ಬೆಂಗಳೂರು ಎಫ್‍ಸಿ ಪಂದ್ಯಗಳ ಟಿಕೆಟ್ ಮೇಲೆ ಭಾರಿ ರಿಯಾಯಿತಿ

Posted By:

ಬೆಂಗಳೂರು ನವೆಂಬರ್ 7: ಇದೇ ಪ್ರಥಮ ಬಾರಿಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ನಲ್ಲಿ ಬೆಂಗಳೂರು ಎಫ್‍ಸಿ ಪದಾರ್ಪಣೆ ಮಾಡುತ್ತಿದೆ. ನವೆಂಬರ್ 17ರಂದು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮುಂಬೈ ಎಫ್‍ಸಿ ವಿರುದ್ಧ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಋತುವಿನ ಟಿಕೆಟ್‍ಗಳು ಮತ್ತು ಪಾಸ್‍ಗಳನ್ನು ಬಿಎಫ್‍ಸಿ, ಆನ್‍ಲೈನ್ ಪೋರ್ಟಲ್ ಬುಕ್‍ಮೈಶೋನಲ್ಲಿ ಅನಾವರಣಗೊಳಿಸಿದೆ.

ಬೆಂಗಳೂರು ಎಫ್‍ಸಿಯ ಎಲ್ಲಾ ಮನೆಯಂಗಳದ ಪಂದ್ಯಗಳ ನಿಗದಿತ ಮೊತ್ತದ ಟಿಕೆಟ್‍ಗಳಲ್ಲಿ ತವರು ಅಭಿಮಾನಿಗಳಿಗಾಗಿ ರಿಯಾಯ್ತಿ ನೀಡಿದ್ದು, ಋತುವಿನ ಪಾಸ್ ಖರೀದಿಯಿಂದ ಶೇ. 23ರವರೆಗೆ ಉಳಿತಾಯ ಮಾಡಬಹುದಾಗಿದೆ.

ತವರಿನಂಗಳದಲ್ಲಿ ಜರುಗಲಿರುವ ಇಂಡಿಯನ್ ಸೂಪರ್ ಲೀಗ್‍ನ ಒಟ್ಟು ಒಂಬತ್ತು ಪಂದ್ಯಗಳ ಪೈಕಿ ಮೆನ್ ಇನ್ ಬ್ಲೂ ತಂಡ, ವಾರಂತ್ಯ ಭಾನುವಾರ ನಾಲ್ಕು ಪಂದ್ಯಗಳನ್ನಾಡಲಿದೆ.

ISL Ticket Launch BFC matches at discount rate

ಟಿಕೆಟ್‍ಗಳ ವಿವರ

ನಾರ್ಥ್ ಅಪ್ಪರ್-100

ಈಸ್ಟ್ ಲೋವರ್ ಎ, ಈಸ್ಟ್ ಲೋವರ್ ಬಿ-200

ಈಸ್ಟ್ ಅಪ್ಪರ್, ಪ್ಯೂಮಾ ಸ್ಟ್ಯಾಂಡ್ -300(ಸೀಸನ್ ಪಾಸ್2,100)

ವೆಸ್ಟ್ ಬ್ಲ್ಯಾಕ್ ಎ -500(ಸೀಸನ್ ಪಾಸ್ -3,600)

ವೆಸ್ಟ್ ಪ್ಲಾಟಿನಂ -800 (ಸೀಸನ್ ಪಾಸ್-5,700)

ಹಾಸ್ಪಿಟಲಿಟಿ - 1,500

ಉಳಿದಂತೆ, ಮೂರು ಪಂದ್ಯಗಳು ಗುರುವಾರ ನಡೆದರೆ ಇತರ ಎರಡು ಪಂದ್ಯಗಳು ಶುಕ್ರವಾರ ನಡೆಯಲಿವೆ. ಇದಲ್ಲದೆ ಚೆನ್ನೈಯಿನ್ ಎಫ್‍ಸಿ (ಭಾನುವಾರ ಡಿ.17) ಮತ್ತು ಎಟಿಕೆ (ಭಾನುವಾರ, ಜ.7) ವಿರುದ್ಧ ತವರಿನ ಎರಡು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳು ಸಂಜೆ 5.30ಕ್ಕೆ ಆರಂಭವಾಗಲಿವೆ. ಇತರ ಎಲ್ಲಾ ಪಂದ್ಯಗಳು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಆರಂಭವಾಗಲಿವೆ.

Story first published: Tuesday, November 7, 2017, 19:16 [IST]
Other articles published on Nov 7, 2017
Please Wait while comments are loading...
POLLS