ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಆಟವನ್ನು ಸಂಭ್ರಮಿಸುತ್ತೇನೆ, ಒತ್ತಡ ನನ್ನ ಆಟಕ್ಕೆ ಅಡ್ಡಿಯಾಗದು: ಸಹಾಲ್

By Isl Media
Making sure pressure does not affect my game: Sahal

ತಿರುವನಂತಪುರಂ, ಅಕ್ಟೋಬರ್ 13: ಅಪರಿಚಿತ ಆಟಗಾರನೊಬ್ಬ ಸ್ಟಾರ್ ಆದದ್ದು ಹೇಗೆಂಬುದನ್ನು ಅರಿಯಲು ಯತ್ನಿಸಿದಾಗ ಸಹಾಲ್ ಅಬ್ದುಲ್ ಸಮದ್ ಅವರ ಸ್ಫೂರ್ತಿಯ ಕತೆ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಕೇರಳ ಬ್ಲಾಸ್ಟರ್ಸ್ ಎಫ್‌ಸಿಯಲ್ಲಿ ಕಾಯ್ದಿರಿಸಿದ ಆಟಗಾರನಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಸಂಜಾತ ಮಿಡ್ ಫೀಲ್ಡರ್ ಸಹಾಲ್, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಕೇರಳ ಮೊದಲ ಆಯ್ಕೆಯ ತಂಡದಲ್ಲಿ ಸ್ಥಾನ ಪಡೆದರು. 2017-18ರಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಅಂದಿನ ಕೋಚ್ ಡೇವಿಡ್ ಜೇಮ್ಸ್, 2018-19 ರ ಋತುವಿನ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ಅವಕಾಶ ಕಲ್ಪಿಸಿದರು. ಅಲ್ಲಿಂದ ಸಹಾಲ್ ಮತ್ತೆ ಹಿಂದಿರುಗಿ ನೋಡಲಿಲ್ಲ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಿರಲಿಲ್ಲ.

2018-19 ಕೇರಳ ಬ್ಲಾಸ್ಟರ್ಸ್ ಪಾಲಿಗೆ ಅತ್ಯಂತ ಕಳಪೆ ವರ್ಷ ಅಂದರೆ ತಪ್ಪಾಗಲಾರದು, 22 ವರ್ಷದ ಸಹಾಲ್ ನಿರಾಸೆಯ ನಾವುವೆಯೂ ಹೊಸ ಆಸೆ ಮೂಡಿಸಿದರು. ತಂಡದ ಮಿಡ್ ಫೀಲ್ಡ್ ವಿಭಾಗದಲ್ಲಿ ಪ್ರಮುಖ ಆಟಗಾರರೆನಿಸಿ ಕೇರಳದ ಮನೆಮಾತಾದರು. ಎಲ್ಲೆಡೆ ತನ್ನ ಹೆಸರು ಕೇಳಿ ಬರುತ್ತಿರುವಾಗ ಸಹಾಲ್ ಅಂಗಣದಲ್ಲಿ ತನ್ನ ಅಧಿಕೃತ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿ

''ನಾನು ಆಡುವ ಪ್ರತಿಯೊಂದು ಪಂದ್ಯವನ್ನು ಸಂಭ್ರಮಿಸುತ್ತೇನೆ. ಪ್ರತಿಯೊಬ್ಬ ಫುಟ್ಬಾಲ್ ಆಟಗಾರನೂ ಒತ್ತಡಗಳೊಂದಿಗೆ ಆಡಬೇಕಾಗುತ್ತದೆ. ಆದರೆ ನಾನು ಈ ಒತ್ತಡ ನನ್ನ ಆಟದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡು ಮುಂದುವರಿಯುವೆ,'' ಎಂದು ಸಹಾಲ್ ಹೇಳಿದ್ದಾರೆ.

ಸಹಾಲ್ ಅವರ ಆಟದ ಶೈಲಿ ಹಾಗೂ ಚೆಂಡಿನ ಮೇಲೆ ಅವರು ತೋರುವ ಕೌಶಲ್ಯದ ತಂತ್ರ ರಾಷ್ಟ್ರೀಯ ತಂಡದ ಕೋಚ್ ಐಗರ್ ಸ್ಟಿಮಾಕ್ ಅವರನ್ನು ಆಕರ್ಷಿಸಿತು. ಇದರಿಂದ ಸಹಾಲ್ ಭಾರತ ತಂಡದ ಭಾಗವಾದರು. ಥಾಯ್ಲೆಂಡ್ ನಲ್ಲಿ ನಡೆದ ಕಿಂಗ್ಸ್ ಕಪ್ ನಲ್ಲಿ ಕಾಣಿಸಿಕೊಂಡರು. ನಂತರ 2020ರ ಫಿಫಾ ವಿಶ್ವ ಕಪ್ ಅರ್ಹತಾ ಪಂದ್ಯದಲ್ಲಿ ಒಮನ್ ಹಾಗೂ ಕತಾರ್ ವಿರುದ್ಧ ಮಿಡ್ ಫೀಲ್ಡ್ ನಲ್ಲಿ ಆಡಿದರು. ಕೇರಳದ ಆಟಗಾರ ಮಿಡ್ ಫೀಲ್ಡ್ ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಬ್ಲೂ ಟೈಗರ್ಸ್ ಪಡೆ ಏಷ್ಯನ್ ಕಪ್ ಚಾಂಪಿಯನ್ ಕತಾರ್ ವಿರುದ್ಧ ಗೋಲಿಲ್ಲದೆ ಡ್ರಾ ಸಾಧಿಸಿತು.

ಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿಪ್ರೊ ಕಬಡ್ಡಿ ಲೀಗ್: ಕುತೂಹಲಕಾರಿ ಪ್ಲೇ ಆಫ್ ಪಂದ್ಯಗಳ ಮಾಹಿತಿ, ವೇಳಾಪಟ್ಟಿ

''ಭಾರತಕ್ಕಾಗಿ ಆಡುವುದು ಅದೊಂದು ಅದ್ಭುತ ಅನುಭವ, ದೇಶವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಯುವ ಆಟಗಾರನ ಕನಸಾಗಿರುತ್ತದೆ. ನನಗೂ ಅದು ಬೇರೆಯಾಗಿ ಕಾಣಲಿಲ್ಲ, ಕನಸು ನನಸಾಯಿತು,'' ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 20ರಂದು ಕೇರಳ ಬ್ಲಾಸ್ಟರ್ಸ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಆಡಲು ಸಜ್ಜಾಗುತ್ತಿದೆ, ಎಲ್ಕೊ ಶೆಟ್ಟೋರಿ ಅವರ ತಂಡದಲ್ಲಿ ಸಹಾಲ್ ತಾನೊಬ್ಬ ಪ್ರಮುಖ ಆಟಗಾರ ಎಂಬುದನ್ನು ತಿಳಿದಿದ್ದಾರೆ. ಈ ಯುವ ಮಿಡ್ ಫೀಲ್ಡರ್ ಹೆಚ್ಚುವರಿ ಒತ್ತಡಡಲ್ಲಿದ್ದರೂ ಆ ಬಗ್ಗೆ ಗಮನ ಹರಿಸದೆ ಚಾಂಪಿಯನ್ಷಿಪ್ ನ ಮೊದಲ ಐದು ವರ್ಷಗಳಲ್ಲಿ ಕೈ ತಪ್ಪಿದ ಟ್ರೋಫಿಯನ್ನು ಕೇರಳ ಬ್ಲಾಸ್ಟರ್ಸ್ ಪರ ಮತ್ತೆ ಗೆಲ್ಲುವುದು ಗುರಿಯಾಗಿದೆ ಎಂದಿದ್ದಾರೆ.

''ಕೇರಳ ಬ್ಲಾಸ್ಟರ್ಸ್ ಎಫ್ ಸಿ ನನ್ನ ಎರಡನೇ ಮನೆ ಇದ್ದಂತೆ. ನಾನೀಗ ಏನಿದ್ದರೂ ಅದು ಕೇರಳ ಬ್ಲಾಸ್ಟರ್ಸ್ ಹಾಗೂ ತಂಡದ ಕೋಚಿಂಗ್ ತಂಡ ಕಾರಣ. ಎಲ್ಲಾ ರೀತಿಯ ಅಭಿವೃದ್ಧಿಗೆ ಹಾಗೂ ಪ್ರಧಾನ ತಂಡದಲ್ಲಿ ಸ್ಥಾನ ಪಡೆಯಲು ಅವರ ಪಾತ್ರ ಪ್ರಮುಖವಾಗಿದೆ,'' ಎಂದರು.

ಪಿಚ್‌ನಲ್ಲಿ ಡ್ಯಾನ್ಸ್ ಮಾಡಿದ ರವೀಂದ್ರ ಜಡೇಜಾ: ವೈರಲ್ ವಿಡಿಯೋಪಿಚ್‌ನಲ್ಲಿ ಡ್ಯಾನ್ಸ್ ಮಾಡಿದ ರವೀಂದ್ರ ಜಡೇಜಾ: ವೈರಲ್ ವಿಡಿಯೋ

''ತಂಡದಲ್ಲಿ ಪ್ರತಿಯೊಬ್ಬ ಆಟಗಾರನೂ ಮುಖ್ಯವಾಗಿರುತ್ತಾನೆ. ಫುಟ್ಬಾಲ್ ಎಂಬುದು ತಂಡದ ಆಟ. ವೈಯಕ್ತಿಕವಾಗಿ ನನಗೆ ಅದು ಭಿನ್ನವಾಗಿ ಕಾಣುವುದಿಲ್ಲ. ಬ್ಯಾಡ್ಜ್ ಧರಿಸಿ ಆಡುವಾಗ ನಾವೆಲ್ಲರೂ ಒಂದೇ ರೀತಿಯ ಒತ್ತಡವನ್ನು ಎದುರಿಸಲಿದ್ದೇವೆ. ಲಕ್ಷಾಂತರ ಕೇರಳ ಬ್ಲಾಸ್ಟರ್ಸ್ ಅಭಿಮಾನಿಗಳಿಗಾಗಿ ಆಡುವುದೇ ಅದೃಷ್ಟ. ಆ ಮೌಲ್ಯವನ್ನು ಅನುಭವಿಸುವುದೇ ಅದ್ಭುತ. ಪ್ರತಿಯೊಂದು ಫುಟ್ಬಾಲ್ ಕ್ಲಬ್ ನ ಅಂತಿಮ ಗುರಿ ಟ್ರೋಫಿಯಾಗಿರುತ್ತದೆ. ನಾವು ಹೀರೋ ಐಎಸ್ ಎಲ್ ಟ್ರೋಫಿ ಗೆಲ್ಲುವ ಗುರಿ ಹೊಂದಿದ್ದೇವೆ '' ಎಂದರು.

Story first published: Sunday, October 13, 2019, 14:44 [IST]
Other articles published on Oct 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X