ವಿಶ್ವಕಪ್ ಅರ್ಹತೆಯಲ್ಲಿ ಫೇಲಾದ ಮಾಜಿ ಚಾಂಪಿಯನ್

Posted By:

ಬೆಂಗಳೂರು, ನವೆಂಬರ್ 14: 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಜಾಗತಿಕ ಸಮರಕ್ಕೆ ಅರ್ಹತೆ ಗಳಿಸಲು ಮಾಜಿ ಚಾಂಪಿಯನ್ ಇಟಲಿ ವಿಫಲವಾಗಿದೆ.

In Pics : ಐಎಸ್ಎಲ್ ಫುಟ್ಬಾಲ್ ಹಬ್ಬ: ನಮ್ಮ ಬೆಂಗಳೂರು ಕ್ಲಬ್ ಎಂಟ್ರಿ

ಕೊನೆಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 0-1 ಅಂತರದಲ್ಲಿ ಸೋಲು ಕಂಡ ಇಟಲಿ ತನ್ನ ಅಭಿಮಾನಿಗಳ ಆಸೆಗೆ ತಣ್ಣೀರೆರಚಿತು. ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ, ಆರು ಬಾರಿ ಫೈನಲ್ ತಲುಪಿದ್ದ ಇಟಲಿ 1958ರ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

 Italy to miss World Cup 2018, Russia

ರಷ್ಯಾ ಟಿಕೆಟ್ ಮಿಸ್ ಮಾಡಿಕೊಂಡ ತಂಡಗಳು: ನೆದರ್ಲೆಂಡ್, ಯುಎಸ್ಎ, ಚಿಲಿ ನಂತರ ರಷ್ಯಾ ವಿಶ್ವಕಪ್ 2018ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ನಾಲ್ಕನೇ ಪ್ರಮುಖ ತಂಡವಾಗಿ ಇಟಲಿ ಕಾಣಿಸಿಕೊಂಡಿದೆ.

UEFA ಜಿ ಗುಂಪಿನಲ್ಲಿದ್ದ ಇಟಲಿ ತಂಡವು ಸೆಪ್ಟೆಂಬರ್ ನಲ್ಲಿ ಸ್ಪೇನ್ ವಿರುದ್ಧ 3-0 ಅಂತರದಲ್ಲಿ ಸೋಲು ಕಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಫುಟ್ಬಾಲ್ ದಿಗ್ಗಜ, ಅಜ್ಜುರಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಗಿನ್ಯೂಗಿ ಬುಫನ್ ಅವರು ಸೋಲಿನ ಮೂಲಕ ತಮ್ಮ ವೃತ್ತಿ ಬದುಕಿನ ಅಂತ್ಯ ಹಾಡುತ್ತಿದ್ದಾರೆ.

2006ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ಗಿಗಿ ಬುಫನ್ ಅವರ ಅಂತಾರಾಷ್ಟ್ರೀಯ ಫುಟ್ಬಾಲ್ ಬದುಕು ಈ ರೀತಿ ಕೊನೆಯಾಗಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ.

Story first published: Tuesday, November 14, 2017, 11:53 [IST]
Other articles published on Nov 14, 2017
Please Wait while comments are loading...
POLLS