ಐಎಸ್‌ಎಲ್: ಒಡಿಶಾಕ್ಕೆ ಈಗ ಲೆಕ್ಕಾಚಾರವೇ ಸ್ಫೂರ್ತಿ

By Isl Media

ಭುವನೇಶ್ವರ, ಫೆಬ್ರವರಿ, 13: ಕಳಿಂಗಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡಕ್ಕೆ ಆತಿಥ್ಯ ನೀಡಲಿರುವ ಒಡಿಶಾ ಎಫ್ ಸಿ ತಂಡಕ್ಕೆ ಜಯದ ಹೊರತಾಗಿ ಬೇರೇನೂ ಅಗತ್ಯ ಇರುವುದಿಲ್ಲ.

ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಒಡಿಶಾ ತಂಡ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡಕ್ಕಿಂತ ಐದು ಅಂಕ ಹಿಂದೆ ಬಿದ್ದಿದೆ. ಒಂದು ವೇಳೆ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸುವಲ್ಲಿ ವಿಫಲವಾದರೆ ಒಡಿಶಾದ ಸೆಮಿಫೈನಲ್ ಹಾದಿಗೆ ಬಹುತೇಕ ಮುಗಿದಂತೆ. ಜೊಸೆಫ್ ಗೊಂಬಾವ್ ಪಡೆ ನಾಕೌಟ್ ಹಂತದ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನು ಈಗ ಬಳಸಬೇಕಾಗಿದೆ. ಹಾಗೆ ಪಂದ್ಯದಲ್ಲಿ ಯಶಸ್ಸು ಕಂಡಲ್ಲಿ ಮಾತ್ರ ಮುಂದಿನ ಹಾದಿಯ ಲೆಕ್ಕಾಚಾರದಲ್ಲಿ ಭಾಗಿಯಾಗಬಹುದು.

ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಒಡಿಶಾ ಈಗ ಒಂದು ರೀತಿಯಲ್ಲಿ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ತಂಡಕ್ಕೆ ಈಗ ನಾರ್ಥ್ ಈಸ್ಟ್ ವಿರುದ್ಧ ಆ ಅವಕಾಶ ಸಿಕ್ಕಿದೆ.
''ಇದು ಎರಡು ಅತ್ಯಂತ ಪ್ರಮುಖ ಪಂದ್ಯವಾಗಿದೆ. ನಾವು ಈ ಋತುವಿನಲ್ಲಿ ಪಂದ್ಯದಿಂದ ಪಂದ್ಯಕ್ಕೆ ಸ್ಪಂದಿಸಿದ್ದೇವೆ. ಲೆಕ್ಕಾಚಾರದ ಪ್ರಕಾರ ನಮಗೆ ಮುನ್ನಡೆಯಲು ಅವಕಾಶ ಇರುವುದು ಸಹಜ. ನಾವು ನಾಳೆಯ ಪಂದ್ಯಕ್ಕಾಗಿ ಉತ್ತ ರೀತಿಯಲ್ಲಿ ಆಭ್ಯಾಸ ನಡೆಸಿದ್ದೇವೆ. ಇದು ನಮಗೆ ಗೆಲ್ಲಲೇಬೇಕಾದ ಪಂದ್ಯ. ನಾಳೆಯ ಪಂದ್ಯದಲ್ಲಿ ಗೆದ್ದರೆ, ನಾವು ಅದೇ ಹುಮ್ಮಸ್ಸಿನಲ್ಲಿ ಮುಂದಿನ ಪಂದ್ಯಕ್ಕೆ ಸಜ್ಜಾಗಲಿದ್ದೇವೆ,'' ಎಂದು ಗೋಂಬಾವ್ ಹೇಳಿದ್ದಾರೆ.

