ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ: ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಎದುರು ತಲೆಬಾಗಿದ ಭಾರತ

India go down fighting 2-3 to Australia in Champions Trophy hockey

ನವದೆಹಲಿ, ಜೂ. 27: ನೆದರ್ಲ್ಯಾಂಡ್ ನ ಬ್ರೆಡಾದಲ್ಲಿ ನಡೆದ ಪುರುಷರ ಫೆಡರೇಶನ್ ಇಂಟರ್ ನ್ಯಾಷನಲ್ ಹಾಕಿ (ಎಫ್ಐಎಚ್) ಚಾಂಪಿಯನ್ ಶಿಪ್ ಟ್ರೋಫಿಯ ಬುಧವಾರದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಭಾರತ ತಂಡ 2-3ರ ಸೋಲನುಭವಿಸಿದೆ.

ಕೊನೇ ಕ್ಷಣದಲ್ಲಿ ಗೋಲ್ ಸಿಡಿಸಿ ಜರ್ಮನಿಗೆ ಆಘಾತವಿತ್ತ ಕೊರಿಯಾಕೊನೇ ಕ್ಷಣದಲ್ಲಿ ಗೋಲ್ ಸಿಡಿಸಿ ಜರ್ಮನಿಗೆ ಆಘಾತವಿತ್ತ ಕೊರಿಯಾ

ಆಸ್ಟ್ರೇಲಿಯಾ ಈ ಪಂದ್ಯಲ್ಲಿ ಅಮೋಘ ಪ್ರದರ್ಶನ ನೀಡಿತು. ಪಂದ್ಯದ 6ನೇ ನಿಮಿಷದಲ್ಲಿ ಲ್ಯಾಚ್ಲಾನ್ ಶಾರ್ಪ್ ಸಿಡಿಸಿದ ಗೋಲ್, 15ನೇ ನಿಮಿಷದಲ್ಲಿ ಟಾಮ್ ಕ್ರೈಗ್ ನೀಡಿದ ಗೋಲ್ ಕೊಡುಗೆ ಮತ್ತು 33ನೇ ನಿಮಿಷದಲ್ಲಿ ಟ್ರೆಂಟ್ ಮಿಟ್ಟನ್ ಬಾರಿಸಿದ ಗೋಲ್ ನೆರವಿಂದ ಆಸ್ಟ್ರೇಲಿಯ ಗೆಲುವನ್ನಾಚರಿಸಿತು.

ಭಾರತವೂ ಗೆಲುವಿಗಾಗಿ ಸಾಕಷ್ಟು ಸೆಣಸಾಟ ನಡೆಸಿತು. ಭಾರತದ ವರುಣ್ ಕುಮಾರ್ 10ನೇ ನಿಮಿಷದಲ್ಲಿ ಗೋಲ್ ದಾಖಲಿಸಿ ತಂಡಕ್ಕೆ ಹುರುಪು ನೀಡಿದರು. ಅದಾಗಿ ಬಹಳ ಸಮಯ ಭಾರತ ಗೋಲ್ ಗಾಗಿ ಪರದಾಡಿತು. ಹರ್ಮನ್ ಪ್ರೀತ್ ಸಿಂಗ್ 58ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲ್ ಬಾರಿಸಿ ಆಸ್ಟ್ರೇಲಿಯಾ ನೀಡಿದ್ದ ಗೋಲ್ ಅಂತರವನ್ನು ಕಿರಿದುಗೊಳಿಸಿದರು.

ಆದರೆ ಪಂದ್ಯದುದ್ದಕ್ಕೂ ಭಾರತ ತಂಡ ವಿಶ್ವ ಚಾಂಪಿಯನ್ನರಿಗೆ ಪ್ರಬಲ ಪೈಪೋಟಿ ನೀಡಿದ್ದು ಗಮನ ಸೆಳೆಯಿತು. ಪಂದ್ಯದ ಅಂತ್ಯದವರೆಗೂ ಗೋಲ್ ಗಾಗಿ ಭಾರತದ ಆಟಗಾರರು ತೀವ್ರ ಸೆಣಸಾಟ ನಡೆಸಿದರು. ಆದರೆ ಅಂತಿಮವಾಗಿ ಭಾರತ ಸೋಲೊಪ್ಪಿಕೊಳ್ಳಬೇಕಾಯ್ತು. ನಾಳೆ (ಗುರುವಾರ) ಮುಂದಿನ ಸ್ಪರ್ಧೆಯಲ್ಲಿ ಭಾರತ ತಂಡ ಬೆಲ್ಜಿಯಂನ ಸವಾಲು ಸ್ವೀಕರಿಸಲಿದೆ.

Story first published: Wednesday, June 27, 2018, 23:18 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X