ನೇರವಾಗಿ ರೆಹನೇಶ್ ಅವರ ಕೈಯಲ್ಲಿ ಭದ್ರವಾಗಿತ್ತು. ಆತಿಥೇಯ ನಾರ್ತ್ ಈಸ್ಟ್ ಕೂಡ ಎಚ್ಚರಿಕೆಯ ಆಟವಾಡಿತ್ತು. ಪನಾಗಿಯೋಟಿಸ್ ಟ್ರಿಯಾಡಿಸ್‌ಗೆ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಗುರಿ ಗೋಲ್‌ಬಾಕ್ಸ್‌ಗಿಂತ ಹೊರಗಡೆ ಸಾಗಿತ್ತು.

ಇತ್ತಂಡಗಳು ಮುಖಾಮುಖಿ

ಇತ್ತಂಡಗಳು ಮುಖಾಮುಖಿ

ಹೀರೋ ಇಂಡಿಯನ್ ಸೂಪರ್ ಲೀಗ್‌ನ 71ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಡೆಲ್ಲಿ ಡೈನಮೋಸ್ ತಂಡಗಳು ಮುಖಾಮುಖಿಯಾದವು. ನಿರಂತರ ಎರಡು ಸೋಲುಗಳಿಂದ ಕಂಗೆಟ್ಟಿರುವ ನಾರ್ತ್ ಈಸ್ಟ್‌ಗೆ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಳ್ಳಬೇಕಾದರೆ ಇಲ್ಲಿ ಜಯದ ಅಗತ್ಯವಿದೆ. ಏಕೆಂದರೆ ಈ ಸ್ಥಾನಕ್ಕಾಗಿ ಜೆಮ್ಷೆಡ್ಪುರ ಹಾಗೂ ಎಟಿಕೆ ತಂಡಗಳು ಈ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿರುವುದರಿಂದ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ಸಹಜ.

ತಂಡಕ್ಕೆ ಜಯದ ಅಗತ್ಯವಿದೆ

ತಂಡಕ್ಕೆ ಜಯದ ಅಗತ್ಯವಿದೆ

ಆದರೆ ಇಲ್ಲಿ ಪರ್ವತಪ್ರದೇಶದ ತಂಡಕ್ಕೆ ಜಯದ ಅಗತ್ಯವಿದೆ. ನಾರ್ತ್ ಈಸ್ಟ್ ಹಿಂದಿನ ಆರು ಪಂದ್ಯಗಳಲ್ಲಿ ಜಯ ಕಂದಿರುವುದು ಒಂದರಲ್ಲಿ ಮಾತ್ರ. ಜೆಮ್ಷೆಡ್ಪುರ ತಂಡಕ್ಕಿಂತ ಮೂರು ಅಂಕ ಮೇಲುಗೈ ಸಾಧಿಸಿರುವ ನಾರ್ತ್ ಈಸ್ಟ್‌ಗೆ ಇಲ್ಲಿನ ಜಯ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಸ್ಪಷ್ಟ. ಇಲ್ಲವಾದರಲ್ಲಿ ಈ ಸ್ಥಾನ ತಾತ್ಕಾಲಿಕವೆನಿಸಲಿದೆ.

ಅಧಿಕ ಗೋಲ್‌ನಲ್ಲಿ 2ನೇ ಸ್ಥಾನ

ಅಧಿಕ ಗೋಲ್‌ನಲ್ಲಿ 2ನೇ ಸ್ಥಾನ

ನಾಯಕ ಬಾರ್ತಲೋಮ್ಯೊ ಒಗ್ಬಚೆ 10 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೋವಾದ ಫೆರಾನ್ ಕೊರೊಮಿನಾಸ್ ಅಗ್ರ ಸ್ಥಾನದಲ್ಲಿದ್ದಾರೆ. ಪ್ರವಾಸಿ ಡೆಲ್ಲಿ ತಂಡ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಪ್ಲೇ ಆಫ್ನಿಂದ ದೂರ ಸರಿದಿದೆ. ಆದರೆ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಮುನ್ನಡೆವ ತಂಡಕ್ಕೆ ಆಘಾತ ನೀಡುವ ಲೆಕ್ಕಾಚಾರದಲ್ಲಿದೆ. ಗೋವಾ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿರುವುದು ಡೆಲ್ಲಿ ತಂಡದ ಅದ್ಭುತ ಸಾಧನೆಯಾಗಿದೆ.

ಡೆಲ್ಲಿ ಗೆಲ್ಲಲೇಬೇಕು

ಡೆಲ್ಲಿ ಗೆಲ್ಲಲೇಬೇಕು

ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಅವಕಾಶವನ್ನು ಹಸಿರಾಗಿಸಿಕೊಳ್ಳಬೇಕಾದರೆ ಡೆಲ್ಲಿಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಡೆಲ್ಲಿ ತಂಡ ಕೊನೆಯ ಹದಿನೈದು ನಿಮಿಷಗಳ ಆಟದಲ್ಲಿ 15 ಗೋಲುಗಳನ್ನು ನೀಡಿರುವುದು ಗಮನಾರ್ಹ ಮತ್ತು ಆತಂಕ. ಅದೇ ರೀತಿ ಕೇರಳ ತಂಡ ಕೂಡ 9 ಗೋಲುಗಳನ್ನು ನೀಡಿದೆ. ಡೆಲ್ಲಿ ತಂಡ ಕಳೆದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಗೋಲನ್ನು ಎದುರಾಳಿ ತಂಡಕ್ಕೆ ನೀಡಿದೆ. ಇತ್ತಂಡಗಳು ಆರು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮೂರು ಜಯ ಮೂರು ಡ್ರಾ ಕಂಡಿವೆ.

Story first published: Friday, February 8, 2019, 12:34 [IST]
Other articles published on Feb 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X