ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್: 90 ವರ್ಷಗಳಲ್ಲಿ ಅತಿ ದೊಡ್ಡ ಸೋಲು ಕಂಡ ಜರ್ಮನಿ

Nations league: Germanys overhaul far from complete after Spain demolition

ಜರ್ಮನಿ ಫೂಟ್ಬಾಲ್ ತಂಡ ಕಳೆದ 90 ವರ್ಷಗಳಲ್ಲಿ ಅತ್ಯಂತ ಕೆಟ್ಟ ಸೋಲನ್ನು ಕಂಡು ಮುಖಭಂಗಕ್ಕೊಳಗಾಗಿದೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಸ್ಪೇನ್ 6 ಗೋಲು ಗಳಿಸಿದ್ದರೆ ಜರ್ಮನಿ ಯಾವುದೇ ಗೋಲು ಗಳಿಸಲು ವಿಫಲವಾಯಿತು. ಈ ಮೂಲಕ ಸ್ಪೇನ್ ಜರ್ಮನಿ ತಂಡದ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿ ನೇಶನ್ಸ್ ಲೀಗ್‌ನ ಸೆಮಿ ಫೈನಲ್‌ಗೆ ಅವಕಾಶ ಪಡೆದಿದೆ. ಈ ಹಿನ್ನೆಲೆಯಲ್ಲಿ ಜರ್ಮನಿ ಫುಟ್ಬಾಲ್ ತಂಡ ಮುಂಬರುವ ಯುರೋಪಿಯನ್ ಸೂಕರ್ ಲೀಗ್‌ಗೆ ಮುನ್ನ ತಂಡವನ್ನು ಕೂಲಂಕುಶ ಪರಿಶೀಲನೆಗೆ ಒಳಗಾಗಬೇಕಾದ ಅನಿವಾರ್ಯತೆಗೆ ಒಳಗಾಗಿದೆ.

1931ರಲ್ಲಿ ಆಸ್ಟ್ರೀಯಾ ವಿರುದ್ದದ ಸೋಲಿನ ಬಳಿಕ ಜರ್ಮನಿ ಇಷ್ಟು ದೊಡ್ಡ ಅಂತರದ ಸೋಲು ಕಂಡಿರಲಿಲ್ಲ. ಹೀಗಾಗಿ 90 ವರ್ಷಗಳಲ್ಲಿ ಜರ್ಮನಿ ಕಂಡ ಅತ್ಯಂತ ಹೀನಾಯ ಸೋಲು ಇದಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಜರ್ಮನಿ ಸಾಕಷ್ಟು ಏಳು ಬೀಳುಗಳನ್ನು ಕಾಣುತ್ತಿದ್ದು ಈ ಸೋಲು ಅದರಲ್ಲಿ ಸೇರಿಕೊಂಡಿದೆ.

ಭಾರತದಲ್ಲಿ ನಡೆಯಲಿದ್ದ ಮಹಿಳಾ ಯು-17 ಫುಟ್ಬಾಲ್ ವಿಶ್ವಕಪ್ ರದ್ದುಭಾರತದಲ್ಲಿ ನಡೆಯಲಿದ್ದ ಮಹಿಳಾ ಯು-17 ಫುಟ್ಬಾಲ್ ವಿಶ್ವಕಪ್ ರದ್ದು

ಇನ್ನು ಜರ್ಮನಿ ಫುಟ್ಬಾಲ್ ತಂಡದ ಕೋಚ್ ಆಗಿ ಕಳೆದ 14 ವರ್ಷಗಳಿಂದ ಕರ್ತವ್ಯ ನಿರ್ವವಹಿಸುತ್ತಿರುವ ಜೋಕಿಮ್ ಲೂ ಈ ಸೋಲನ್ನು ವಿನಾಶಕಾರಿ ದಿನ ಎಂದು ಹೇಳಿಕೊಂಡಿದ್ದಾರೆ. ಲೂ 14 ನೇ ವರ್ಷದ ಉಸ್ತುವಾರಿಯಲ್ಲಿ, ಈಗ ಅವರ ತಂಡವು ಈ ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲಿ ಮೂರನೇ ಬಾರಿಗೆ ನೇರವಾಗಿ ನಿರ್ಗಮಿಸಿದೆ.

2014ರ ವಿಶ್ವಕಪ್ ವಿಜೇತ ತಂಡವಾಗಿರುವ ಜರ್ಮನಿ ನಾಲ್ಕು ವರ್ಷಗಳ ನಂತರ ಲೀಗ್‌ಹಂತದಿಂದ ಹೊರಬಿದ್ದಿದೆ. ಈ ನಿರ್ಗಮನ ಕೋಚ್ ಲೂವ್ ಅವರ ನಿರ್ಧಾರಗಳ ಬಗ್ಗೆ ಪುರ್‌ಪರಿಶೀಲನೆಗೆ ಅವಕಾಶ ನೀಡಿದಂತಾಗಿದೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ವಿಶ್ವಚಾಂಪಿಯನ್ ತಂಡದ ಆಟಗಾರರಾಗಿದ್ದ ತೋಮಸ್ ಮುಲ್ಲರ್, ಜೋರೊಮ್ ಬೋಟಿಂಗ್, ಮ್ಯಾಟ್ಸ್ ಹುಮ್ಮೆಲ್ಸ್ ಸೆರಿದಂತೆ ಹಲವರನ್ನು ತಂಡದಿಂದ ಹೊರಗಿಡಲಾಗಿತ್ತು.

ಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ಸೋಂಕುಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ಸೋಂಕು

ಆದರೆ ಈ ಸೋಲಿನಿಂದಾಗಿ ಜರ್ಮನ್ ತಂಡದ ಕೋಚ್ ಜೋಕಿಮ್ ಲೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಯವ ಆತಂಕವಿಲ್ಲ ಎಂದು ಜರ್ಮನ್ ರಾಷ್ಟ್ರೀಯ ಫುಟ್ಬಾಕ್ ತಂಡದ ನಿರ್ದೇಶಕ ಆಲಿವರ್ ಬೈರ್‌ಹಾಫ್ ಹೇಳಿಕೆಯನ್ನು ನೀಡಿದ್ದಾರೆ. ಜರ್ಮನಿ ಈ ವರ್ಷದಲ್ಲಿ ಆಡಿದ ಅಂತಿಮ 8 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದೆ.

Story first published: Thursday, November 19, 2020, 13:05 [IST]
Other articles published on Nov 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X