ಪರ್ವತಪ್ರದೇಶದ ತಂಡ ಕಳೆದ ಹನ್ನೋಂದು ಪಂದ್ಯಗಳಲ್ಲಿ ಜಯ ಗಳಿಸಿಲ್ಲ. ಪ್ರಧಾನ ಕೋಚ್ ರಾಬರ್ಟ್ ಜೆರ್ನಿ ಅವರೊಂದಿಗಿನ ಸಂಬಂಧ ಕಡಿದುಹೋಗಿದ್ದು, ಅವರು ಒಡಿಶಾ ತಂಡವನ್ನು ಸೇರಿಕೊಂಡಿರುವುದು ನಾರ್ಥ್ ಈಸ್ಟ್ ನ ಪರಿಸ್ಥಿತಿಯನ್ನಗ ಮತ್ತಷ್ಟು ಬಿಗಡಾಯಿಸಿದೆ.
ಒಡಿಶಾ ತಂಡಕ್ಕೆ ಕ್ಸಿಸ್ಕೊ ಹೆರ್ನಾಆಂಡೀಸ್ ಹಾಗೂ ಮ್ಯಾನ್ವೆಲ್ ಒನೌ ಉತ್ತಮ ರೀತಿಯಲ್ಲಿ ಆಡಬೇಕಾದ ಅಗತ್ಯ ಇದೆ. ಒಡಶಾ ತಂಡವನ್ನು ಸೇರಿಕೊಂಡ ನಂತರ ಗೋಲು ಗಳಿಸುತ್ತಿರುವದು ಒನೌ ಮಾತ್ರ, ಆದ್ದರಿಂದ ತಂಡ ಹೆಚ್ಚಾಗಿ ಆವರ ಮೇಲೆ ಆವಲಂಬಿತವಾಗಿದೆ.

ಡಿಫೆನ್ಸ್ ವಿಭಾಗದಲ್ಲಿರುವ ಪ್ರಮಾದಗಳನ್ನು ಸರಿಪಡಿಸಿಕೊಳ್ಳಬೇಕಾ ಆವಿವಾರ್ಯತೆ ಒಡಿಶಾ ತಂಡಕ್ಕಿದೆ. ಕಳೆದ ಮೂರು ಪಂದ್ಯಗಳಲ್ಲಿ 10 ಗೋಲುಗಳನ್ನು ನೀಡಿರುವುದು ತಂಡದ ಡಿಫೆನ್ಸ್ ವಿಭಾಗದ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ. ಗೌರವ್ ಬೊರಾ ಮತ್ತು ಕಾರ್ಲೊಸ್ ಡೆಲ್ಗಾಡೊ ಮತ್ತು ಮಾರ್ಕೊಸ್ ತೆಬರ್ ಮಿಡ್ ಫೀಲ್ಡ್ ನಲ್ಲಿ ತಮ್ಮ ನೈಜ ಸಾಮರ್ಥ್ಯವನ್ನು ತೋರಬೇಕಾಗಿದೆ.
ಜೆಮ್ಷೆಡ್ಪುರ ಎಫ್ ಸಿ ವಿರುದ್ಧ 3-3 ಗೋಲುಗಳಿಂದ ಡ್ರಾ ಮಾಡಿಕೋಂಡ ನಂತರ ನಾರ್ಥ್ ಈಸ್ಟ್ ಭುವನೇಶ್ವರಕ್ಕೆ ಆಗಮಿಸಿತು. ನಾಲ್ಕು ಪಂದ್ಯಗಳ ನಂತರ ತಂಡ ಗೋಲಿನ ಬರವನ್ನು ನೀಗಿಸಿರುವುದಕ್ಕೆ ಕೋಚ್ ಖಲಿದ್ ಜಮಿಲ್ ಸಮಾಧಾನಪಟ್ಟಿದ್ದಾರೆ.

''ನಮ್ಮಲ್ಲಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ನಮ್ಮಿಂದಾದ ಉತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ, ಜೆರ್ನಿ ಅವರು ಅನುಸರಿಸುತ್ತದ್ದ ಮಾರ್ಗದಲ್ಲೇ ನಾವು ಮುಂದೆ ಸಾಗುವೆವು, ಕೆಲವೊಂದು ಸಣ್ಣ ಬದಲಾವಣೆಗಳು ಇರಬಹುದು,'' ಎಂದು ಜಮಿಲ್ ಹೇಳಿದ್ದಾರೆ

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Friday, February 14, 2020, 7:00 [IST]
Other articles published on Feb 14, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X