ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬೆಂಗಳೂರು ಅಜೇಯವಾಗಿ ಉಳಿಯುವುದೇ ಅಥವಾ ಇದೊಂದು ರಣತಂತ್ರವೇ?

ಮುಂಬೈ ಫೆಬ್ರವರಿ 11 : ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅದ್ಭುತ ಆರಂಭ ಕಂಡು, ಇತರ ತಂಡಗಳಿಗಿಂತ ಭಿನ್ನವಾಗಿದ್ದ ಬೆಂಗಳೂರು ಎ್‌ಸಿ ಈಗ ವಿಭಿನ್ನ ತಂಡವಾಗಿ ಕಾಣುತ್ತಿದೆ. ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ವಿರುದ್ಧ ಮೊದಲ ಪಂದ್ಯದಲ್ಲೇ ಜಯ ಗಳಿಸಿರುವ ಮೂಲಕ ಕಳೆದ ಬಾರಿಯ ರನ್ನರ್ ಅಪ್ ಬೆಂಗಳೂರು ದಿಟ್ಟ ಹೆಜ್ಜೆಯನ್ನೇ ಇಟ್ಟಿತ್ತು.

ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಮನೆಯಂಗಣದಲ್ಲಿ 2-2 ಗೋಲಿನಿಂದ ಡ್ರಾ ಸಾಧಿಸಿದರೂ, ನಂತರದ ಆರು ಪಂದ್ಯಗಳಲ್ಲಿ ಜಯ ಕಂಡಿರುವುದು ತಂಡದ ನೈಜ ಸಾಮರ್ಥ್ಯವನ್ನು ತೋರಿಸುತ್ತದೆ. ತಂಡ ಉತ್ತಮ ಪೈಪೋಟಿ ನೀಡಿತೆಂದರೆ ಎದುರಾಳಿಗಳು ಧೂಳೀಪಟ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಲವಾಗುತ್ತಿದ್ದರೂ, ಜಯ ಮಾತ್ರ ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು.

2019ರ ಏಷ್ಯಾಕಪ್‌ಗಾಗಿ ಸಿಕ್ಕ ವಿರಾಮದ ಬಳಿಕ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ನಾಲ್ಕು ಅಂಕ. ಇದರಲ್ಲಿ ಚೆನ್ನೆ' ಹಾಗೂ ಮುಂಬೈ ಸಿಟಿ ವಿರುದ್ಧದ ಸೋಲೂ ಸೇರಿದೆ. ಪ್ರಥಮಾರ್ಧದಲ್ಲಿ ಹೀನಾಯ ಪ್ರದರ್ಶನ ತೋರಿದ ನಂತರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಅಂಕ ಹಂಚಿಕೊಂಡಿತ್ತು. ಗೋಲ್‌ಕೀಪಿಂಗ್‌ನಲ್ಲಿ ಗುರ್‌ಪ್ರೀತ್ ಉತ್ತಮ ಪ್ರದರ್ಶನ ತೋರಿದ ಪರಿಣಾಮ ನಾರ್ತ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಯಿತು.

ಈ ರೀತಿಯ ಫಲಿತಾಂಶ ಬೆಂಗಳೂರು ತಂಡಕ್ಕೆ ಸೂಕ್ತವಾದುದಲ್ಲ. 11 ಪಂದ್ಯಗಳಲ್ಲಿ ಅಜೇಯವಾಗಿ ಸಾಗಿ ಬಂದು, ಈಗ ಐಎಸ್‌ಎಲ್ ಮುಗಿಯುವ ಹಂತದಲ್ಲಿ ತಂಡ ಎಡವುತ್ತಿದೆ. ಪ್ಲೇ ಆಫ್ ಹತ್ತಿರವಾಗುತ್ತಿರುವಾಗ ತಂಡದ ಈ ರೀತಿಯ ಪ್ರದರ್ಶನದ ಬಗ್ಗೆ ಯೋಚಿಸಬೇಕಾಗಿರುವುದು ಸ್ಪಷ್ಟ.

ಬೆಂಗಳೂರಿನ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್

ಬೆಂಗಳೂರಿನ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್

‘ನಾವು ಒಂದೇ ತಂಡವನ್ನು ಅಂಗಣಕ್ಕಿಳಿಸುತ್ತಿದ್ದೇವೆ, ಮಿಕು ಆಗಾಗ ಬದಲಾಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ವಿಭಿನ್ನ ಆಟ. ಲೀಗ್‌ನ ಆರಂ‘ದ ಪಂದ್ಯದಲ್ಲಿ ಕಂಡು ಬಂದ ತಾಂತ್ರಿಕ ಅಂಶ ಈಗ ಕಾಣುತ್ತಿಲ್ಲ. ಪ್ಲೇಆಫ್ ಪಂದ್ಯಗಳಿಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ನಾವು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುತ್ತಿದ್ದೇವೆ. ಪ್ಲೇ ಆ್‌ಗೆ ಆಟಗಾರರು ಫಿಟ್ ಆಗಿ ಇರಬೇಕಾದರೆ ಇಲ್ಲಿ ಬದಲಾವಣೆ ಅನಿವಾರ್ಯವಾಗಿರುತ್ತದೆ. ಇದು ನಮ್ಮ ಯೋಜನೆ,‘ ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

