ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FIH ಹಾಕಿ ಸೀರೀಸ್‌ ಫೈನಲ್ಸ್‌: ಪೋಲೆಂಡ್‌ ವಿರುದ್ಧ ಭಾರತಕ್ಕೆ ಜಯ

FIH Series Finals: Captain Manpreets brace hands India 3-1

ಭುವನೇಶ್ವರ್‌, ಜೂನ್‌ 07: ನಾಯಕ ಮನ್‌ಪ್ರೀತ್‌ ಸಿಂಗ್‌ ಅವರ ಡಬಲ್‌ ಗೋಲ್‌ಗಳ ಬಲದಿಂದ ಮಿಂಚಿದ ಆತಿಥೇಯ ಭಾರತ ತಂಡ, ಇಲ್ಲಿ ನಡೆಯುತ್ತಿರುವ ಎಫ್‌ಐಎಚ್‌ ಸೀರೀಸ್‌ ಫೈನಲ್ಸ್‌ ಟೂರ್ನಿಯ ಪಂದ್ಯದಲ್ಲಿ ಪೋಲೆಂಡ್‌ ಎದುರು 3-1 ಗೋಲ್‌ಗಳ ಜಯ ದಾಖಲಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ನಿರಾಶಾದಾಯಕ ಮೊದಲ ಕ್ವಾರ್ಟರ್‌ನ ಬಳಿಕ ದ್ವಿತೀಯ ಕ್ವಾರ್ಟರ್‌ನಲ್ಲಿ ಮಿಂಚಿದ ಮನ್‌ಪ್ರೀತ್‌ ಸಿಂಗ್‌ 21ನೇ ಮತ್ತು 26ನೇ ನಿಮಿಷಗಳಲ್ಲಿ ಆಕರ್ಷಕ ಫೀಲ್ಡ್‌ ಗೋಲ್‌ಗಳ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಬಳಿಕ 36ನೇ ನಿಮಿಷದಲ್ಲಿ ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಭಾರತಕ್ಕೆ ಮೂರನೇ ಗೋಲ್‌ ತಂದುಕೊಡುವ ಮೂಲಕ ಜಯದ ಅಂತರವನ್ನು ವಿಸ್ತರಿಸಿದರು.

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

ಈ ಮೂಲಕ ಟೂರ್ನಿಯಲ್ಲಿ ಭಾರತ ತಂಡ ಸತತ ಎರಡನೇ ಜಯ ದಾಖಲಿಸಿದೆ. ಪೋಲೆಂಡ್‌ ಪರ ಹೋರಾಟ ಪ್ರದರ್ಶಿಸಿದ ಮತೇಯುಸ್‌ ಹುಲ್ಬೋಯ್‌ 25ನೇ ನಿಮಿಷದಲ್ಲಿ ಏಕೈಕ ಗೋಲ್‌ ದಾಖಲಿಸಿ ಗಮನ ಸೆಳೆದರು.

ವಿಶ್ವದ 5ನೇ ಶ್ರೇಯಾಂಕದ ಭಾರತ ತಂಡ ಮೂರು ತಿಂಗಳ ಹಿಂದಷ್ಟೇ ನಡೆದ ಅಝ್ಲಾನ್‌ ಶಾ ಹಾಕಿ ಟೂರ್ನಿಯಲ್ಲಿ ವಿಶ್ವದ 21ನೇ ಶ್ರೇಯಾಂಕದ ಪೋಲೆಂಡ್‌ ವಿರುದ್ಧ 10-0 ಅಂತರದ ಭರ್ಜರಿ ಜಯ ದಾಖಲಿಸಿತ್ತು. ಆದರೆ, ಸುಕ್ರವಾರ ನಡೆದ ಪಂದ್ಯದಲ್ಲಿ ಪೋಲೆಂಡ್‌ ದಿಟ್ಟ ಪ್ರದರ್ಶನ ನೀಡಿ ಆತಿಥೇಯ ತಂಡಕ್ಕೆ ಪ್ರಬಲ ಪೈಪೋಟಿಯಿಡ್ಡಿತು.

ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!

ಭಾರತ ತಂಡದ ಕೋಚ್‌ ಗ್ರಹಾಮ್‌ ರೀಡ್‌ ಕೂಡ ಇದನ್ನು ಒಪ್ಪಿಕೊಂಡರು. ಪೋಲೆಂಡ್‌ ತಂಡ ಇದೀಗ ಸಾಕಷ್ಟು ಸುಧಾರಿಸಿದ್ದು, ಅದರ ಶ್ರೇಯಾಂಕಕ್ಕಿಂತಲೂ ಉತ್ತಮ ಆಟವಾಡುತ್ತಿದೆ ಎಂದು ಹೇಳಿದ್ದಾರೆ.

"ಪೋಲೆಂಡ್‌ ಈಗ ಅತ್ಯುತ್ತಮ ತಂಡ. ಒಳಾಂಗಣ ಹಾಕಿಯಲ್ಲಿ ಪೋಲೆಂಡ್‌ ವಿಶ್ವದ 2ನೇ ಶ್ರೇಯಾಂಕ ಹೊಂದಿದೆ. ಇಂಥಹ ತಂಡದ ಎದುರು ಇಂದು ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲಗೊಂಡೆವು,'' ಎಂದು ಕೋಚ್‌ ರೀಡ್‌ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಉಜ್ಬೇಕಿಸ್ತಾನ ವಿರುದ್ಧ ಸೋಮವಾರ ಪೈಪೋಟಿ ನಡೆಸಲಿದೆ. ಉಜ್ಬೇಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಪೋಲೆಂಡ್‌ ಎದುರು 0-4 ಅಂತರದ ಸೋಲುಂಡಿತ್ತು. ಇದೀಗ ಪೋಲೆಂಡ್‌ ತಂಡ ರಷ್ಯಾ ವಿರುದ್ಧ ಸೆಣಸಲಿದೆ.

Story first published: Friday, June 7, 2019, 23:40 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X