ಕಾಮನ್ ವೆಲ್ತ್ ಗೇಮ್ಸ್ : ಹಾಕಿ ತಂಡಕ್ಕೆ ಮನ್ ಪ್ರೀತ್ ನಾಯಕ

Posted By:
Manpreet to lead India, Sardar left out

ಬೆಂಗಳೂರು, ಮಾರ್ಚ್ 13: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ ಗೆ 18 ಸದಸ್ಯರ ಭಾರತ ಹಾಕಿ ತಂಡವನ್ನು ಪ್ರಕಟಿಸಲಿದ್ದಾರೆ. ಮಿಡ್ ಫೀಲ್ಡರ್ ಮನ್ ಪ್ರೀತ್ ಸಿಂಗ್ ಅವರನ್ನು ನಾಯಕರನ್ನಾಗಿ ಘೋಷಿಸಲಾಗಿದೆ. ಏಪ್ರಿಲ್ 4 ರಿಂದ 15ರ ತನಕ ಪಂದ್ಯಾವಳಿ ನಡೆಯಲಿದೆ.

ಇತ್ತೀಚೆಗೆ ಮುಕ್ತಾಯವಾದ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಮೆಂಟ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಸರ್ದಾರ್ ಸಿಂಗ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.

ಮಂಗಳವಾರ(ಮಾರ್ಚ್ 13) ದಂದು ಹಾಕಿ ಇಂಡಿಯಾ ಪ್ರಕಟಿಸಿರುವ ತಂಡದಲ್ಲಿ ಮನ್ ಪ್ರೀತ್ ನಾಯಕರಾಗಿದ್ದರೆ, ಚಿಂಗ್ಲೆಸಾನಾ ಸಿಂಗ್ ಕಂಗುಜ್ಮ್ ಉಪ ನಾಯಕರಾಗಿದ್ದಾರೆ. ಭಾರತ ತಂಡ ಇರುವ ಬಿ ಗುಂಪಿನಲ್ಲೇ ಪಾಕಿಸ್ತಾನ ತಂಡವೂ ಇದೆ. ಜತೆಗೆ ಮಲೇಷಿಯಾ, ವೇಲ್ಸ್ ಹಾಗೂ ಇಂಗ್ಲೆಂಡ್ ತಂಡಗಳಿವೆ.

ತಂಡ ಇಂತಿದೆ:
ಗೋಲ್ ಕೀಪರ್ಸ್
1. ಪಿ.ಆರ್ ಶ್ರೀಜೇಶ್
2. ಸೂರಜ್ ಕರ್ಕೆರಾ

ಡಿಫೆಂಡರ್ಸ್
3. ರೂಪಿಂದರ್ ಪಾಲ್ ಸಿಂಗ್
4. ಹರ್ಮನ್ ಪ್ರೀತ್ ಸಿಂಗ್
5. ವರುಣ್ ಕುಮಾರ್
6. ಕೊಥಜಿತ್ ಸಿಂಗ್ ಕಡಂಗ್ಬಮ್
7. ಗುರಿಂದರ್ ಸಿಂಗ್
8. ಅಮಿತ್ ರೋಹಿದಾಸ್

ಮಿಡ್ ಫೀಲ್ಡರ್ಸ್
9. ಮನ್ ಪ್ರೀತ್ ಸಿಂಗ್ (ನಾಯಕ)
10. ಚಿಂಗ್ಲೆಸಾನಾ ಸಿಂಗ್ ಕಂಗುಜುಮ್ (ಉಪ ನಾಯಕ)
11. ಸುಮಿತ್
12. ವಿವೇಕ್ ಸಾಗರ್ ಪ್ರಸಾದ್

ಫಾರ್ವಡ್
13. ಆಕಾಶ್ ದೀಪ್ ಸಿಂಗ್
14. ಸುನಿಲ್ ಸೋಮವಾರಪೇಟ್ ವಿಠಲಾಚಾರ್ಯ
15. ಗುರ್ಜಾಂತ್ ಸಿಂಗ್.
16. ಮನ್ದೀಪ್ ಸಿಂಗ್
17. ಲಲಿತ್ ಕುಮಾರ್ ಉಪಾಧ್ಯಾಯ್
18. ದಿಲ್ ಪ್ರೀತ್ ಸಿಂಗ್.

ಕನ್ನಡಿಗ ಎಸ್ ವಿ ಸುನೀಲ್, ಆಕಾಶ್ ದೀಪ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್ ರಂಥ ಹಿರಿಯ ಆಟಗಾರರ ಜತೆಗೆ ಸುಮೀತ್, ಸೂರಜ್ ಕರ್ಕೆರಾ ದಿಲ್ ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್ ರಂಥ ಹೊಸ ಆಟಗಾರರನ್ನುಳ್ಳ ತಂಡ ಇದಾಗಿದ್ದು, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತವಾಗಿದೆ.

Story first published: Tuesday, March 13, 2018, 14:13 [IST]
Other articles published on Mar 13, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