ಪ್ಲೇ ಆಫ್ ಹಂತ ತಲುಪಲು ಸಜ್ಜಾಗಿದೆ

ಪ್ಲೇ ಆಫ್ ಹಂತ ತಲುಪಲು ಸಜ್ಜಾಗಿದೆ

ಈ ಋತುವಿನಲ್ಲೂ ಬೆಂಗಳೂರು ತಂಡ ಪ್ಲೇ ಆಫ್ ಹಂತ ತಲುಪಲು ಸಜ್ಜಾಗಿದೆ. 15 ಪಂದ್ಯಗಳಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿದೆ, ಪ್ಲೇ ಆಫ್ ಹಂತಕ್ಕೆ 30 ಅಂಕಗಳು ಗಳಿಸಿದರೆ ಸಾಕು. ಇದರಿಂದಾಗಿ ಬೆಂಗಳೂರು ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಎಡ್ಮಂಡ್ ಲಾಲ್‌ರಿಂಡಿಕಾ, ರಿನೋ ಆಂಟೊ, ಗುರ್‌ಸಿಮ್ರಾತ್ ಗಿಲ್, ಅಜಯ್ ಛೆಟ್ರಿ ಮತ್ತು ಇತರರಿಗೆ ಕೋಚ್ ಕ್ವಾಡ್ರಾಟ್ ಯಾಕೆ ಅವಕಾಶ ನೀಡುತ್ತಿದಾರೆಂಬುದಕ್ಕೆ ಉತ್ತರ ಸಿಕ್ಕಂತಾಗಿದೆ.

ನಿರಾಶೆ ಮೂಡಿಸಿರುವ ಮಿಕು, ನಿಶುಕುಮಾರ್

ನಿರಾಶೆ ಮೂಡಿಸಿರುವ ಮಿಕು, ನಿಶುಕುಮಾರ್

ಮಿಕು ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡ ನಂತರ ಹಿಂದಿನ ಪ್ರದರ್ಶನ ತೋರುತ್ತಿಲ್ಲ. ನಿಶು ಕುಮಾರ್ ಆಟದಲ್ಲೂ ಹಿಂದಿನ ಉತ್ಸಾಹ ಕಾಣುತ್ತಿಲ್ಲ. ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಲು ಪರದಾಡುತ್ತಿದ್ದಾರೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಒಟ್ಟು ಎರಡು ಗೋಲು ಗಳಿಸಿರುತ್ತಾರೆ. ಚೆಂಕೋ ಗಿಲಿಷೇನ್ ತಂಡಕ್ಕೆ ನಾಲ್ಕು ಅಂಕಗಳನ್ನು ತಂದೊಟ್ಟರೂ, ಅವರನ್ನು ಬೇರೆ ತಂಡಕ್ಕೆ ಸೇರಲು ಅವಕಾಶ ಕಲ್ಪಿಸಲಾಗಿದೆ.

ತಂಡದಲ್ಲಿ ಲೂಯಿಸ್ಮಾ ಫಿಟ್ ಆಗಿಲ್ಲ

ತಂಡದಲ್ಲಿ ಲೂಯಿಸ್ಮಾ ಫಿಟ್ ಆಗಿಲ್ಲ

ತಂಡವನ್ನು ಸೇರಿಕೊಂಡ ಲೂಯಿಸ್ಮಾ ಇನ್ನೂ ಸಂಪೂರ್ಣ ಫಿಟ್ ಆಗಲಿಲ್ಲ. ಕಳೆದ ಋತುವಿನ ಬೆಂಗಳೂರು ತಂಡದ ಬೆಂಚ್ ಶಕ್ತಿ ಉತ್ತಮವಾಗಿತ್ತು. ಸುಭಾಶಿಶ್ ಬೋಸ್, ಅಲ್ವಿನ್ ಜಾರ್ಜ್, ಲೆನ್ನಿ ರೋಡ್ರಿಗಸ್, ಜಾನ್ ಜಾನ್ಸನ್, ಟೋನಿ ದೊವಾಲೆ ಮತ್ತು ಎಡು ಗಾರ್ಸಿಯಾ ಇದ್ದಿದ್ದರು. ಆದರೆ ಈ ಬಾರಿ ಬೆಂಚ್‌ನಲ್ಲಿ ಗಮನಾರ್ಹ ಆಟಗಾರರು ಇಲ್ಲದಂತಾಗಿದೆ.

Story first published: Monday, February 11, 2019, 17:28 [IST]
Other articles published on Feb 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X